ರೇಣುಕಾಸ್ವಾಮಿ ಕೊಲೆ ಮಾಡಿದ್ದು ಅತ್ಯಂತ ಕ್ರೂರ.. ದರ್ಶನ್ ಗ್ಯಾಂಗ್‌ ಮೇಲೆ ಈಗ ಸಿಕ್ಕಾಪಟ್ಟೆ ಆಕ್ರೋಶ!

author-image
Veena Gangani
Updated On
ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲಿಗೆ ಶಿಫ್ಟ್​; ದರ್ಶನ್ ಬರೋ ಸುದ್ದಿ ತಿಳಿದು ಕೈದಿಗಳು ಖುಷ್.. ಯಾಕಿರಬಹುದು?
Advertisment
  • ಯಾರೂ ಊಹಿಸಲಾಗದಂತಹ ಕೊಲೆಯ ಅಸಲಿ ವಿಚಾರ ಕೇಳಿ ಜನತೆ ಶಾಕ್​
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿವೆ ಯುವಕನ ಫೋಟೋಸ್
  • ಸಿನಿಮಾದಲ್ಲಿ ಅಲ್ಲ ನಿಜ ಜೀವನದಲ್ಲಿ ದರ್ಶನ್​​ ವಿಲನ್​ ಅಂತ ನೆಟ್ಟಿಗರಿಂದ ಆಕ್ರೋಶ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ್ದ. ಹೀಗಾಗಿ ಇದೇ ಕೋಪದಲ್ಲಿ ದರ್ಶನ್​ ಮತ್ತು ಸಹಚರರು ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದು ಕೊಲೆ ಮಾಡಿದ್ದಾರೆ ಎಂಬ ಆರೋಪ ಇತ್ತು. ಇದೇ ಪ್ರಕರಣವನ್ನು ಕೈಗೆತ್ತಿಕೊಂಡ ಅನ್ನಪೂರ್ಣೇಶ್ವರಿ ನಗರ ಪೊಲೀಸರು​ ಈ ಕೊಲೆ ಹಿಂದಿನ ಅಸಲಿ ಸತ್ಯವನ್ನು ಬೆಳಕಿಗೆ ತಂದಿದ್ದಾರೆ. ಈ ಬಗ್ಗೆ ದಿನ ಕಳೆದಂತೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

publive-image

ಇದನ್ನೂ ಓದಿ: ಕಿವಿ ಕತ್ತರಿಸಿ, ಬೆನ್ನಿನ ಮೇಲೆ ಬಾಸುಂಡೆ.. ನಟ ದರ್ಶನ್‌ ಗ್ಯಾಂಗ್‌ ಕ್ರೂರಾತಿಕ್ರೂರ ಹಲ್ಲೆ; ಪಕ್ಕಾ ಸಾಕ್ಷಿಗಳು ಪತ್ತೆ!

ಇನ್ನು, ಈ ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಹೆಸರು ಹೇಳಿ ಬಂತೋ ಅಭಿಮಾನಿಗಳು ಸೇರಿದಂತೆ ಇಡೀ ಕನ್ನಡ ಚಿತ್ರರಂಗವೇ ಬೆಚ್ಚಿ ಬಿದ್ದಿದೆ. ಇನ್ನು, ಆರ್ ಆರ್ ನಗರ ಶೆಡ್ ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆ ಮಾಡಿದ ಬಳಿಕ ಆರೋಪಿಗಳು ರೇಣುಕಾಸ್ವಾಮಿ ಮೃತದೇಹವನ್ನು  ಸಮನಹಳ್ಳಿಯ ಮೋರಿಗೆ ಎಸೆದಿದ್ದರು. ಮುಂಜಾನೆ ಯುವಕನ ಮೃತದೇಹ ನೋಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ದರ್ಶನ್ ಅಂಡ್​ ಗ್ಯಾಂಗ್​ನ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಅದರ ಹಿಂದೆ ನಡೆದ ಕೊಲೆಯ ರಹಸ್ಯ ಒಂದೊಂದಾಗಿ ಮುನ್ನಲೆಗೆ ಬರುತ್ತಿದ್ದಂತೆ ಜನತೆ ದರ್ಶನ್​ ಅಂಡ್​ ಗ್ಯಾಂಗ್​ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

publive-image

ಇದನ್ನೂ ಓದಿ:ದರ್ಶನ್ ತಲೆಗೂದಲು ಟೆಸ್ಟ್‌.. ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ DNA ಪರೀಕ್ಷೆ; ಕಾರಣವೇನು?

ರೇಣುಕಾಸ್ವಾಮಿ ಮೇಲೆ ಡಿ ಗ್ಯಾಂಗ್ ಮನಸ್ಸಿಗ್ಗೆ ಬಂದ ರೀತಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಬೆನ್ನ ಮೇಲೆ ಬಾಸುಂಡೆ ಬರೋ ರೀತಿಯಲ್ಲಿ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಥಳಿಸಿದೆ. ಕಿವಿ ಕಟ್​ ಆಗಿದ್ದು, ಕೈ ಮೇಲೆ ಕರೆಂಟ್ ಶಾಕ್ ಕೊಟ್ಟು ಬಹಳ ಕ್ರೂರವಾಗಿ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪೊಲೀಸರ ಪರಿಶೀಲನೆ ಮಾಡೋ ವೇಳೆ ಬೆಳಕಿಗೆ ಬಂದಿವೆ. ದರ್ಶನ್​ ಅಂಡ್​ ಗ್ಯಾಂಗ್​​ ರೇಣುಕಾಸ್ವಾಮಿ ಮೇಲೆ ರಾಕ್ಷರಂತೆ ದುಷ್ಕೃತ್ಯ ಎಸಗಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

publive-image

ಇದೇ ಫೋಟೋ ನೋಡಿದ ನಾಡಿನ ಜನತೆ ಅಬ್ಬಬ್ಬಾ ಅದೇಷ್ಟೂ ಕ್ರೂರವಾಗಿ, ಚಿತ್ರಹಿಂಸೆ ಕೊಟ್ಟು ಆತನನ್ನು ಸಾಹಿಸಿದ್ದಾರೆ, ಇವರೆಲ್ಲಾ ಮನುಷ್ಯರೋ ಅಥವಾ ರಾಕ್ಷಸರೋ? ದರ್ಶನ್​ ಕ್ರೌರ್ಯಕ್ಕೆ ಇದೇ ಫೋಟೋಗಳೇ ಸಾಕ್ಷಿ, ಯಾರನ್ನು ಕೊಲೆ ಮಾಡುವ ಹಕ್ಕು ಇಲ್ಲ, ಸಿನಿಮಾದಲ್ಲಿ ಅಲ್ಲ ನಿಜ ಜೀವನದಲ್ಲಿ ನಟ ದರ್ಶನ್​​ ವಿಲನ್​ ಅಂತ ಕಾಮೆಂಟ್​ ಮಾಡುವ ಮೂಲಕ ಆಕ್ರೋಶ ಹೊರ ಹಾಕುತ್ತಿದ್ದಾರೆ. ಅದರಲ್ಲೂ ಇನ್ನೂ ಕೆಲವರು ದರ್ಶನ್​​ ಅಂಡ್​ ಗ್ಯಾಂಗ್​ಗೆ ಮರಣದಂಡನೆ ಶಿಕ್ಷೆ ನೀಡಿ, ಅಷ್ಟೂ ಕ್ರೂರವಾಗಿ ಯುವಕನ್ನು ಕೊಲೆ ಮಾಡಿದ್ದಾರೆ ಇವರಿಗೆಲ್ಲ ಶಿಕ್ಷೆ ಆಗಲೇಬೇಕು ಅಂತ ಕೆಂಡಾಮಂಡಲರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment