Advertisment

ಜಾಮೀನು ಸಿಕ್ಕರೂ ಪವಿತ್ರಗೌಡಗೆ ನಿರಾಸೆ.. ರಿಲೀಸ್ ಆಗೋದು ಯಾವಾಗ..?

author-image
Veena Gangani
Updated On
ಸುಬ್ಬ-ಸುಬ್ಬಿಗೆ ಬೇಲಾ? ಜೈಲಾ? ಇಂದು ನಟ ದರ್ಶನ್‌ಗೆ ನಿರ್ಣಾಯಕ ದಿನ; ಜಾಮೀನು ಸಿಗುತ್ತಾ?
Advertisment
  • ಕೋರ್ಟ್​ಗೆ ಎರಡು ದಿನ ರಜೆ, ಪೂರ್ಣಗೊಳ್ಳದ ಬೇಲ್​ ಪ್ರಕ್ರಿಯೆ
  • ಸೋಮವಾರದವರೆಗೂ ಕಾಯಬೇಕು ಪವಿತ್ರಾ ಗೌಡ​ ಗ್ಯಾಂಗ್​​
  • ನಟ ದರ್ಶನ್​​​ಗೆ ಷರತ್ತುಬದ್ಧ ಜಾಮೀನು ಕರುಣಿಸಿದ ಹೈಕೋರ್ಟ್​​​

ದರ್ಶನ್​ ಅಂಡ್ ಗ್ಯಾಂಗ್​​ಗೆ ಬಂಧ ಮುಕ್ತವಾಗ್ತಿದೆ. ನಿನ್ನೆ ದರ್ಶನ್​​ ಸೇರಿ ಒಟ್ಟು ಏಳು ಮಂದಿಗೆ ಬೇಲ್​​ ಸಿಕ್ಕಿದೆ. ಈಗಾಗಲೇ ಐವರು ಜೈಲಿನಿಂದ ರಿಲೀಸ್‌ ಆಗಿದ್ದು, ಒಟ್ಟು 12 ಜನ ರಿಲೀಫ್​ ಆಗಿದ್ದಾರೆ. ಆದ್ರೆ, ಇದೇ ಕೇಸ್​​ನ A3 ಪವನ್, A4 ರಾಘವೇಂದ್ರ, A5 ನಂದೀಶ್ A9 ಧನರಾಜ್, ಎ10 ವಿನಯ್‌ಗೆ ಇನ್ನೂ ಜಾಮೀನು ಸಿಕ್ಕಿಲ್ಲ. ದರ್ಶನ್​​​ ಬಿಟ್ಟು ಬೇಲ್​​ ಸಿಕ್ಕಂತ ಆರು ಜನ ಸೋಮವಾರ ರಿಲೀಸ್​​ ಆಗಲಿದ್ದಾರೆ.

Advertisment

publive-image

ರೇಣುಕಾಸ್ವಾಮಿ ಕೇಸ್​​​ನಲ್ಲಿ ಸೆರೆಯುಂಡ ದರ್ಶನ್ ಸೇರಿ ಆರು ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಕರುಣಿಸಿದೆ. ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್ ರೆಗ್ಯುಲರ್ ಬೇಲ್ ಮಂಜೂರು ಮಾಡಿದೆ. ಮಧ್ಯಂತರ ಜಾಮೀನಿನ ಮೇಲೆ ದರ್ಶನ್​​​ ಆಚೆ ಬಂದಿದ್ದಾರೆ. ಸದ್ಯ ಈ ಪವಿತ್ರಾಗೌಡ ಹಾಗೂ ಇನ್ನುಳಿದ ಐದು ಆರೋಪಿಗಳಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಬಹುತೇಕ ಡೌಟ್.

publive-image

ನಿನ್ನೆ ಶುಕ್ರವಾರ ಮಧ್ಯಾಹ್ನ ಬೇಲ್​​ ಮಂಜೂರಾಗಿದ್ದು, ಕೋರ್ಟ್​ ಪ್ರಕ್ರಿಯೆಗಳು ಸಂಪೂರ್ಣವಾಗಿಲ್ಲ. ಇನ್ನು, ಇವತ್ತು ಸೆಕೆಂಡ್​​​ ಸ್ಯಾಟರ್​​ಡೇ, ನಾಳೆ ಭಾನುವಾರ ಕೋರ್ಟ್​ಗೆ ರಜೆ ಇರಲಿದೆ. ಹೈಕೋರ್ಟ್​​​ ಜಾಮೀನು ಆದೇಶ ಪ್ರತಿಯನ್ನು ಕೆಳ ನ್ಯಾಯಾಲಯಕ್ಕೆ ನೀಡಬೇಕು. ಅದಾದ ಬಳಿಕ ಷರತ್ತುಗಳು ಪೂರ್ಣ ಆಗ್ಬೇಕು. ಬಳಿಕ ಕೆಳ ನ್ಯಾಯಾಲಯ ಆದೇಶದ ಪ್ರತಿ ನೀಡಲಿದೆ. ಆ ಪ್ರತಿ ಆರೋಪಿಗಳಿರುವ ಜೈಲಿಗೆ ರವಾನೆ ಆಗಲಿದೆ. ಹೀಗಾಗಿ ಪವಿತ್ರಾ ಸೇರಿ ಉಳಿದವರು ಸೋಮವಾರವೇ ಜೈಲಿಂದ ಮುಕ್ತವಾಗಲಿದ್ದಾರೆ. ಹೀಗಾಗಿ ಜಾಮೀನು ಸಿಕ್ಕರೂ ಪವಿತ್ರಗೌಡ ಗ್ಯಾಂಗ್ ನಿರಾಸೆ ಆಗಿದೆ.

publive-image

ಬೇಲ್​ಗೆ ಏನೆಲ್ಲಾ ಕಂಡೀಷನ್​?

1 ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ ಶ್ಯೂರಿಟಿ ಮೇಲೆ ಬೇಲ್​ ನೀಡಲು ಸಮ್ಮತಿಸಿದೆ.. ಪ್ರಕರಣದ ವಿಚಾರಣೆ ವೇಳೆ ಎಲ್ಲಾ ದಿನವೂ ಹಾಜರಾಗಬೇಕು.. ಪರೋಕ್ಷ, ಪ್ರತ್ಯಕ್ಷವಾಗಿ ಸಾಕ್ಷಿ‌ಗಳ ಮೇಲೆ ಪ್ರಭಾವ ಬೀರಬಾರದು.. ಇದೇ ತರಹದ ಬೇರೆ ಯಾವುದೇ ಅಪರಾಧವನ್ನ ಮಾಡಬಾರದು.. ಅಧೀನ ಕೋರ್ಟ್ ಅನುಮತಿ ಇಲ್ಲದೇ ಹೊರಹೋಗಬಾರದು ಅಂತ ಷರತ್ತು ವಿಧಿಸಿದೆ. ಈ ನಡುವೆ, ಷರತ್ತುಬದ್ಧ ಜಾಮೀನು ಕರುಣಿಸಿದ ಹೈಕೋರ್ಟ್​​​, ಪ್ರಕರಣದಲ್ಲಿ ಕೆಲ ವಿಷಯಗಳನ್ನ ಸೂಕ್ಷ್ಮವಾಗಿ ಗಮನಿಸಿದ್ದು, ಕೆಲ ಆಧಾರದ ಮೇಲೆ ಬೇಲ್ ನೀಡಿದೆ.

Advertisment

publive-image

ದರ್ಶನ್ ಕ್ರಿಮಿನಲ್ ಪೂರ್ವಪರತೆಯ ಹೊಂದಿಲ್ಲ. ಈಗಾಗಲೇ 6 ತಿಂಗಳು ಜೈಲುವಾಸ ಅನುಭವಿಸಿದ್ದಾರೆ. ಪ್ರಕರಣದಲ್ಲಿ 262 ಸಾಕ್ಷಿಗಳಿದ್ದು, ಟ್ರಯಲ್ ನಡೆಸಲು ತುಂಬಾ ಸಮಯವಾಗಲಿದೆ. ಅಲ್ಲದೆ, ಪೊಲೀಸರು ಆರೋಪಿಗಳನ್ನ ಬಂಧಿಸುವಾಗ ಗ್ರೌಂಡ್ಸ್ ಆಫ್ ಅರೆಸ್ಟ್ ರೂಲ್ಸ್ ಫಾಲೋ ಮಾಡಿಲ್ಲ ಅನ್ನೋದನ್ನ ಹೈಕೋರ್ಟ್​​ ಹೇಳ್ತಿದೆ. ಅಲ್ಲದೆ, ಆರೋಪಿಗಳ ರಿಮ್ಯಾಂಡ್ ಕೋರುವ ವೇಳೆ ನಿಯಮ ಪಾಲಿಸಿಲ್ಲ. ಈ ಆಧಾರದ ಮೇಲೆ ಹೈಕೋರ್ಟ್​ನಿಂದ ಜಾಮೀನು ನೀಡಿದೆ ಅಂತ ಗೊತ್ತಾಗಿದೆ.

ಈ ಮಧ್ಯೆ ಪ್ರಾಸಿಕ್ಯೂಷನ್ ಸುಪ್ರೀಂಕೋರ್ಟ್​ಗೆ ಕರೆದೊಯ್ಯಲಾಗುತ್ತಾ ಅನ್ನೋ ಪ್ರಶ್ನೆ ಇದೆ. ದರ್ಶನ್ ಜಾಮೀನು‌ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸ್ತಾರಾ? ಗೊತ್ತಿಲ್ಲ. ಕಾರಣ ಮಧ್ಯಂತರ ಜಾಮೀನು ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಲು ಸರ್ಕಾರ, ತಿಂಗಳ ಕಾಲ ಕಾಲಹರಣ ಮಾಡಿದೆ. ಹೀಗಾಗಿ ರೆಗ್ಯೂಲರ್ ಜಾಮೀನನ್ನ ಪ್ರಶ್ನೆ ‌ಮಾಡುತ್ತಾ ಸರ್ಕಾರ ಅನ್ನೋ ಪ್ರಶ್ನೆ ಎದ್ದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment