/newsfirstlive-kannada/media/post_attachments/wp-content/uploads/2024/10/Renukaswamy-father.jpg)
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಇತ್ತ ಮಧ್ಯಂತರ ಜಾಮೀನು ಸಿಕ್ಕಿದ್ದು, ಅತ್ತ ರೇಣುಕಾಸ್ವಾಮಿ ಕುಟುಂಬಸ್ಥರು ಮನೆ ದೇವರ ಮೊರೆ ಹೋಗಿದ್ದಾರೆ. ಕುರುವತ್ತಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದಾರೆ.
ಮಗ ರೇಣುಕಾಸ್ವಾಮಿ ಕೊಲೆ ಕೇಸ್ನಿಂದ ನೊಂದಿದ್ದ ಕುಟುಂಬ ಮನಶಾಂತಿಗಾಗಿ ಹಾವೇರಿ ಜಿಲ್ಲೆಯ ಕುರುವತ್ತಿ ಬಸವೇಶ್ವರ ದೇವಾಲಯಕ್ಕೆ ತೆರಳಿದ್ದಾರೆ. ತಂದೆ ಶಿವನಗೌಡರ್, ತಾಯಿ ರತ್ನಪ್ರಭ, ಮಗಳು ಸುಚೇತ ಅವರು ದೇವರ ದರ್ಶನಕ್ಕೆ ಹೋಗಿದ್ದಾರೆ.
ರೇಣುಕಾಸ್ವಾಮಿ ಕೊಲೆಯ ಬಳಿಕ 6 ತಿಂಗಳಿಂದ ಕುಟುಂಬ ನೊಂದಿತ್ತು. ಇದ್ದ ಒಬ್ಬ ಮಗನನ್ನು ಹಂತಕರು ಕೊಲೆ ಮಾಡಿದ್ದು, ಇದರಿಂದ ಆಘಾತಕ್ಕೆ ಒಳಗಾಗಿತ್ತು. ಆದರಿಂದು ದರ್ಶನ್ಗೆ ಮಧ್ಯಂತರ ಜಾಮೀನಿನ ತೀರ್ಪಿನ ಸಮಯದಲ್ಲಿ ಮಾನಸಿಕ ನೆಮ್ಮದಿಗಾಗಿ ರೇಣುಕಾಸ್ವಾಮಿ ಕುಟುಂಬ ಮನೆ ದೇವರ ದರ್ಶನಕ್ಕೆ ತೆರಳಿದೆ.
ಮೆಡಿಕಲ್ ಜಾಮೀನು
ಬಳ್ಳಾರಿಯಲ್ಲಿ 63 ದಿನಗಳನ್ನು ಕಳೆದ ದರ್ಶನ್ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ದರ್ಶನ್ ಪರ ವಕೀಲರು ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿತ್ತು. ಕೊನೆಗೆ ವೈದ್ಯರ ವರದಿ ಆಲಿಸಿದ ಕೋರ್ಟ್ ಮಧ್ಯಂತರ ಜಾಮೀನಿ ನೀಡಿದೆ. 6 ವಾರಗಳ ಕಾಲ ಚಿಕಿತ್ಸೆಗಾಗಿ ಮೆಡಿಕಲ್ ಜಾಮೀನು ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ