ರೇಣುಕಾಸ್ವಾಮಿ ಕೇಸ್​ಗೆ ಮತ್ತೊಂದು ಟ್ವಿಸ್ಟ್​.. ದರ್ಶನ್​ ಗ್ಯಾಂಗ್​ನಲ್ಲಿ ಈ ಮೂವರ ಪಾತ್ರ ಇಲ್ಲವೇ ಇಲ್ಲ..?

author-image
Bheemappa
Updated On
ರೇಣುಕಾಸ್ವಾಮಿ ಕೇಸ್​ಗೆ ಮತ್ತೊಂದು ಟ್ವಿಸ್ಟ್​.. ದರ್ಶನ್​ ಗ್ಯಾಂಗ್​ನಲ್ಲಿ ಈ ಮೂವರ ಪಾತ್ರ ಇಲ್ಲವೇ ಇಲ್ಲ..?
Advertisment
  • ಕೇಸ್​ಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪಾತ್ರವೇನು? ​
  • ರೇಣುಕಾಸ್ವಾಮಿ ಕೇಸ್​ನ ಚಾರ್ಜ್​​ಶೀಟ್​ನಿಂದ ಸ್ಫೋಟಕ ಮಾಹಿತಿ?
  • ದರ್ಶನ್​ ಗ್ಯಾಂಗ್​ನ ಆ ಮೂವರು ಕೊಲೆಯಲ್ಲಿ ಭಾಗಿಯಾಗಿಲ್ವಾ..?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಗ್ಯಾಂಗ್​ನ ಮೂವರು ಆರೋಪಿಗಳು ಭಾಗಿಯಾಗಿಲ್ಲ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಜೈಲಲ್ಲಿ ದರ್ಶನ್ ಭೇಟಿ ಮಾಡಿದ್ದೇಕೆ? ಪೊಲೀಸರಿಗೆ ಸಿನಿಮಾ ಡೈಲಾಗ್ ಹೊಡೆದ ಚಿಕ್ಕಣ್ಣ; ಆಮೇಲೇನಾಯ್ತು?

ರೇಣುಕಾಸ್ವಾಮಿ ಕೇಸ್​ ತನಿಖೆ ನಡೆಸಿರುವ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಅದರಲ್ಲಿ ಆರೋಪಿಗಳಾದ ನಿಖಿಲ್ ನಾಯ್ಕ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಕೊಲೆಯಲ್ಲಿ ಭಾಗಿಯಾಗಿಲ್ಲ ಅನ್ನೋ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಮೂವರು ತಾವೇ ಕೊಲೆ ಮಾಡಿದ್ದಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು. ಮೃತದೇಹ ಸಾಗಾಟ ಹಾಗೂ ಶರಣಾಗತಿ ಆಗಲು ಮೂವರು ಒಟ್ಟಿಗೆ ಇದ್ದರು. ಆದರೆ ಕೊಲೆಯಲ್ಲಿ ಮೂವರ ಪಾತ್ರ ಏನೂ ಇಲ್ಲ ಎಂಬುವುದು ತನಿಖೆ ವೇಳೆ ತಿಳಿದುಬಂದಿದೆ ಎನ್ನಲಾಗಿದೆ.

ಇದನ್ನೂ ಓದಿ:ದರ್ಶನ್‌ ಕೈಗೆ ಸಿಗರೇಟ್ ಕೊಟ್ಟವರು ಯಾರು? ಜೈಲಿನ ಫೋಟೋ & ರಾಜಾತಿಥ್ಯದ ಸ್ಫೋಟಕ ಸತ್ಯ ಬಹಿರಂಗ

publive-image

ಚಾರ್ಜ್​​​ಶೀಟ್​​​ನಲ್ಲಿ 201 ಅಡಿ ಸಾಕ್ಷಿ ನಾಶ ಆರೋಪ ವಿದೆ. ಮೂವರ ವಿರುದ್ಧ ಸಾಕ್ಷ್ಯ ನಾಶ ಮಾಡಿದ ಆರೋಪ ಪ್ರಸ್ತಾಪ ಮಾಡಲಾಗಿದೆ. ನಿಖಿಲ್ ನಾಯ್ಕ್, ಕೇಶವಮೂರ್ತಿ, ಕಾರ್ತಿಕ್ ಮೇಲೆ ಈ ಕೇಸ್ ಇಲ್ಲ. ಸಾಕ್ಷಿ ನಾಶ ಹಾಗೂ ಪೊಲೀಸರಿಗೆ ಸುಳ್ಳು ಮಾಹಿತಿ ಆರೋಪ ಇರುವುದರಿಂದ ಇವರಿಗೆ ಬೇಗ ಜಾಮೀನು ಸಿಗಬಹುದು ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment