Advertisment

ರೇಣುಕಾಸ್ವಾಮಿ ಪ್ರಕರಣ; ದರ್ಶನ್ ಸೇರಿ 17 ಆರೋಪಿಗಳು ಕೋರ್ಟ್​ಗೆ ಹಾಜರ್

author-image
Gopal Kulkarni
Updated On
ರೇಣುಕಾಸ್ವಾಮಿ ಪ್ರಕರಣ; ದರ್ಶನ್ ಸೇರಿ 17 ಆರೋಪಿಗಳು ಕೋರ್ಟ್​ಗೆ ಹಾಜರ್
Advertisment
  • ದರ್ಶನ್​​​ ಗ್ಯಾಂಗ್​​ನಿಂದ ರೇಣುಕಾಸ್ವಾಮಿ ಕೊಲೆ ಕೇಸ್
  • ಕೋರ್ಟ್​ ವಿಚಾರಣೆಗೆ ಹಾಜರಾದ 17 ಆರೋಪಿಗಳು
  • ದರ್ಶನ್, ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳು ಹಾಜರು

ದರ್ಶನ್ ಗ್ಯಾಂಗ್​ನಿಂದ ರೇಣುಕಾಸ್ವಾಮಿ ಕೊಲೆ ಕೇಸ್ ಒಟ್ಟು 17 ಆರೋಪಿಗಳು ಒಂದು ಕೋರ್ಟ್​ಗೆ ವಿಚಾರಣೆಗೆ ಹಾಜರಾಗಿದ್ದಾರೆ. ದರ್ಶನ್, ಪವಿತ್ರಾಗೌಡ ಸೇರಿ ಎಲ್ಲಾ ಆರೋಪಿಗಳು 57ನೇ ಸಿಸಿಹೆಚ್​ ಕೋರ್ಟ್​ನಲ್ಲಿ ನಡೆಯಲಿರುವ ವಿಚಾರಣೆಗೆ ಹಾಜರಾಗಿದ್ದಾರೆ.

Advertisment

ಪ್ರತಿ ವಿಚಾರಣೆ ವೇಳೆ ಹಾಜರಾಗಲು ಹೈಕೋರ್ಟ್​ ಈಗಾಗಲೇ ಸೂಚಿಸಿದೆ. ಜಾಮೀನು ನೀಡುವಾಗ ಹಲವು ಷರುತ್ತಗಳನ್ನು ಹೈಕೋರ್ಟ್ ವಿಧಿಸಿತ್ತು. ಈ ಹಿನ್ನೆಲೆ ಇಂದು ಸೆಷನ್ಸ್ ಕೋರ್ಟ್​ಗೆ ಆರೋಪಿಗಳು ಹಾಜರಾಗಿದ್ದಾರೆ. ಗೈರಾದರೆ ಸೂಕ್ತ ಕಾರಣ ನೀಡಿ ವಿನಾಯಿತಿ ಕೋರಬೇಕಾಗಿದೆ.

ಇದನ್ನೂ ಓದಿ:ಡಿವೋರ್ಸ್​ ವದಂತಿಗೆ ಮೌನ ಮುರಿದ ಚಹಾಲ್; ದೊಡ್ಡ ಪೋಸ್ಟ್ ಹಾಕಿ ಬೇಸರ

ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ವಿಚಾರಣೆ ನಡೆಯಲಿದ್ದು ನ್ಯಾಯಧೀಶ ಜೈಶಂಕರ್ ಅವರಿಂದ ವಿಚಾರಣೆ ನಡೆಯಲಿದೆ. ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿ ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಆಚೆ ಇದ್ದಾರೆ. ಆದ್ರೆ ಸೂಚನೆ ಬಂದಾಗಲೆಲ್ಲಾ ವಿಚಾರಣೆಗೆ ಕೋರ್ಟ್​ಗೆ ಹಾಜರಾಗಬೇಕು ಎಂಬ ಷರತ್ತಿನನ್ವಯ ಹೈಕೋರ್ಟ್ ಜಾಮೀನು ನೀಡಿತ್ತು. ಅದರನ್ವಯ ಇಂದು 11 ಗಂಟೆಗೆ ದರ್ಶನ್ ಮತ್ತು ಗ್ಯಾಂಗ್ ಸೆಷನ್ಸ್​ ಕೋರ್ಟ್​ಗೆ ವಿಚಾರಣೆಗೆ ಹಾಜರಾಗಿದೆ. ಆರೋಪಿ 15 ಮತ್ತು 17ನೇ ಆರೋಪಿಗಳಿಗೆ ಶ್ಯೂರಿಟಿ ನೀಡಬೇಕು ಎಂದು ಕೋರ್ಟ್​ ಹೇಳಿದೆ ಮತ್ತು ಫೆಬ್ರುವರಿ 25ಕ್ಕೆ ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment