ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಚಾರ್ಜ್ಶೀಟ್ ಸಲ್ಲಿಕೆ
ಶೆಡ್ಗೆ ಬರುವ ಮೊದಲು ದರ್ಶನ್, ಪವಿತ್ರ ಎಲ್ಲಿದ್ದರು?
ವಿನಯ್ ಫೋನ್ ರಿಟ್ರೀವ್ ಮಾಡಿದಾಗ ಸಿಕ್ಕ ಮಾಹಿತಿ ಏನು?
ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಇಂದು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಚಾರ್ಜ್ಶೀಟ್ನಲ್ಲಿ ಏನೆಲ್ಲ ಉಲ್ಲೇಖ ಮಾಡಿದ್ದಾರೆ ಅನ್ನೋ ವಿವರಗಳು ಲಭ್ಯವಾಗಿದೆ.
ಚಾರ್ಜ್ಶೀಟ್ನಲ್ಲಿ ಜೂನ್ 9ರಂದು ನಡೆದ ಕ್ರೌರ್ಯದ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಕರೆ ತಂದಿರುವ ಬಗ್ಗೆ ದರ್ಶನ್ಗೆ ಆರೋಪಿ ವಿನಯ್ ಮಾಹಿತಿ ನೀಡಿದ್ದ. ಈ ವೇಳೆ ದರ್ಶನ್ ಖಾಸಗಿ ಹೋಟೆಲ್ ಸ್ಟೋನಿ ಬ್ರೂಕ್ನಲ್ಲಿ ಪಾರ್ಟಿ ಮಾಡುತ್ತಿದ್ದರು. ಆಮೇಲೆ ದರ್ಶನ್, ಪವಿತ್ರ ಗೌಡ ಜೊತೆ ಶೆಡ್ಗೆ ಬಂದಿದ್ದರು ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಶೆಡ್ಗೆ ಬರುತ್ತಿದ್ದಂತೆಯೇ ಕೋಪ
ಶೆಡ್ಗೆ ಬರುತ್ತಿದ್ದಂತೆಯೇ ದರ್ಶನ್ ರೇಣುಕಾಸ್ವಾಮಿ ಮೇಲೆ ಕೋಪಿಸಿಕೊಂಡಿದ್ದಾರೆ. ನೇರವಾಗಿ ರೇಣುಕಾಸ್ವಾಮಿ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಸಿನಿಮಾ ರೀತಿಯಲ್ಲಿ ಎತ್ತಿ, ಬಿಸಾಡಿ ತುಳಿದಿದ್ದಾರೆ. ಮೃಗೀಯ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾಗ ರೇಣುಕಾಸ್ವಾಮಿ ಕೈಮುಗಿದು ಬೇಡಿಕೊಂಡಿದ್ದಾರೆ. ಆಗ ಎರಡೂ ಕಾಲನ್ನು ಹಿಡಿದು ಇಬ್ಬರು ಮರ್ಮಾಂಗಕ್ಕೆ ಥಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ದರ್ಶನ್ ಕೇಸ್ಗೆ ಬಿಗ್ ಟ್ವಿಸ್ಟ್; 3991 ಪುಟಗಳ ಜಾರ್ಜ್ಶೀಟ್ ಇಂದೇ ಸಲ್ಲಿಕೆ..!
ಇನ್ನು ದರ್ಶನ್ ಅವರ ಕ್ರೌರ್ಯವನ್ನು ನೋಡುತ್ತ ಪವಿತ್ರಗೌಡ ನಿಂತಿದ್ದರು. ಆಕೆ ನೋಡ್ತಿರುವ ಸಿಸಿಟಿವಿ ದೃಶ್ಯಗಳು ಪೊಲೀಸ್ರಿಗೆ ಲಭ್ಯವಾಗಿದ್ದು, ಈ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದಾರೆ. ಏಕಕಾಲದಲ್ಲಿ ದರ್ಶನ್ ಅಂಡ್ ಗ್ಯಾಂಗ್ನ 10 ಆರೋಪಿಗಳು ದಾಳಿ ಮಾಡಿದ್ದಾರೆ. ನಂತರ ಪವಿತ್ರ ಗೌಡಳ ಕಾಲಿಗೆ ಬೀಳುವಂತೆ ರೇಣುಕಾಸ್ವಾಮಿಯನ್ನು ಬೀಸಾಡಿದ್ದರು. ಕಾಲು ಹಿಡಿಯಲು ಬಂದಾಗ ಪವಿತ್ರಗೌಡ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.
ಪವಿತ್ರ ಚಪ್ಪಲಿಯಲ್ಲಿ ಹೊಡೆಯುತ್ತಿದ್ದಂತೆ ಮತ್ತೆ ದರ್ಶನ್ ಕೋಪಿಸಿಕೊಂಡಿದ್ದಾರೆ. ಅದೇ ಚಪ್ಪಲಿ ತೆಗೆದುಕೊಂಡು ಹತ್ತಾರು ಬಾರಿ ದರ್ಶನ್ ಹಲ್ಲೆ ಮಾಡಿದ್ದಾರೆ. ಕೊನೆಗೆ ಪಕ್ಕದಲ್ಲಿ ನಿಂತಿದ್ದ ಗೂಡ್ಸ್ ಗಾಡಿಗೆ ರೇಣುಕಾಸ್ವಾಮಿಯನ್ನು ಎಸೆದು ಚಿತ್ರಹಿಂಸೆ ನೀಡಿದ್ದಾರೆ. ಆಗಲೂ ಕೂಡ ರೇಣುಕಾಸ್ವಾಮಿ ಕೈಮುಗಿದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದ ಎಂಬ ವಿಚಾರವನ್ನು ಆರೋಪಿಗಳು ಸ್ವ-ಇಚ್ಛಾ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ವಿನಯ್ ಫೋನ್ನಲ್ಲಿ ಫೋಟೋಸ್ ರಿಟ್ರೀವ್ ಆಗಿದೆ ಎಂದು ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಚಾರ್ಜ್ಶೀಟ್ನಲ್ಲಿದೆ ಒಂದಕ್ಕಿಂದ ಒಂದು ಇಂಟ್ರೆಸ್ಟಿಂಗ್ ಸಂಗತಿ.. ದರ್ಶನ್ಗೆ ಶುರುವಾಗಿದೆ ಭೀತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ