ದರ್ಶನ್​ಗೆ ಯಾಕೆ ಸಿಕ್ಕಿಲ್ಲ ಬೇಲ್​? ಜಾಮೀನು ನಿರಾಕರಿಸಲು ಇದೇನಾ ಕಾರಣ!

author-image
AS Harshith
Updated On
ದರ್ಶನ್​ಗೆ ಯಾಕೆ ಸಿಕ್ಕಿಲ್ಲ ಬೇಲ್​? ಜಾಮೀನು ನಿರಾಕರಿಸಲು ಇದೇನಾ ಕಾರಣ! 
Advertisment
  • ಜಾಮೀನು ನಿರೀಕ್ಷೆಯಲ್ಲಿ ದರ್ಶನ್‌ಗೆ ಬಿಗ್ ಶಾಕ್‌ ಕೊಟ್ಟ ಕೋರ್ಟ್​
  • ಜೈಲಿನಲ್ಲಿ ಬಳಲಿ ಬೆಂಡಾಗಿರುವ ದರ್ಶನ್‌ಗೆ ಮತ್ತೆ ನಿರಾಸೆ
  • ವಾದ-ಪ್ರತಿವಾದ ಹೇಗಿತ್ತು? ಹೈಲೆಟ್ಸ್​ ಆಗಿದ್ದ ಅಂಶಗಳು ಯಾವುವು?

ಜಾಮೀನು ಸಿಕ್ಕೇ ಸಿಗುತ್ತೆ ಜೈಲಿನಿಂದ ರಿಲೀಸ್‌ ಆಗೇ ಆಗ್ತೀನಿ ಅಂತಾ ಬಳ್ಳಾರಿ ಜೈಲಿನಲ್ಲಿ ಕನಸು ಕಾಣ್ತಿದ್ದ ದರ್ಶನ್‌ಗೆ ಮತ್ತೆ ಜೈಲೇ ಗತಿಯಾಗಿದೆ. ದರ್ಶನ್‌ ಪರ ಅದೆಷ್ಟೇ ಪ್ರಬಲವಾಗಿ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಿದ್ರೂ ದರ್ಶನ್‌ ಜಾಮೀನನ್ನ ಕೋರ್ಟ್‌ ನಿರಾಕರಿಸಿ ಶಾಕ್ ಕೊಟ್ಟಿದೆ. ಅಷ್ಟಕ್ಕೂ ದರ್ಶನ್‌ಗೆ ಕೋರ್ಟ್‌ ಜಾಮೀನು ನಿರಾಕರಿಸಲು ಕಾರಣವೇನು ಅನ್ನೋದನ್ನ ನೋಡೋಣ ಬನ್ನಿ.

ಬಳ್ಳಾರಿಯಲ್ಲಿ ಜೈಲು ಹಕ್ಕಿಯಾಗಿರುವ ದರ್ಶನ್​​ ನಿನ್ನೆ ಜಾಮೀನು ಸಿಗುತ್ತೆ ಅಂತ ಅದೆಷ್ಟು ಖುಷಿಯಾಗಿದ್ದರೋ ಗೊತ್ತಿಲ್ಲ. ಆದರೆ, ಖುಷಿ ಕ್ಷಣ ಹಾಗೆಯೇ ಕಮರಿ ಹೋಗಿದೆ. ಜೈಲಿನಲ್ಲಿ ಬಳಲಿ ಬೆಂಡಾಗಿರೋ ದರ್ಶನ್‌ಗೆ ಮತ್ತೆ ನಿರಾಸೆಯ ಕಾರ್ಮೋಡ ಕವಿದಿದೆ.

ಇದನ್ನೂ ಓದಿ: ಜಾಮೀನಿಗಾಗಿ ದರ್ಶನ್​ ಮತ್ತೆ ಸರ್ಕಸ್​! ಮುಂದಿರೋ ಆಯ್ಕೆಗಳು ಬರೀ ಮೂರು! ಸಿಗುತ್ತಾ ಬೇಲು?

publive-image

ಜೈಲಿನಲ್ಲಿಯೇ ಇನ್ಮುಂದೆ ‘ದಾಸ’ನ ಸೆರೆವಾಸ ಫಿಕ್ಸ್‌

ವಾದ -ಪ್ರತಿವಾದ ಮುಗಿದಿತ್ತು. ನಿನ್ನೆ ಆದೇಶವನ್ನ ಪ್ರಕಟಿಸಿರೋ ನ್ಯಾಯಾಲಯ ದರ್ಶನ್‌ಗೆ ಜಾಮೀನು ಕೋಡೋದನ್ನ ನಿರಾಕರಿಸಿದೆ. ಹಾಗಿದ್ರೆ, ದರ್ಶನ್‌ ಜಾಮೀನು ನಿರಾಕರಿಸಲು ಕೋರ್ಟ್‌ ಪರಿಗಣಿಸಿರೋ ಅಂಶಗಳೇನು ಅನ್ನೋದನ್ನ ನೋಡೋವುದಾದ್ರೆ.

ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ತಡವಾಗಿ ಸಾಕ್ಷಿ ದಾಖಲು ಮಾಡಲಾಗಿದೆ
ನ್ಯಾಯಾಧೀಶರು : ಕೇಸ್‌ ಡೈರಿ ಪ್ರಕಾರ ಕಾನೂನಿನ ಪ್ರಕಾರ ರೆಕಾರ್ಡ್‌ ಆಗಿದೆ
ಸಿ.ವಿ.ನಾಗೇಶ್, ದರ್ಶನ್​​ ಪರ ವಕೀಲರು : ತಡವಾಗಿ ಮರಣೋತ್ತರ ಪರೀಕ್ಷೆ ಆಗಿದೆ
ನ್ಯಾಯಾಧೀಶರು : ಮೃತ ವ್ಯಕ್ತಿಯ ಗುರುತು ಪತ್ತೆಯಾಗದ ಕಾರಣ ವಿಳಂಬವಾಗಿದೆ
ಸಿ.ವಿ.ನಾಗೇಶ್​, ದರ್ಶನ್​​ ಪರ ವಕೀಲರು : ತನಿಖೆಯಲ್ಲಿ ಸಾಕಷ್ಟು ಲ್ಯಾಪ್ಸ್​ ಆಗಿವೆ.
ನ್ಯಾಯಾಧೀಶ : ತನಿಖಾಧಿಕಾರಿ ಕ್ರಾಸ್ ಎಕ್ಸಾಮಿನೇಷನ್ ವೇಳೆ ಪತ್ತೆ ಮಾಡಬಹುದು.. ಈಗ ಅಲ್ಲ
ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ಸಾಕ್ಷಿಗಳ ರಿಕವರಿ ತಡವಾಗಿದೆ
ನ್ಯಾಯಾಧೀಶರು : ಅದು ಕೇಸ್​​​ನ ವಿಚಾರಣೆ ವೇಳೆ ಪ್ರಶ್ನಿಸಬಹುದು
ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ಐವಿಟ್ನೇಸ್ ಹೇಳಿಕೆಯಲ್ಲಿ ಸಾಕಷ್ಟು ಗೊಂದಲ ಇದೆ
ನ್ಯಾಯಾಧೀಶರು : ಕೇವಲ ಐವಿಟ್ನೇಸ್ ಹೇಳಿಕೆಯಲ್ಲಿ ಲೋಪ ಮಾತ್ರ ಗ್ರೌಂಡ್ ಅಲ್ಲ, ದರ್ಶಶ್ ವಿರುದ್ದ ಸಿಡಿಆರ್ ಸ್ಥಳದಲ್ಲೇ ಇದ್ದ ಅಂತಾ ಹೇಳ್ತಿದೆ
ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ದರ್ಶನ್ ಬಟ್ಟೆ ತೊಳೆದಿದ್ದಾರೆ,‌ ಡಿಎನ್ಎ ಪತ್ತೆ ಹೇಗೆ ಸಾಧ್ಯ?
ನ್ಯಾಯಾಧೀಶರು : ದರ್ಶನ್ ಕೃತ್ಯದಲ್ಲಿ ಭಾಗಿಯ ಬಗ್ಗೆ ಡಿಎನ್ಎ ಪ್ರೂವ್​ ಮಾಡ್ತಿದೆ
ಸಿ.ವಿ.ನಾಗೇಶ್​​, ದರ್ಶನ್​​ ಪರ ವಕೀಲರು : ಹೇಳಿಕೆಯಲ್ಲಿ ಲೋಪಗಳಿದ್ದು, ವಿಳಂಬ ದಾಖಲಾಗಿದೆ
ನ್ಯಾಯಾಧೀಶರು : ಹೇಳಿಕೆಯಲ್ಲಿ ಲೋಪ ಇದೆ ಅಂತ ಅದನ್ನೇ ಪರಿಗಣಿಸಲು ಸಾಧ್ಯವಿಲ್ಲ, ಹೇಳಿಕೆ ತಡವಾಗಿದ್ರೂ ಅದರ ಅಂಶಗಳ ಅಲ್ಲಗಳೆಯಲು ಸಾಧ್ಯವಿಲ್ಲ

ಇದನ್ನೂ ಓದಿ: ದೀಪಾವಳಿಗೆ ಭರ್ಜರಿ ಗಿಫ್ಟ್​; ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತಾ ಸ್ಪೆಷಲ್​ ಬೋನಸ್​​?

ಒಟ್ಟಿನಲ್ಲಿ ಜಾಮೀನು ನಿರೀಕ್ಷೆಯಲ್ಲಿ ಆರೋಪಿ ದರ್ಶನ್‌ಗಂತೂ ಜೈಲು ಖಾಯಂ ಆಗಿದೆ. ಕೋರ್ಟ್‌ನಲ್ಲಿ ದರ್ಶನ್ ಪರ ವಕೀಲ ಅಷ್ಟು ಪ್ರಬಲವಾಗಿ ವಾದ ಮಾಡಿದ್ರೂ ಬೇಲ್ ಮಾತ್ರ ಸಿಕ್ಕಿಲ್ಲ. ದರ್ಶನ್ ಪರ ವಕೀಲರು ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದನ್ನ ನೋಡ್ಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment