Advertisment

ದರ್ಶನ್‌ ಗ್ಯಾಂಗ್‌ಗೆ ಬಿಗ್ ಶಾಕ್.. 17 ಆರೋಪಿಗಳ ಮೊಬೈಲ್‌ನಿಂದ ಕೊಲೆ ಕೇಸ್‌ಗೆ ರೋಚಕ ಟ್ವಿಸ್ಟ್; ಏನದು?

author-image
Veena Gangani
Updated On
ದರ್ಶನ್​​ಗೆ ಜಾಮೀನು ಬೆನ್ನಲ್ಲೇ ಮತ್ತೊಂದು ಗುಡ್​​ನ್ಯೂಸ್.. ಕೋರ್ಟ್​​ನಿಂದ ಸಿಹಿ ಸುದ್ದಿ
Advertisment
  • 140ಕ್ಕೂ ಅಧಿಕ ಸಾಕ್ಷ್ಯಗಳ ಸಂಗ್ರಹಿಸಿರೋ ಪೊಲೀಸ್​ ಇಲಾಖೆ
  • 17 ಆರೋಪಿಗಳ ಮೊಬೈಲ್ ವಶಕ್ಕೆ ಪಡೆದುಕೊಂಡ ಪೊಲೀಸರು
  • ನಟ ದರ್ಶನ್‌ಗೆ ಜಾಮೀನು ಕೊಡಿಸಲು ವಕೀಲರಿಂದ ಸಕಲ ಸಿದ್ಧತೆ

ಅತ್ತ ದರ್ಶನ್ ಜೈಲು ಸೇರಿದ್ದರೂ ಇತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಂದುವರಿದಿದೆ. ಎಲ್ಲಾ ಆರೋಪಿಗಳನ್ನ ಜೈಲಿಗಟ್ಟಿರೋ ಪೊಲೀಸರು ಟೆಕ್ನಿಕಲ್ ಎವಿಡೆನ್ಸ್‌ಗಳನ್ನ ಕಲೆಕ್ಟ್ ಮಾಡ್ತಿದ್ದಾರೆ. ಹಂತಕರ ಮೊಬೈಲ್‌ನಲ್ಲಿರೋ ಕೊಲೆ ರಹಸ್ಯವನ್ನ ಬೇಧಿಸಲು ಸಾಕ್ಷ್ಯಗಳನ್ನ ಕಲೆ ಹಾಕುತ್ತಿದ್ದಾರೆ. ದರ್ಶನ್ ಸೇರಿ ಎಲ್ಲಾ ಆರೋಪಿಗಳ ಮೊಬೈಲ್‌ನ ವಶಕ್ಕೆ ಪಡೆದು ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ.

Advertisment

publive-image

ಇದನ್ನೂ ಓದಿ:ದರ್ಶನ್ ಗ್ಯಾಂಗ್ ಜೈಲಲ್ಲಿ ಒಳಸಂಚು ರೂಪಿಸುತ್ತಾ.. ಕೋರ್ಟ್​ಗೆ ಪೊಲೀಸರು ಮತ್ತೆ ಮನವಿ ಮಾಡಿದ್ದೇನು?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡೆವಿಲ್ ಗ್ಯಾಂಗ್ ಪರಪ್ಪನ ಅಗ್ರಹಾರ ಪಾಲಾಗಿದೆ. 2ನೇ ಬಾರಿ ದರ್ಶನ್ ಸೆಂಟ್ರಲ್‌ ಜೈಲಿನ ವಾಸಕ್ಕೆ ಗುರಿಯಾಗಿದ್ದಾರೆ. ಈ ಮಧ್ಯೆ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಟೆಕ್ನಿಕಲ್ ಮಾಹಿತಿ ಕಲೆಹಾಕುವ ನಿಟ್ಟಿನಲ್ಲಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಭೀಕರ ಕೊಲೆ ಕೇಸ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮುದ್ದೆ ಮುರಿಯುತ್ತಿದೆ. ಇದೀಗ ಪ್ರಕರಣವನ್ನ ಮತ್ತಷ್ಟು ಸ್ಟ್ರಾಂಗ್ ಮಾಡಲು ಪೊಲೀಸರು ಸಾಕ್ಷ್ಯ್ಗಗಳನ್ನ ಕಲೆ ಹಾಕ್ತಿದ್ದಾರೆ. ಈಗಾಗಲೇ ನೂರಾರು ಸಾಕ್ಷ್ಯಗಳು ಪತ್ತೆಯಾಗಿದ್ದು, ಮುಂದಿನ ತನಿಖೆಗಾಗಿ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಮೊಬೈಲ್‌ಗಳನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಕ್ಷ್ಯಾಧಾರರ ಮೊಬೈಲ್ ರಿಟ್ರೀವ್ ಮಾಡಿ ಸಾಕ್ಷ್ಯ ಸಂಗ್ರಹಿಸಲು ಸಿದ್ಧತೆ ನಡೆಸಿದ್ದಾರೆ.

publive-image

ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ 140ಕ್ಕೂ ಅಧಿಕ ಸಾಕ್ಷ್ಯಗಳನ್ನ ಪೊಲೀಸ್ ಇಲಾಖೆ ಸಂಗ್ರಹಿಸಿದೆ. ಈಗಾಗಲೇ ಕಲೆ ಹಾಕಿರೋ ಟೆಕ್ನಿಕಲ್, ವೈಜ್ಞಾನಿಕ ಸಾಕ್ಷ್ಯಧಾರಗಳನ್ನ FSLಗೆ ಕಳುಹಿಸಿ ಪರಿಶೀಲನೆ ನಡೆಸಿದೆ. ಇನ್ನೂ ಮುಂದಿನ ತನಿಖೆಗಾಗಿ ದರ್ಶನ್ ಮೊಬೈಲ್‌ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ನ್ಯಾಯಾಲಯದಿಂದ ಅನುಮತಿ ಪಡೆದು ಮೊಬೈಲ್‌ನ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಧನರಾಜ್, ವಿನಯ್, ಪ್ರದೂಷ್ ಮೊಬೈಲ್‌ಗಳನ್ನೂ ಕೂಡಾ ವಶಕ್ಕೆ ಪಡೆಯಲಾಗಿದೆ. ಇನ್ನೂ ಕೊಲೆ ಬಳಿಕ ಮೋರಿಗೆ ಎಸೆದಿದ್ದ ರೇಣುಕಾಸ್ವಾಮಿ ಮೊಬೈಲ್ ಪತ್ತೆಯಾಗಿಲ್ಲ. ಹೀಗಾಗಿ ರೇಣುಕಾಸ್ವಾಮಿ ಹೆಸರಿನಲ್ಲಿ ಹೊಸ ಸಿಮ್ ಪಡೆದು ಡೇಟಾ ಕಲೆಕ್ಟ್‌ಗೆ ಪೊಲೀಸರು ತಯಾರಿ ನಡೆಸಿದ್ದಾರೆ.

Advertisment

ಇದೀಗ ವಶಕ್ಕೆ ಪಡೆದಿರೋ ಮೊಬೈಲ್‌ಗಳನ್ನ ರಿಟ್ರೀವ್ ಮಾಡಿ ಸಾಕ್ಷ್ಯಗಳನ್ನ ಪೊಲೀಸರು ಸಂಗ್ರಹಿಸಿದ್ದಾರೆ. ಅಲ್ಲದೇ ರೇಣುಕಾಸ್ವಾಮಿ ಕೊಲೆ ಬಳಿಕ ಆರೋಪಿಗಳು ತಮ್ಮ ಕರೆಗಳ ಡೇಟಾವನ್ನ ನಿಷ್ಕ್ರಿಯಗೊಳಿಸಿದ್ದಾರೆ. ಹೀಗಾಗಿ ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳ ಹೆಸರಲ್ಲಿ ಹೊಸ ಸಿಮ್ ಕಾರ್ಡ್​ ಖರೀದಿಗೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ತನಿಖೆಯ ವೇಳೆ ಆರೋಪಿಗಳು ವೆಬ್ ಆ್ಯಪ್ ಬಳಸಿರೋದು ಬೆಳಕಿಗೆ ಬಂದಿದೆ. ಈ ವೆಬ್ ಆ್ಯಪ್ ಮೂಲಕ ಮೊಬೈಲ್‌ನಲ್ಲಿನ ಎಲ್ಲಾ ಡಾಟಾವನ್ನ ನಿಷ್ಕ್ರಿಯಗೊಳಿಸಿದ್ದಾರೆ. ಇದೇ ಕಾರಣಕ್ಕೆ ಆರೋಪಿಗಳ ಹೆಸರಲ್ಲಿ ಸಿಮ್ ಖರೀದಿಗೆ ಕೋರ್ಟ್‌ ಅನುಮತಿ ಬೇಕಿದೆ. ನ್ಯಾಯಾಲಯದ ಅನುಮತಿ ಪಡೆದು ಪೊಲೀಸರಿಂದ ಸಿಮ್ ಖರೀದಿಗೆ ತಯಾರಿ ನಡೆದಿದೆ.

publive-image

ಸಿಮ್ ಕಾರ್ಡ್​ ರೀ ಆ್ಯಕ್ಸಿಸ್ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದು, ಮೊಬೈಲ್ ಡಾಟಾ, ಕರೆಗಳ ವಿನಿಮಯ ಪತ್ತೆಗೆ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಇನ್ನೂ ಎರಡನೇ ಆರೋಪಿ ದರ್ಶನ್‌ ಮನೆಯಲ್ಲಿ ಸಿಕ್ಕ ಹಣದ ಮೂಲದ ಬಗ್ಗೆ ಬಾಯ್ಬಿಟ್ಟಿದ್ದು, ದರ್ಶನ್ ಮಾಹಿತಿ ಮೇರೆಗೆ ಹಣ ನೀಡಿದವರ ವಿಚಾರಣೆಗೂ ತಯಾರಿ ನಡೆದಿದೆ. ಇನ್ನೂ, ಮೊನ್ನೆಯಷ್ಟೇ ಡೆವಿಲ್ ಗ್ಯಾಂಗ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿದೆ. ಇದೀಗ ದರ್ಶನ್‌ಗೆ ಜಾಮೀನು ಕೊಡಿಸಲು ಅವರ ಪರ ವಕೀಲರು ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಒಟ್ಟಾರೆ, ಮಾಡಿದ್ದುಣ್ಣೋ ಮಹರಾಯ ಅಂತ ದರ್ಶನ್ ಗ್ಯಾಂಗ್ ಈಗಾಗಲೇ ಕಂಬಿ ಹಿಂದೆ ಸೇರಿದೆ. ಇದೀಗ ತನಿಖೆ ಮುಂದುವರಿದಿದ್ದು, ಕೊಲೆ ಕೇಸ್‌ಗೆ ಅಗತ್ಯ ಸಾಕ್ಷ್ಯಗಳು ಸಿಕ್ರೆ ಕಠಿಣ ಶಿಕ್ಷೆ ಆಗೋದಂತೂ ಪಕ್ಕಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment