newsfirstkannada.com

×

ಅಲ್ಲಿ ಕೋರ್ಟ್​ ಆದೇಶ ನೀಡಿತ್ತು.. ಇಲ್ಲಿ ತಾಯಿ ಅಂತ್ಯಕ್ರಿಯೆ ಮುಗಿದಿತ್ತು; ಅಮ್ಮನ ನೋಡೋ ಭಾಗ್ಯ ರಘುಗೆ ಇರಲಿಲ್ವಾ?

Share :

Published July 20, 2024 at 7:08pm

    ಹೋಗಲ್ಲ ಎನ್ನುವುದನ್ನ ರೈಟಿಂಗ್​ನಲ್ಲಿ ಬರೆಸಿಕೊಂಡ ಜೈಲು ಸಿಬ್ಬಂದಿ

    ಜೈಲಿನಿಂದ ಮಗ ಬಂದು ಮುಖ ನೋಡ್ತಾನೆ ಎಂದು ಕಾದಿದ್ದ ಕುಟುಂಬ

    ಜೋಗಿಮಟ್ಟಿ ರುದ್ರಭೂಮಿಯಲ್ಲಿ ತಾಯಿಯ ಅಂತ್ಯಕ್ರಿಯೆ ಮುಕ್ತಾಯ

ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿರುವ A4 ಆರೋಪಿ ರಾಘವೇಂದ್ರ ಮುಖ ನೋಡುವುದಕ್ಕಿಂತ ಮೊದಲೇ ಅವರ ತಾಯಿ ಮಂಜುಳಮ್ಮ ಅಂತ್ಯಕ್ರಿಯೆ ಮಾಡಲಾಗಿದೆ. ಕೋರ್ಟ್ ಆದೇಶಕ್ಕೂ ಮುಂಚೆನೇ ತಾಯಿಯ ಅಂತ್ಯಕ್ರಿಯೆ ಮಾಡಿದ್ದರಿಂದ ಜೈಲಿನಲ್ಲೇ ರಾಘವೇಂದ್ರನ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: ಬೆಂಕಿ, ಹಿಂಸಾಚಾರ, ಕರ್ಫ್ಯೂ.. ಬಾಂಗ್ಲಾದೇಶದಲ್ಲಿ ಸಾವಿರಾರು ಭಾರತೀಯ ವಿದ್ಯಾರ್ಥಿಗಳಿಗೆ ದೊಡ್ಡ ಅಪಾಯ!

ಚಿತ್ರದುರ್ಗದ ಜೋಗಿಮಟ್ಟಿಯ ರುದ್ರಭೂಮಿಯಲ್ಲಿ ಮಂಜುಳಮ್ಮ ಅವರ ಅಂತ್ಯಕ್ರಿಯೆ ಮಾಡಲಾಗಿದೆ. ನಿಮ್ಮ ತಾಯಿಯ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಜೈಲಾಧಿಕಾರಿಗಳು ರಘುಗೆ ಹೇಳುತ್ತಿದ್ದಂತೆ ಅವರ ಆಕ್ರಂದನ ಹೇಳತೀರದಾಗಿದೆ. ಕೊನೆ ಘಳಿಗೆಯಲ್ಲಿ ತಾಯಿಯ ಮುಖ ನೋಡಲಾಗಲಿಲ್ಲ ಎಂದು ಅತ್ತಿದ್ದಾರೆ. ತಾಯಿಯನ್ನ ನೆನೆದು ದುಃಖಿಸುತ್ತಿದ್ದಾರೆ. ಅಂತ್ಯಕ್ರಿಯೆ ಆದ ಸ್ಥಳಕ್ಕೆ ನಾನು ಹೋಗಲ್ಲ ಎಂದಿದ್ದಾರೆ. ಹೀಗಾಗಿ ರಘು ಹೋಗಲ್ಲ ಎಂದು ಹೇಳಿದ್ದನ್ನ ಜೈಲಾಧಿಕಾರಿಗಳು ರೈಟಿಂಗ್​ ಮೂಲಕ ಬರೆಸಿಕೊಂಡಿದ್ದಾರೆ.

ಇದನ್ನೂ ಓದಿ: ಮರಕ್ಕೆ ಗುದ್ದಿದ ಸರ್ಕಾರಿ ಬಸ್.. ಡ್ರೈವರ್​ನ 2 ಕಾಲು ಕಟ್​, ನಾಲ್ವರ ಸ್ಥಿತಿ ಚಿಂತಾಜನಕ

ಜೈಲಿನಿಂದ ರಘು ಬರುತ್ತಾರೆ ಎಂದು ತಾಯಿಯ ಮೃತದೇಹವನ್ನು ಇಟ್ಟುಕೊಂಡು ಹೆಚ್ಚು ಸಮಯದವರೆಗೆ ಅವರ ಕುಟುಂಬಸ್ಥರು, ಸಂಬಂಧಿಕರು ಬೆಳಗ್ಗೆಯಿಂದ ಕಾದಿದ್ದರು. ಮಗ ನೋಡಿದ ಮೇಲೆಯೇ ಅಂತ್ಯಕ್ರಿಯೆ ಮಾಡೋಣ ಎಂದುಕೊಂಡಿದ್ದರು. ಆದರೆ ಕೋರ್ಟ್​ನ ಆದೇಶ ತಡವಾದ ಹಿನ್ನೆಲೆಯಲ್ಲಿ ಬರೋದಿಲ್ಲ ಅಂತ ಗೊತ್ತಾಗಿ ಸಂಬಂಧಿಕರು ಜೋಗಿಮಟ್ಟಿಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

ಇದನ್ನೂ ಓದಿ: ‘ವೈಯಕ್ತಿಕ ಗಲಾಟೆಗಳಿಗಿಂತ ದೇಶವೇ ಫಸ್ಟ್​’.. ಸಾಮರಸ್ಯ ಸಂದೇಶ ಸಾರಿದ ಗಂಭೀರ್- ವಿರಾಟ್​ ಕೊಹ್ಲಿ!

ಇನ್ನು ಅಂತ್ಯಕ್ರಿಯೆ ವೇಳೆ ಜೈಲಿನಿಂದಲೇ ವಿಡಿಯೋ ಕಾಲ್ ಮೂಲಕ ಆರೋಪಿ ರಘು ತಾಯಿಯ ಮುಖವನ್ನು ಕೊನೆ ಬಾರಿ ನೋಡಿದ್ದರು. ಆದರೆ ನೇರವಾಗಿ ನೋಡಲಾಗಲಿಲ್ಲವೆಂದು ಅಳುತ್ತಿದ್ದಾರೆ. ಕೋರ್ಟ್ ಆದೇಶ ನೀಡುವ ಕೆಲ ನಿಮಿಷಗಳಲ್ಲಿ ಅಂತ್ಯಕ್ರಿಯೆ ಮುಕ್ತಾಯವಾಗಿತ್ತು. ಇನ್ನು ತಾಯಿಯ ಮುಖ ನೋಡಲು ಕೋರ್ಟ್ ಅನುಮತಿ ನೀಡಿದರೂ ವಿಧಿ ಮಾತ್ರ ನೀಡಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಲ್ಲಿ ಕೋರ್ಟ್​ ಆದೇಶ ನೀಡಿತ್ತು.. ಇಲ್ಲಿ ತಾಯಿ ಅಂತ್ಯಕ್ರಿಯೆ ಮುಗಿದಿತ್ತು; ಅಮ್ಮನ ನೋಡೋ ಭಾಗ್ಯ ರಘುಗೆ ಇರಲಿಲ್ವಾ?

https://newsfirstlive.com/wp-content/uploads/2024/07/DARSHAN_RAGHU.jpg

Load More