newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಕಣ್ಣೀರಿಟ್ಟ ಹೆತ್ತವರಿಗೆ ಸಿಎಂ ನ್ಯಾಯದ ಭರವಸೆ; ಏನಂದ್ರು?

Share :

Published June 26, 2024 at 6:11am

    ರೇಣುಕಾಸ್ವಾಮಿ ಕೊನೆಯ ದಿನ ಬಳಸಿದ್ದ ಬೈಕ್ ಪರಿಶೀಲಿಸಿ, ಮಹಜರ್

    ಜೂ.8ರಂದು ಏನೆಲ್ಲಾ ನಡೆದಿತ್ತು ಎಂದು ಪೊಲೀಸ್​ ಅಧಿಕಾರಿಗಳಿಂದ ವಿಚಾರಣೆ

    ಸಿಎಂ ಸಿದ್ದು ಭೇಟಿ ಮಾಡಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೇಣುಕಾಸ್ವಾಮಿ ಪೋಷಕರು

ರೇಣುಕಾಸ್ವಾಮಿ ಕೊಲೆ ಕೇಸ್‌ನ ತನಿಖೆ​ ಚಿತ್ರದುರ್ಗಕ್ಕೂ ವ್ಯಾಪಿಸಿದೆ. ಮೊಬೈಲ್ ಪತ್ತೆಗೆ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ. ನಿನ್ನೆ ಕೊಲೆಯಾದ ರೇಣುಕಾಸ್ವಾಮಿ ಕುಟುಂಬಸ್ಥರಿಂದ ಮಾಹಿತಿ ಪಡೆಯಲಾಗಿದೆ. ಫಾರ್ಮಸಿಯಲ್ಲೂ ವಿಚಾರಣೆ ನಡೆದಿದೆ. ಬೆಂಗಳೂರಿಗೆ ಆಗಮಿಸಿದ್ದ ರೇಣುಕಾಸ್ವಾಮಿ ಹೆತ್ತವರು, ಸಿಎಂ ಬಳಿ ನ್ಯಾಯಕ್ಕಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಇದನ್ನೂ ಓದಿ: ಕೊಲೆ ಕೇಸ್‌ಗೆ 10, 20 ಅಲ್ಲ ಬರೋಬ್ಬರಿ 50 ಸಿಸಿಟಿವಿಯಲ್ಲಿ ಸುಳಿವು.. ದರ್ಶನ್ ಗ್ಯಾಂಗ್‌ಗೆ ಹೊಸ ಆಪತ್ತು!

ಅಂದ್ಹಾಗೆ ಇಡೀ ಪ್ರಕರಣದ ಕೇಂದ್ರ ಬಿಂದುವೇ ಈ ಹತ್ಯೆಯಾದ ರೇಣುಕಾಸ್ವಾಮಿ. ಸದ್ಯ ರೇಣುಕಾಸ್ವಾಮಿ ಕೇಸ್​ನ ತನಿಖೆ ಚಿತ್ರದುರ್ಗಕ್ಕೂ ವ್ಯಾಪಿಸಿದೆ. ರೇಣುಕಾಸ್ವಾಮಿ ಮೊಬೈಲ್ ಪತ್ತೆಗೆ ಪೊಲೀಸರಿಂದ ತೀವ್ರ ಹುಡುಕಾಟ ನಡೀತಾನೇ ಇದೆ. ಕೋಟೆನಾಡು ಚಿತ್ರದುರ್ಗದಲ್ಲಿ ಹಲವು ಆಯಾಮಗಳಲ್ಲೂ ಕೊಲೆಯ ತನಿಖೆ ನಡೆಸಲಾಗ್ತಿದೆ. ರೇಣುಕಾಸ್ವಾಮಿ ಮನೆಗೂ ಭೇಟಿ ನೀಡಿ ಮೃತನ ತಂದೆ, ತಾಯಿ ಮತ್ತು ಪತ್ನಿಯಿಂದ ಸೆಕ್ಷನ್​​ 161 ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮೊದಲಿಗೆ ರೇಣುಕಾಸ್ವಾಮಿ ಕಿಡ್ನಾಪ್​​ಗೂ ಮುನ್ನ ಬಳಸಿದ್ದ ಬೈಕ್ ಪರಿಶೀಲನೆ ಜೊತೆಗೆ ಬೈಕ್​​ ನಿಲ್ಲಿಸಿದ್ದ ಸ್ಥಳದ ಮಹಜರು ಮಾಡಲಾಗಿದೆ. ಬಳಿಕ ರೇಣುಕಾಸ್ವಾಮಿ ಕುಟುಂಬದ ವಿಚಾರಣೆ ನಡೆಸಿದ ಪೊಲೀಸರು, ಜೂನ್​ 8ರಂದು ಏನೆಲ್ಲಾ ನಡೆದಿತ್ತು ಅಂತ ಕೇಳಿದ್ದಾರೆ. ಕೊನೆಯದಾಗಿ ಫೋನ್ ಮಾಡಿದ್ದು ಯಾವಾಗ? ಏನು ಹೇಳಿದ್ದ ಅಂತ ವಿಚಾರಿಸಿದ್ದಾರೆ.

ನಂತರ ಅಪೋಲೋ ಫಾರ್ಮಸಿಗೆ ತೆರಳಿದ ಪೊಲೀಸರು, ಅಲ್ಲಿ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಅಪೋಲೋ ಫಾರ್ಮಸಿಯಲ್ಲಿ ಈ ರೇಣುಕಾಸ್ವಾಮಿ ಸ್ಟಾಕ್ ನೋಡಿಕೊಳ್ತಿದ್ನಂತೆ. ಹಾಗಾಗಿ ಆತ ಇಲ್ಲಿಂದ ಎಲ್ಲೆಲ್ಲಿಗೆ ಔಷಧಿ ಡೆಲಿವರಿ ಕೊಡ್ತಿದ್ದ? ಆನ್​ಲೈನ್​ನಲ್ಲೂ ಡೆಲಿವರಿ ಮಾಡ್ತಿದ್ದನಾ? ಹೀಗೆ ಹತ್ತಾರು ಪ್ರಶ್ನೆಗಳಿಗೆ ಉತ್ತರ ಪಡೆದು 5 ಸಿಬ್ಬಂದಿಗಳ ಫೋನ್ ನಂಬರ್ ಸಂಗ್ರಹಿಸಿ ಪೊಲೀಸರು ತೆರಳಿದ್ದಾರೆ. ಅಲ್ಲದೆ, ರೇಣುಕ ಮೊಬೈಲ್‌​ನ‌ ಡೂಪ್ಲಿಕೇಟ್ ಸಿಮ್​ ಸಹ ಪಡೆದು ಬ್ಯಾಕಪ್​ ಪಡೆಯಲು ಮುಂದಾಗಿದ್ದಾರೆ. ಇನ್ನು, ವಿಚಾರಣೆ ನಡೆಸಿದ ಬಗ್ಗೆ ರೇಣುಕಾಸ್ವಾಮಿ ತಾಯಿ ರತ್ನಪ್ರಭಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದೇ ಮೊದಲ ತಪ್ಪು.. A4 ರಘು ಪತ್ನಿ ಸಹನಾ ಖಡಕ್‌ ಮಾತು; ಹೇಳಿದ್ದೇನು?

ಸಿಎಂ ಸಿದ್ದು ಭೇಟಿ ಮಾಡಿದ ರೇಣುಕಾಸ್ವಾಮಿ ಹೆತ್ತವರ ಕಣ್ಣೀರ ಕೋಡಿಯೇ ಹರಿದಿದೆ. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ ತಂದೆ-ತಾಯಿ ತಮಗೆ ನ್ಯಾಯ ಬೇಕು ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅದೆಷ್ಟೇ ಸಾಂತ್ವನ ಹೇಳಿದ್ರೂ ಹೆತ್ತವರ ಕಣ್ಣೀರಿಗೆ ಬೇಲಿ ಹಾಕಲಾಗಲಿಲ್ಲ. ಮನೆಗೆ ಆಶ್ರಯನಾಗಿದ್ದ ಮಗನೇ ಹೋಗಿದ್ದು, ಸೊಸೆಗೆ ಉದ್ಯೋಗ ಕೊಡಿ ಅಂತ ಮನವಿ ಇಟ್ಟಿದ್ದಾರೆ. ಈ ವೇಳೆ ಸಿಎಂ ಸಹ ಭರವಸೆ ನೀಡಿ ಧೈರ್ಯ ತುಂಬಿದ್ದಾರೆ. ಒಟ್ಟಾರೆ, ಬೆಂಗಳೂರಿನಲ್ಲಿ ಒಂದು ಹಂತದ ತನಿಖೆ ನಡಿತಿದ್ರೆ, ಇತ್ತ ಚಿತ್ರದುರ್ಗದಲ್ಲೂ ಸಾಕ್ಷಿ ಸಂಗ್ರಹ ಶುರುವಾಗಿದೆ. ಪೊಲೀಸರ ತನಿಖೆ ಮೇಲೆ ಇಡೀ ಕೇಸ್​ನ ಭವಿಷ್ಯ ನಿಂತಿದ್ದು, ಇಡೀ ರಾಜ್ಯವೇ ಕುತೂಹಲದಿಂದ ನೋಡ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಕಣ್ಣೀರಿಟ್ಟ ಹೆತ್ತವರಿಗೆ ಸಿಎಂ ನ್ಯಾಯದ ಭರವಸೆ; ಏನಂದ್ರು?

https://newsfirstlive.com/wp-content/uploads/2024/06/renukaswami10.jpg

Load More