Advertisment

ನಟ ದರ್ಶನ್​ಗೂ ಮೊದಲೇ ಬೇಲ್​ಗೆ ಅಪ್ಲೇ ಮಾಡಿದ ಪವಿತ್ರಗೌಡ.. ಕೇಸ್​ಗೆ ಹೊಸ ಟ್ವಿಸ್ಟ್​​!

author-image
Bheemappa
Updated On
ಮೃತದೇಹ ವಿಲೇವಾರಿಗೆ ₹30 ಲಕ್ಷಕ್ಕೆ ಡೀಲ್​ ಒಪ್ಪಿಸಿದ್ದ ದರ್ಶನ್​.. ಆದ್ರೆ ಪ್ಲಾನ್ ಫೇಲ್ ಆಗಿದ್ದು ಎಲ್ಲಿ ಗೊತ್ತಾ?
Advertisment
  • ಅಪವಿತ್ರ ಕಾರ್ಯಕ್ಕೆ ಕಾರಣವಾದ ಎ1 ಆರೋಪಿ ಪವಿತ್ರಾ ಗೌಡ
  • ಅಗ್ರಹಾರದ ಜೈಲಿನ ಊಟಕ್ಕೂ ಒಗ್ಗಿಕೊಂಡಿರುವ ನಟ ದರ್ಶನ್
  • ಎಲ್ಲರಿಗಿಂತ ಮೊದಲು ಜಾಮೀನು ಅರ್ಜಿ ಹಾಕಿದ್ರಾ ಪವಿತ್ರಾಗೌಡ?

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಡೆವಿಲ್​ ಗ್ಯಾಂಗ್ ಜೈಲು ಸೇರಿ 75 ದಿನಗಳಾಗ್ತಿದೆ. ಆದ್ರೆ ಇದುವರೆಗೂ ಯಾರೂ ಕೂಡ ಬಿಡುಗಡೆ ಬಯಸಿ ​ಜಾಮೀನು ಸಲ್ಲಿಸಿಲ್ಲ. ಖುದ್ದು ದರ್ಶನ್​ ಕೂಡ ಬೇಲ್​ಗಾಗಿ ಅರ್ಜಿ ನೀಡಿಲ್ಲ. ಈ ನಡುವೆ ಪ್ರಕರಣದ ಕೇಂದ್ರ ಬಿಂದು ಪವಿತ್ರಾಗೌಡ ಎಲ್ಲರಿಗಿಂತ ಮೊದಲು ಬಿಡುಗಡೆ ಬಯಸಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

Advertisment

ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣದಲ್ಲಿ ನಟ ದರ್ಶನ್ ಌಂಡ್ ಗ್ಯಾಂಗ್ ಪರಪ್ಪನ ಮಡಿಲು ಸೇರಿದ್ದಾರೆ. ಡೆವಿಲ್​ ಗ್ಯಾಂಗ್​ನ ಸೆರೆಮನೆ ವಾಸ 60 ದಿನ ಪೂರೈಸಿ 75ನೇ ದಿನಕ್ಕೆ ಕಾಲಿಡ್ತಿದೆ. ಅತ್ತ ದರ್ಶನ್​ ಜೈಲುವಾಸಕ್ಕೆ ಒಗ್ಗಿಕೊಂಡ್ರೂ ಅಲ್ಲಿನ ಊಟ ಸೇರಲಾರದೇ ಮನೆ ಭೋಜನಕ್ಕೆ ಕೋರ್ಟ್​ಗೆ ಮನವಿ ಮಾಡಿ ಮಾಡಿ ಕೊನೆಗೆ ಆ ಊಟಕ್ಕೂ ತಮ್ಮನ್ನು ಒಗ್ಗಿಕೊಂಡಿದ್ದಾರೆ. ದರ್ಶನ್​ನಿಂದ ಹಿಡಿದು ಯಾವ ಆರೋಪಿಗೂ ಸದ್ಯಕ್ಕೆ ಬಿಡುಗಡೆ ಭಾಗ್ಯ ಸಿಗುವ ಲಕ್ಷಣವಿಲ್ಲ. ಈ ನಡುವೆ ಪ್ರಕರಣದ ಕೇಂದ್ರ ಬಿಂದು. ಅಪವಿತ್ರ ಕಾರ್ಯಕ್ಕೆ ಕಾರಣವಾದ ಎ1 ಪವಿತ್ರಾ ಗೌಡ ಜೈಲಿನಿಂದ ಮುಕ್ತಿ ಬಯಸಿದ್ದಾರೆ.

publive-image

ಪ್ರಕರಣದ ಎ1 ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ಸೇರಿ ಇತರೆ ಎಲ್ಲ ಆರೋಪಿಗಳು ಜೈಲು ಪಾಲಾಗುವಂತೆ ಮಾಡಿದ ಚೆಲುವೆ, ಕೆಡಿಲೇಡಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಿಂದ ಹೊರಬರಲು ಹಾತೊರೆಯುತ್ತಿದ್ದಾರೆ. ಇದುವರೆಗೆ ಐಷಾರಾಮಿ ಜೀವನ ನಡೆಸಿ ಈಗ ದಿಢೀರ್​ ಜೈಲು ವಾಸ ಮಾಡ್ತಿರೋದು ನರಕದಂತೆ ಭಾಸವಾಗ್ತಿದೆ. ಹೀಗಾಗಿ ಹೊರಬರಲು ಮನಸ್ಸು ತುಡಿಯುತ್ತಿದೆ. ಎಲ್ಲ 17 ಆರೋಪಿಗಳ ಪೈಕಿ ಪವಿತ್ರಾ ಗೌಡ ಮೊದಲಿಗರಾಗಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸರ್ಕಾರದ ಪರ ವಕೀಲರಿಗೆ ಕೋರ್ಟ್ ಸೂಚಿಸಿದೆ. ಆಗಸ್ಟ್‌ 22ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.

ಇದನ್ನೂ ಓದಿ:ಹೊಸ ಸಿನಿಮಾ ಸೆಟ್​ನಲ್ಲಿ ಯಶ್ ಜತೆ ಹೊಸ ಲುಕ್​ನಲ್ಲಿ ಶಿವಣ್ಣ; ಇಬ್ಬರ ಭೇಟಿ ಹಿಂದಿನ ಕಾರಣವೇನು?

Advertisment

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್​ ಌಂಡ್​ ಗ್ಯಾಂಗ್​ 75ನೇ ದಿನದತ್ತ ಕಾಲಿಟ್ಟಿದ್ದಾರೆ. ಆದ್ರೆ ಇದುವರೆಗೆ ಯಾರೂ ಕೂಡ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಈ ನಡುವೆ ಎಲ್ಲರಿಗಿಂತ ಮೊದಲಿಗರಾಗಿ ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment