/newsfirstlive-kannada/media/post_attachments/wp-content/uploads/2024/06/darshan41.jpg)
ರೇಣುಕಾಸ್ವಾಮಿ ಕೋಲೆ ಕೇಸ್ನಲ್ಲಿ ದರ್ಶನ್, ಪವಿತ್ರ ಗೌಡ ಸೇರಿ ಒಟ್ಟು 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಪವಿತ್ರಾ ಗೌಡಗೆ ಅಶ್ಲೀಲ ಫೋಟೋ ಕಳುಹಿಸಿದ್ದ ಎಂಬ ಕಾರಣಕ್ಕೆ ದರ್ಶನ್ ಅಂಡ್ ಗ್ಯಾಂಗ್ ಪಕ್ಕಾ ಪ್ಲಾನ್ ಮಾಡಿದ್ದರು. ಬಳಿಕ ಗೌಡ ಪ್ಲಾನ್ನಂತೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದರು. ಸದ್ಯ ಈ ಕೇಸ್ನಲ್ಲಿ A2 ದರ್ಶನ್ ಹಾಗೂ ಮೂವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದನ್ನೂ ಓದಿ:ಸಾಮಾನ್ಯ ಕೈದಿಗಳಂತೆ ಪರಪ್ಪನ ಅಗ್ರಹಾರ ಪಾಲಾದ D ಗ್ಯಾಂಗ್; ದರ್ಶನ್ಗೆ ಕೊಟ್ಟ ಕೈದಿ ನಂಬರ್ ಏನು?
ಅತ್ತ ನಟ ದರ್ಶನ್ ಜೈಲು ಸೇರುತ್ತಿದ್ದಂತೆ ಇತ್ತ ರೇಣುಕಾಸ್ವಾಮಿ ತಾಯಿ ನ್ಯೂಸ್ ಫಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಹೇಗೆ ನರಳಾಡಿ ಸತ್ತಿದ್ದಾನೋ ಹಾಗೇ ದರ್ಶನ್ ಹಾಗೂ ಪವಿತ್ರಾ ಗೌಡ ನರಳಾಡಬೇಕು ಅಂತ ಹೇಳಿದ್ದಾರೆ. ಈಗ ನನಗೆ ಸಮಾಧಾನ ಆಗಿದೆ. ನನ್ನ ಮಗನ ಆತ್ಮಕ್ಕೆ ಶಾಂತಿ ಸಿಗಬೇಕು ಅಂದ್ರೆ ಅವರಿಗೆ ಇನ್ನೂ ಅನುಭವಿಸಬೇಕು. ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿನ ಜೀವನದಲ್ಲಿ ಆಟ ಆಡಿದ ಪವಿತ್ರಾ ಗೌಡಳನ್ನು ಜೈಲಿನಿಂದ ಹೊರ ಬರುವುದಕ್ಕೆ ಬಿಡಬಾರದು. ನಾವು ಯಾಕಾದ್ರೂ ಆತನನ್ನು ಕೊಲೆ ಮಾಡಬಹುದಾಗಿತ್ತು ಅಲ್ವಾ ಎಂದು ಅವರು ಪಶ್ಚಾತ್ತಾಪ ಪಡಬೇಕು. ನಮಗೆ ಕಾನೂನಿನ ಮೇಲೆ ನಂಬಿಕೆ ಇದೆ. ಆರೋಪಿಗಳು ನರಕ ಅನುಭವಿಸಬೇಕು ಅಂತಹ ಶಿಕ್ಷೆ ಕೊಡಬೇಕು. ನನ್ನ ಮಗ ಎಷ್ಟೂ ಒದ್ದಾಡಿರಬಹುದು. ಇದನ್ನು ನೋಡಿದ ನನ್ನ ಸೊಸೆ ತುಂಬಾ ನೊಂದಿದ್ದಾಳೆ. ಅಷ್ಟೂ ಕ್ರೂರವಾಗಿ ಆತನನ್ನು ಹತ್ಯೆ ಮಾಡುವಂತ ಅವಶ್ಯಕತೆ ಇರಲಿಲ್ಲ. ಅವರಿಗೂ ಕೂಡ ಇದೇ ರೀತಿ ಆಗಬೇಕು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ