newsfirstkannada.com

ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಕದ್ದಿರೋದು ಈತ! ವಿಚಾರಣೆ ವೇಳೆ ಕೊನೆಗೂ ಸಿಕ್ಕಿಬಿದ್ದ ನೋಡಿ

Share :

Published June 17, 2024 at 11:18am

Update June 17, 2024 at 11:21am

  ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್

  ರೇಣುಕಾಸ್ವಾಮಿ ಹತ್ಯೆ ಬಳಿಕ ಮೈಮೇಲಿದ್ದ ಗೋಲ್ಡ್​ ಕಾಣೆಯಾಗಿತ್ತು

  ವಿಚಾರಣೆ ವೇಳೆ ಸಿಕ್ಕಿಬಿದ್ದ.. ಕಳ್ಳ ಯಾರು ಗೊತ್ತಾ? ಇವನೇ ನೋಡಿ

ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರವಾಗಿ ಪೊಲೀಸರು ನಿನ್ನೆ ಚಿತ್ರದುರ್ಗದಲ್ಲಿರುವ ಆರೋಪಿಗಳ ಮನೆಯಲ್ಲಿ ಸ್ಥಳ ಮಹಜರ್ ನಡೆಸಿದ್ದರು. ಆರೋಪಿ ರಘು, ಜಗ್ಗ, ಅನು, ರವಿ ಮನೆಯಲ್ಲಿ ಶೋಧ ನಡೆಸಿದ್ದರು.

ಸ್ಥಳ ಮಹಜರ್ ವೇಳೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರ್, ಆಟೋ, ಮೊಬೈಲ್ ಗಳು ಸೀಜ್ ಮಾಡಲಾಗಿದೆ. ರಘು ಅಲಿಯಾಸ್​ ರಾಘವೇಂದ್ರ ಮನೆಯಲ್ಲಿ 10 ಲಕ್ಷ ಕ್ಯಾಶ್, ಒಂದು ಚೈನ್, ಒಂದು ರಿಂಗ್, ಬೆಳ್ಳಿ ಕರಡಗ, ವಾಚ್ ರಿಕವರಿ ಮಾಡಲಾಗಿದೆ.

ಇದನ್ನೂ ಓದಿ: ಗುಟ್ಕಾ ತಂದುಕೊಟ್ಟಿಲ್ಲ ಎಂದು ಬಾಲಕಿಯ ಭೀಕರ ಹತ್ಯೆ.. ಗೋಣಿ ಚೀಲದಲ್ಲಿ ಸುತ್ತಿ ಪಾಳುಬಿದ್ದ ಮನೆಯಲ್ಲೆಸೆದ ಮೆಕ್ಯಾನಿಕ್

ರೇಣುಕಾಸ್ವಾಮಿ ಕೊಲೆ ಬೆನ್ನಲ್ಲೇ ಆರೋಪಿ ರಘ ಆತನ ಮೈಮೇಲಿದ್ದ ಒಡವೆ ಕೂಡಾ ಎಗರಿಸಿದ್ದಾನೆ. ಮಾತ್ರವಲ್ಲದೆ, ನಟ ದರ್ಶನ್ ಕೊಟ್ಟ 10 ಲಕ್ಷ ಹಣ ತಂದು ಹೆಂಡ್ತಿಗೆ ಕೊಟ್ಟಿದ್ದಾನೆ. ದರ್ಶನ್​ ಕೊಟ್ಟ ಹಣವನ್ನು ರಘ ತನ್ನ ಹೆಂಡತಿಯನ್ನು ಬೆಂಗಳೂರಿಗೆ ಕರೆಸಿ ಪತ್ನಿ ಸಹನಗೆ ಕೊಟ್ಟು ಕಳಿಸಿದ್ದಾನೆ.

ಇದನ್ನೂ ಓದಿ: ಇಂದು ದರ್ಶನ್​​ರನ್ನು ಮೈಸೂರಿಗೆ ಕರೆದೊಯ್ಯಲಿದ್ದಾರೆ ಪೊಲೀಸರು! ಮತ್ತೊಂದು ಎವಿಡೆನ್ಸ್​ ಸಿಕ್ತಾ?

ಇತ್ತ ರವಿ ಮನೆಯಲ್ಲಿ ಕೃತ್ಯಕ್ಕೆ ಬಳಸಿದ್ದ ಆಟೋ ವಶ, ಕಾರ್ ಬಾಡಿಗೆ ಕೊಟ್ಟ ಹಣ ಕೂಡಾ ಜಪ್ತಿ ಮಾಡಲಾಗಿದೆ. 4 ಸಾವಿರ ಕಾರಿನ ಬಾಡಿಗೆ ಹಣ ಕೂಡಾ ಪೊಲೀಸರು ಸೀಜ್ ಮಾಡಿದ್ದಾರೆ. ಆರೋಪಿ ಜಗ್ಗನ ಮನೆಯಲ್ಲಿ ಆಟೋ, ಮೊಬೈಲ್ ಸೀಜ್ & ಬಟ್ಟೆ ಸೀಜ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್‌ಗೆ ಸ್ನೇಹಿತರಾಗಿ ಏನ್‌ ಹೇಳ್ತೀರಾ ಅಂದ್ರೆ ಕಿಚ್ಚ ಸುದೀಪ್‌ ಏನಂದ್ರು ಗೊತ್ತಾ?- ವಿಡಿಯೋ!

ಇನ್ನು ಆರೋಪಿ ಅನು ಮನೆಯಲ್ಲಿ ಪೊಲೀಸರು ಆತನ ಮೊಬೈಲ್, ಬಟ್ಟೆ ಸೀಜ್ ಮಾಡಿದ್ದಾರೆ. ಸದ್ಯ ಪೊಲೀಸರು ಚಿತ್ರದುರ್ಗದಲ್ಲೇ ಇದ್ದು, ಇಂದು ಕೂಡಾ ತನಿಖೆ ಮುಂದುವರೆಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನವನ್ನು ಕದ್ದಿರೋದು ಈತ! ವಿಚಾರಣೆ ವೇಳೆ ಕೊನೆಗೂ ಸಿಕ್ಕಿಬಿದ್ದ ನೋಡಿ

https://newsfirstlive.com/wp-content/uploads/2024/06/darshan8.jpg

Load More