/newsfirstlive-kannada/media/post_attachments/wp-content/uploads/2024/12/ANUKUMAR-1.jpg)
ರೇಣುಕಾಸ್ವಾಮಿ ಕೇಸ್​ನಲ್ಲಿ ಹೈಕೋರ್ಟ್​ 7 ಜನರಿಗೆ ಜಾಮೀನು ನೀಡಿದೆ. ಅದರಲ್ಲಿ ದರ್ಶನ್ ಪವಿತ್ರಾಗೌಡ, ದರ್ಶನ್ ಮ್ಯಾನೇಜರ್ ನಾಗರಾಜ್ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ ಶುಕ್ರವಾರ ಹೈಕೋರ್ಟ್ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿತ್ತು. ಈಗ 7 ಆರೋಪಿಗಳಲ್ಲಿ ಮತ್ತೊಬ್ಬ ಆರೋಪಿ ಅನುಕುಮಾರ್ ಕೂಡ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಬೇಲ್ ಶ್ಯೂರಿಟಿ ತಡವಾಗಿದ್ದರ ಹಿನ್ನೆಲೆಯಲ್ಲಿ ಅನುಕುಮಾರ್ ಬಿಡುಗಡೆ ವಿಳಂಬವಾಗಿತ್ತು. ಕೊನೆಗೆ ಇಂದು ಶ್ಯೂರಿಟಿ ಆಗಿದ್ದರಿಂದ ಇಂದು ಬಿಡಗಡೆ ಹೊಂದಿದ್ದಾನೆ. ಬಿಡುಗಡೆಯ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ಕೊಡದೇ ಅನುಕುಮಾರ್ ತನ್ನ ಸಹೋದರನ ಜೊತೆ ತೆರಳಿದ್ದಾನೆ.
ಇದನ್ನೂ ಓದಿ: ಜಾಮೀನು ಸಿಕ್ಕರೂ ಬಿಡುಗಡೆ ಇಲ್ಲ; A4 ಜಗದೀಶ್ ತಾಯಿ ಅಳಲು ಏನು..?
ಇನ್ನು ಕೊಲೆ ಆರೋಪಿ ಅನುಕುಮಾರ್ ಜೈಲಿನಿಂದ ಹೊರಬರುವಾಗ ಕೈಯಲ್ಲಿ ಭಗವದ್ಗೀತೆ ಪುಸ್ತಕ ಹಿಡಿದು ಆಚೆಗೆ ಬಂದಿದ್ದಾನೆ. ಜೈಲಿನಿಂದ ಆಚೆ ಬರುವಾಗ ಅನುಕುಮಾರ್ ಕೈಯಲ್ಲಿ ಭಗದ್ಗೀತೆ ಪುಸ್ತಕ ಕ್ಯಾಮರಾ ಕಣ್ಣುಗಳಿಗೆ ಕಾಣಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us