Advertisment

ನಟ ದರ್ಶನ್​ ಮೀಟ್​ ಮಾಡಿಸ್ತೀನಿ.. ಆರೋಪಿ ರಾಘವೇಂದ್ರನ ಪ್ಲಾನ್​ಗೆ ರೇಣುಕಾಸ್ವಾಮಿ ಬಲಿಯಾದ್ರಾ?

author-image
AS Harshith
Updated On
ರೇಣುಕಾಸ್ವಾಮಿ ಕೊಲೆ ಆಗಿದ್ದು ಹೇಗೆ? ಕೊನೆಗೂ ಸತ್ಯ ಬಾಯ್ಬಿಟ್ಟ ಆರೋಪಿಗಳು; A1, A2, A3 ಹೇಳಿದ್ದೇನು?
Advertisment
  • ಅಭಿಮಾನದ ಆಸೆಗೆ ಕರೆದೊಯ್ದು ಜೀವ ತೆಗೆದರೇ?
  • ದರ್ಶನ್​ ನೋಡುವ ತವಕದಲ್ಲಿ ಕಾರು ಹತ್ತಿದ್ರಾ ರೇಣುಕಾಸ್ವಾಮಿ?
  • ರಾಘವೇಂದ್ರನ ಜೊತೆಗೆ ಉಳಿದ ಆರೋಪಿಗಳು ಲಾಕ್​ ಆಗಿದ್ದು ಹೇಗೆ?

ಕನ್ನಡ ಸಿನಿಮಾ ರಂಗದ ಪ್ರಖ್ಯಾತ ನಟ ದರ್ಶನ್​ ಕೊಲೆ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಜೊತೆಗೆ ನಟಿ ಪವಿತ್ರ ಗೌಡ ಕೂಡ ಮರ್ಡರ್​ ಹತ್ಯೆಗೆ ಸಂಬಂಧಿಸಿ ಠಾಣೆಯಲ್ಲಿ ದಿನದೂಡುವ ಪ್ರಸಂಗ ಬಂದಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಆತನನ್ನು ಕೊಲೆ ಮಾಡಿದ್ದರು. ಕೊನೆಗೆ ನಂತರ ಸುಮನಹಳ್ಳಿ ಎಂಬ ಮೋರಿಯಲ್ಲಿ ಬಿಸಾಕಿದ್ದಾರೆ. ಇದೀಗ ನಟ, ನಟಿ ಸೇರಿ ಆತನ ಗ್ಯಾಂಗನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisment

publive-image

ಅಭಿಮಾನದ ಹೆಸರಲ್ಲಿ ಜೀವ ತೆಗೆದ್ರ ಆರೋಪಿಗಳು?

ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿ ಸಾಕಷ್ಟು ಸಾಕ್ಷ್ಯಧಾರಗಳು ಸಿಗುತ್ತಿವೆ. ಅದರಲ್ಲಿ ಆರೋಪಿಗಳು ಹಂತ ಹಂತವಾಗಿ ಪ್ಲಾನ್​ ಮಾಡಿ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಬಾಡಿಗೆ ಕಾರು ಮಾಡಿ ಕರೆದುಕೊಂಡು ಬಂದು ಆತನನ್ನು ಹತ್ಯೆ ಮಾಡಿದ್ದಾರೆ. ಆದರೆ ರೇಣುಕಾಸ್ವಾಮಿ ಹತ್ಯೆಗೆ ಅಭಿಮಾನದ ಹೆಸರು ಬಳಸಿದ್ರಾ ಎಂಬ ಅನುಮಾನ ಹುಟ್ಟಿಕೊಂಡಿದೆ.

ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ನಟ ದರ್ಶನನ್ನು ಮೀಟ್ ಮಾಡಿಸುತ್ತೇನೆ ಎಂದು ಆಸೆ ತೋರಿಸಿ ರೇಣುಕಾಸ್ವಾಮಿಯನ್ನು  ಕರೆದುಕೊಂಡು ಬಂದಿರಬೇಕು ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ, ಇದರ ಜೊತೆಗೆ ಉಳಿದವರು ಸಹ ನೆಚ್ಚಿನ ನಟನ ಮೀಟ್ ಮಾಡಿಸ್ತೀನಿ ಎಂದು ಹೇಳಿ ಅವರನ್ನು ಸಹ ಕರೆದುಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.

publive-image

ಇದನ್ನೂ ಓದಿ: ದರ್ಶನ್ ಮತ್ತು ಗ್ಯಾಂಗ್ ವಿರುದ್ದ ಸದ್ಯ ಸಿಕ್ಕಿರುವ ಎವಿಡೆನ್ಸ್​ಗಳಿಷ್ಟು! ಇದರಿಂದ ತಪ್ಪಿಸಿಕೊಳ್ಳೋಕೆ ಸಾಧ್ಯನೇ ಇಲ್ಲ

Advertisment

ಅಂದಹಾಗೆಯೇ ಚಿತ್ರದುರ್ಗದ ಆರೋಪಿಗಳು ದರ್ಶನನ್ನು ಮೀಟ್ ಮಾಡೋ ಆಸೆ ತೋರಿಸಿ ಲಾಕ್ ಆಗಿದ್ದಾರೆ ಎನ್ನಲಾಗುತ್ತಿದೆ. ಕೆಲ ಗೆಳೆಯರ ಬಳಿ ದರ್ಶನ್ ಮೀಟ್ ಮಾಡಿಸುತ್ತೇನೆ ಬನ್ನಿ ಎಂದು ರಾಘವೇಂದ್ರ ಹೇಳಿದ್ದಾರೆ. ಹೀಗಾಗಿ ಇದೇ ಖುಷಿಯಲ್ಲಿ ಬಂದ ಆರೋಪಿಗಳು ಲಾಕ್ ಆಗಿದ್ದಾರೆ ಎನ್ನಲಾಗುತ್ತಿದೆ.

publive-image

ಇದನ್ನೂ ಓದಿ: ದರ್ಶನ್​ ಹತ್ರ ಪರಿಹಾರ ಕೇಳೋಕೆ ಹೋದ್ರೆ ನಾಯಿ ಛೂ ಬಿಟ್ರು.. ಕಾಟೇರನ ಕರಾಳ ಮುಖ ಬಿಚ್ಚಿಟ್ಟ ಕೂಲಿ ಕಾರ್ಮಿಕ

ಸದ್ಯ ಈ ಬಗ್ಗೆ ಸಹ ತನಿಖೆ ನಡೆಯುತ್ತಿದೆ. ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನನ್ನು ತನಿಖೆ ನಡೆಸುತ್ತಿದ್ದಾರೆ. ಅಚ್ಚರಿ ಸಂಗತಿ ಎಂದರೆ ಇದರಲ್ಲಿ ಬಾಡಿಗೆ ಕಾರು ಮತ್ತು ಕಾರು ಚಾಲಕ ಸಹ ಈ ಕೊಲೆ ಕೇಸ್​ನಲ್ಲಿ ಲಾಕ್​​ ಆಗಿರೋದು ವಿಪರ್ಯಾಸ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment