newsfirstkannada.com

ರೇಣುಕಾಸ್ವಾಮಿ ಹತ್ಯೆಯ ತನಿಖೆ ಮತ್ತಷ್ಟು ಚುರುಕು.. ಇಂದು ಚಿತ್ರದುರ್ಗದತ್ತ ದರ್ಶನ್​ ಮತ್ತು ಗ್ಯಾಂಗ್​.. ಅಪ್ಡೇಟ್ಸ್ ಹೀಗಿದೆ

Share :

Published June 13, 2024 at 8:29am

Update June 13, 2024 at 8:30am

    ಇವತ್ತು ನಾಲ್ವರು ಹತ್ಯೆ ಆರೋಪಿಗಳಿಂದ ಸ್ಥಳ ಮಹಜರು

    ಎ3 ಆರೋಪಿ ಸಲಹೆ ಮೇರೆಗೆ ಕಿಡ್ನಾಪ್ ಮಾಡಿದ್ದ ರಾಘವೇಂದ್ರ

    ಹತ್ಯೆಯಾದ ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್

ಉಗುರಲ್ಲಿ ಹೋಗೋದಕ್ಕೆ ಕೊಡಲಿ ತಗೊಂಡ್ರು ಅನ್ನೋಂಗಾಗಿದೆ ನಟ ದರ್ಶನ್ ಕಥೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದಾಸ ಈಗ ಪೊಲೀಸರ ಅತಿಥಿ. ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಕಸ್ಟಡಿಯಲ್ಲಿರುವ ಡಿಬಾಸ್ ಅಂಡ್ ಗ್ಯಾಂಗ್​​​​ಗೆ ವಿಚಾರಣೆ ಶುರುವಾಗಿದೆ. ಇದೀಗ ರೇಣುಕಾಸ್ವಾಮಿಯನ್ನ ಕಿಡ್ನಾಪ್‌ ಮಾಡಿದ್ದ ಚಿತ್ರದುರ್ಗದಲ್ಲಿ ಸ್ಥಳ ಮಹಜರು ನಡೆಯಲಿದೆ. ಜೊತೆಗೆ ದರ್ಶನ್ ಅಂಡ್ ಗ್ಯಾಂಗ್ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಮೆಜೆಸ್ಟಿಕ್​ನಿಂದ ಕಷ್ಟಪಟ್ಟು ಮೇಲೆದ್ದು ಚಕ್ರವರ್ತಿಯಾಗಿ ಮೆರೆದಿದ್ದ ದಾಸನಿಗೆ ಹತ್ಯೆಯ ಕಳಂಕ ಮೆತ್ತಿಕೊಂಡಿದೆ. ಕನ್ನಡ ಚಿತ್ರರಂಗದಲ್ಲಿ ಹೊಳೆಯುವ ‘ಧ್ರುವ’ ನಕ್ಷತ್ರವಾಗಿದ್ದ ಕಾಟೇರನ ಬದುಕಿಗೆ ಕಾರ್ಮೋಡ ಆವರಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ ಅಂಡ್ ಪಟಾಲಂ ಜೈಲುವಾಸ ಅನುಭವಿಸ್ತಿದ್ದಾರೆ. ಜನಪ್ರಿಯ ನಟನಾಗಿ ಐಷಾರಾಮಿ ಬದುಕು ಸಾಗಿಸ್ತಿದ್ದ ನಟ ದರ್ಶನ್​ 6 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲೇ ಕಳೆಯಬೇಕಿದೆ. ಇದೀಗ ಕೊಲೆ ಕೇಸ್‌ನ ತನಿಖೆ ಮತ್ತಷ್ಟು ಚುರುಕಾಗಿದೆ.

ಕಿಡ್ನಾಪ್ ಮಾಡಿದ್ದ ಚಿತ್ರದುರ್ಗದಲ್ಲಿ ಸ್ಪಾಟ್ ವೆರಿಫಿಕೇಷನ್

ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನಾಪ್ ಮಾಡಿ ಕರೆತಂದು ಚಿತ್ರಹಿಂಸೆ ಕೊಟ್ಟು ದರ್ಶನ್ ಅಂಡ್ ಗ್ಯಾಂಗ್ ಕೊಂದು ಹಾಕಿದೆ. ಈ ಪ್ರಕರಣ ಚಿತ್ರದುರ್ಗದಿಂದ ಶುರುವಾಗಿದ್ದು, ಅಲ್ಲಿಗೆ ಹೋಗಿ ಸ್ಪಾಟ್ ವೆರಿಫಿಕೇಷನ್ ಮಾಡಲು ಪೊಲೀಸರು ಸಜ್ಜಾಗಿದ್ದಾರೆ. ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿದ್ದ ನಾಲ್ವರನ್ನ ಕರೆದೊಯ್ದು ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ.

ನಾಲ್ವರು ಆರೋಪಿಗಳನ್ನ ಕರೆದೊಯ್ಯಲಿರೋ ಪೊಲೀಸರು

ಹತ್ಯೆಯಾಗಿರೋ ರೇಣುಕಾಸ್ವಾಮಿಯನ್ನ ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ಆರೋಪಿಗಳು ಬೆಂಗಳೂರಿಗೆ ಕರೆತಂದಿದ್ರು. ಹೀಗಾಗಿ ಇವತ್ತು ಚಿತ್ರದುರ್ಗದಲ್ಲಿ ಆರೋಪಿಗಳಿಂದ ಸ್ಥಳ ಮಹಜರು ನಡೆಯಲಿದೆ. ನಾಲ್ವರು ಆರೋಪಿಗಳನ್ನ ಬೆಂಗಳೂರಿನಿಂದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಕರೆದೊಯ್ಯಲಿದ್ದು ಸ್ಪಾಟ್ ವೆರಿಫಿಕೇಷನ್ ಮಾಡಿಸಲಿದ್ದಾರೆ. ಎ3 ಆರೋಪಿಯ ಸಲಹೆ ಮೇರೆಗೆ ಕಿಡ್ನಾಪ್ ಮಾಡಿದ್ದ ರಾಘವೇಂದ್ರ, ಕಾರ್ತಿಕ್ , ನಂದಿಶ್, ಪವನ್‌ನಿಂದ ಕಾಮಾಕ್ಷಿ ಪಾಳ್ಯ ಪೊಲೀಸರು ಕಿಡ್ನಾಪ್ ಸ್ಥಳದಲ್ಲಿ ಮಹಜರು ಮಾಡಿಸಲಿದ್ದಾರೆ.

ಡೆವಿಲ್ ಗ್ಯಾಂಗ್‌ನಿಂದ ಹತ್ಯೆಯಾದ ರೇಣುಕಾಸ್ವಾಮಿ ಮನೆಗೆ ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಭೇಟಿ ನೀಡಿದ್ರು. ರೇಣುಕಾಸ್ವಾಮಿ ತಂದೆ ತಾಯಿ, ಪತ್ನಿಗೆ ಬಿಜೆಪಿ ಸಂಸದ ಸಾಂತ್ವಾನ ಹೇಳಿದ್ರು. ಇದೇ ವೇಳೆ ಮಾತನಾಡಿದ ಕಾರಜೋಳ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದು ಮನಸ್ಸಿಗೆ ಅಘಾತ ಆಯ್ತು. ಈ ಕೇಸ್‌ನಲ್ಲಿ ಯಾರೇ ಎಷ್ಟು ದೊಡ್ಡವರಿದ್ದರು ಅವರಿಗೆ ಶಿಕ್ಷೆಯಾಗಲೇಬೇಕು ಅಂತ ಆಗ್ರಹಿಸಿದ್ರು.

ರೇಣುಕಾಸ್ವಾಮಿ ಹತ್ಯೆಗೆ ಅಖಿಲ ಭಾರತ ವೀರಶೈವ ಮಹಾಸಭಾ ಭಾರೀ ಆಕ್ರೋಶ ಹೊರ ಹಾಕಿದೆ. ರೇಣುಕಾಸ್ವಾಮಿಯನ್ನ ಹತ್ಯೆ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯಿಸಿದೆ. ಈ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಅಂತ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಒಟ್ಟಾರೆ, ದರ್ಶನ್ ಅಂಡ್ ಗ್ಯಾಂಗ್ ಮಾಡಿರೋ ಹೀನಕೃತ್ಯಕ್ಕೆ ಎಲ್ಲೆಡೆ ಭಾರೀ ಆಕ್ರೋಶ ಕೇಳಿಬರ್ತಿದೆ.. ಇದೀಗ ಪೊಲೀಸರು ಪ್ರಕರಣದ ತನಿಖೆಯನ್ನ ಚುರುಕುಗೊಳಿಸಿದ್ದು, ಮತ್ತೇನೆಲ್ಲ ಸ್ಫೋಟಕ ಅಂಶಗಳು ಹೊರಬರುತ್ತೋ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಹತ್ಯೆಯ ತನಿಖೆ ಮತ್ತಷ್ಟು ಚುರುಕು.. ಇಂದು ಚಿತ್ರದುರ್ಗದತ್ತ ದರ್ಶನ್​ ಮತ್ತು ಗ್ಯಾಂಗ್​.. ಅಪ್ಡೇಟ್ಸ್ ಹೀಗಿದೆ

https://newsfirstlive.com/wp-content/uploads/2024/06/darshan11.jpg

Load More