36 ಗಂಟೆಯಲ್ಲಿ ಗುಟ್ಟು ರಟ್ಟು.. ಆ ದಿನ ಕುಂತ್ರೂ, ನಿಂತ್ರೂ ಚಡಪಡಿಕೆ.. ದರ್ಶನ್ ತೊಳಲಾಟ, ನಾಟಕ..!

author-image
Ganesh
Updated On
ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ದರ್ಶನ್ ಗ್ಯಾಂಗ್‌ನಲ್ಲಿ ಮತ್ತೊಬ್ಬ ಅನಾಮಧೇಯ; ಸ್ಫೋಟಕ ಮಾಹಿತಿ ಇಲ್ಲಿದೆ
Advertisment
  • ಕೊಲೆ ಆದಾಗಿನಿಂದ ಬಂಧನದವರೆಗೂ ದರ್ಶನ್​ ಟೆನ್ಷನ್!
  • ಆ 36 ಗಂಟೆ ನಟ ದರ್ಶನ್ ಇದ್ದಿದ್ದು ಬರೀ ಗಾಬರಿಯಲ್ಲೇ
  • ಯಾವುದೇ ಪೋನ್ ಬಂದರೂ ದರ್ಶನ್ ಭಯದಲ್ಲೇ ಮಾತು

ಬೆಂಗಳೂರು: ಕೊಲೆ ಆದಾಗಿನಿಂದ ಬಂಧನದವರೆಗೂ ದರ್ಶನ್​ ಟೆನ್ಷನ್​​ನಲ್ಲಿಯೇ ಇದ್ದರು. ಯಾವುದೇ ಪೋನ್ ಬಂದರೂ ಭಯದಲ್ಲೇ ಮಾತನಾಡುತ್ತಿದ್ದರು. ಕೊಲೆ ಮಾಡಿದ್ದು ಗೊತ್ತಾಯಿತೇನೋ ಎನ್ನುವ ಆತಂಕ ಅವರಲ್ಲಿ ಕಾಡಿತ್ತು ಅನ್ನೋ ವಿಚಾರ ಇದೀಗ ಬೆಳಕಿಗೆ ಬಂದಿದೆ.

ರೇಣುಕಾಸ್ವಾಮಿ ಕೊಲೆ ಆಗುತ್ತಿದ್ದಂತೆಯೇ ದರ್ಶನ್ ಗಾಬರಿಗೆ ಒಳಗಾಗಿದ್ದರು. ಬರೋಬ್ಬರಿ 36 ಗಂಟೆಗಳ ಕಾಲ ಟೆನ್ಷನ್​​ನಲ್ಲಿದ್ದರಂತೆ. ಆದರೆ ತಮ್ಮ ಭಯ ತೋರಿಸಿಕೊಳ್ಳದೆ ಕಂಡವರ ಎದುರು ನಗುತ್ತಲೇ ಇದ್ದರು ಎನ್ನಲಾಗಿದೆ.

ಇದನ್ನೂ ಓದಿ:ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

publive-image

ಜೂನ್.8ರಂದು ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಕೊಲೆ ಆಗಿದೆ. ಜೂನ್ 11 ರಂದು ನಟ ದರ್ಶನ್​ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಂಧನಕ್ಕೂ ಮೊದಲು ಬಚಾವ್ ಆಗಿದ್ದ 36 ಗಂಟೆಗಳ ಕಾಲ ಗಾಬರಿಯಲ್ಲೇ ಇದ್ದರು. ಅದೇ ಭಯದಲ್ಲೇ ಬೆಂಗಳೂರಿನಿಂದ ಮೈಸೂರಿಗೆ ದರ್ಶನ್ ಟ್ರಾವೆಲ್ ಮಾಡಿದ್ದರು.

ಶೂಟಿಂಗ್ ನೆಪ ಮಾಡಿಕೊಂಡು ಮೈಸೂರಿಗೆ ಹೋಗಿದ್ದ ದರ್ಶನ್​ಗೆ ಯಾರದ್ದೇ ಬಂದರೂ ಭಯದಲ್ಲೇ ಮಾತನಾಡುತ್ತಿದ್ದರು. ಕೊಲೆಯ ರಹಸ್ಯ ಎಲ್ಲಿ ಹೊರ ಬಂತೇನೋ ಅನ್ನೋದೇ ಆತಂಕ ಶುರುವಾಗಿತ್ತು. ಆಪ್ತರು ಫೋನ್ ಮಾಡಿದರೂ ಆತಂಕ ತೋಡಿಕೊಳ್ಳಲಾಗದೆ ನಗುತ್ತಿದ್ದರು. ಅತ್ಯಾಪ್ತರ ಜೊತೆಗೂ ನಗು ನಗುತ್ತಲೇ ಮಾತನಾಡ್ತಿದ್ದರು. ಯಾರಿಗೂ ಅನುಮಾನ ಬಾರದಂತೆ ಮ್ಯಾನೇಜ್ ಮಾಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ದರ್ಶನ್‌ ನಡೆ ನುಡಿಯಲ್ಲಿ ಭಾರೀ ಬದಲಾವಣೆ.. ಕೊನೆಗೂ ಬಂತಾ ಬುದ್ಧಿ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment