Advertisment

ಎಣ್ಣೆ ಅಮಲಿನಲ್ಲಿ CCTV ಮರೆತ ಆರೋಪಿಗಳು; ಕ್ಯಾಮೆರಾದಲ್ಲಿ ದರ್ಶನ್‌ ಹಲ್ಲೆ ಮಾಡಿದ್ದ ದೃಶ್ಯ ಸೆರೆ?

author-image
Veena Gangani
Updated On
ಎಣ್ಣೆ ಅಮಲಿನಲ್ಲಿ CCTV ಮರೆತ ಆರೋಪಿಗಳು; ಕ್ಯಾಮೆರಾದಲ್ಲಿ ದರ್ಶನ್‌ ಹಲ್ಲೆ ಮಾಡಿದ್ದ ದೃಶ್ಯ ಸೆರೆ?
Advertisment
  • ಮಾಲೀಕರು, ಗೋಡೌನ್ ಬಾಡಿಗೆಗೆ ಪಡೆದ ಬ್ಯಾಂಕ್​ನಿಂದ CCTV ಅಳವಡಿಕೆ
  • ಆರೋಪಿಗಳನ್ನು ಜೈಲಿಗೆ ಕಳುಹಿಸಲು ಸಾಕ್ಷಿ ನೀಡಿದ ಸಿಸಿಟಿವಿ ದೃಶ್ಯಗಳು
  • ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ತೀವ್ರ ತನಿಖೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಪವಿತ್ರಾ ಗ್ಯಾಂಗ್​ ಬಂಧನಕ್ಕೆ ಒಳಗಾಗಿದೆ. ಡೆಡ್ಲಿ ಮರ್ಡರ್‌ ಕೇಸ್‌ನ ತನಿಖೆಯಲ್ಲಿ ಸಾಕಷ್ಟು ಭಯಾನಕ ಸತ್ಯಗಳು ಒಂದೊಂದಾಗಿ ಆಚೆ ಬರುತ್ತಿದೆ. ರೇಣುಕಾಸ್ವಾಮಿ ಅವರ ಕೊಲೆಗೆ ಪವಿತ್ರಾಗೌಡ ಅವರಿಗೆ ಮಾಡಿದ ಕಮೆಂಟ್ ಹಾಗೂ ಅಶ್ಲೀಲ ಮೆಸೇಜ್ ಕಾರಣ ಎನ್ನಲಾಗುತ್ತಿದ್ದು, ಪೊಲೀಸರು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ.

Advertisment

publive-image

ಇದನ್ನೂ ಓದಿ: ದರ್ಶನ್​ ವಿರುದ್ಧ ಸ್ಟೇಟಸ್​ ಹಾಕಿದ್ದಕ್ಕೆ ನಿನ್ನನ್ನು ಜೀವಂತ ಸುಡುತ್ತೇವೆ ಎಂದ ಅಭಿಮಾನಿ! ಮುಂದೇನಾಯ್ತು ಗೊತ್ತಾ?

ಬೆಂಗಳೂರಿನ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ತೀವ್ರ ವಿಚಾರಣೆ ಶುರುವಾಗಿದೆ. ಆರೋಪ ಪ್ರಕರಣದಲ್ಲಿ ನಟ ದರ್ಶನ್​ರನ್ನು ಅರೆಸ್ಟ್ ಮಾಡಿದ್ದೇ ಒಂದು ರೋಚಕ ಕತೆಯಾಗಿದೆ. ನ್ಯೂಸ್​ ಫಸ್ಟ್​ಗೆ ಉನ್ನತ ಮೂಲಗಳಿಂದ ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಗೋಡೌನ್​ನಲ್ಲಿದೆ 7 ಸಿಸಿಟಿವಿ ಕ್ಯಾಮರಾಗಳು ಇವೆ. ಆ ಪೈಕಿ 2 ಕ್ಯಾಮರಾದಲ್ಲಿ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿರುವ ದೃಶ್ಯ ಸೆರೆಯಾಗಿದೆ ಎನ್ನಲಾಗಿದೆ.

ನಟ ದರ್ಶನ್, ಪವಿತ್ರ ಗೌಡ ಮತ್ತು ಯಾರೆಲ್ಲಾ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದಾರೆ ಅನ್ನೋ ಸತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಅಂತೆ. ಆದರೆ ಯುವಕನ್ನು ಹೇಗೆ ಕೊಲೆ ಮಾಡಬೇಕು ಅಂತಾ ಆರೋಪಿಗಳು ಸಖತ್​ ಪ್ಲಾನ್​ ಮಾಡಿಕೊಂಡಿದ್ದರು. ಆದರೆ ಎಣ್ಣೆಯ ಅಮಲಿನಲ್ಲಿದ್ದ ಆರೋಪಿಗಳು ಪಟ್ಟಣಗೆರೆ ಶೆಡ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇರುವುದನ್ನೇ ಮರೆತು ಬಿಟ್ಟಿದ್ದಾರೆ. ಗೋಡೌನ್​ ಅನ್ನು ತನ್ನ ಕಂಟ್ರೋಲ್​ನಲ್ಲಿ ಇಟ್ಟುಕೊಂಡಿದ್ದ ಆರೋಪಿ ವಿನಯ್ ಕೂಡ ಸಿಸಿಟಿವಿ ಇರುವುದನ್ನು ಮರೆತು ಬಿಟ್ಟಿದ್ದ. ಗೋಡೌನ್​ನ ಮಾಲೀಕರು ಮತ್ತು ಬಾಡಿಗೆಗೆ ಪಡೆದ ಬ್ಯಾಂಕ್​ನವರು ಸಿಸಿಟಿವಿ ಅಳವಡಿಕೆ ಮಾಡಿದ್ದರು. ಸದ್ಯ ಇದೇ ಸಿಸಿಟಿವಿ ದೃಶ್ಯಗಳು ನಟ ದರ್ಶನ್​ ಮತ್ತು ಅವರ ಗ್ಯಾಂಗ್​ ಅನ್ನು ಅರೆಸ್ಟ್ ಮಾಡಲು ಮಹತ್ವದ ಸಾಕ್ಷಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment