/newsfirstlive-kannada/media/post_attachments/wp-content/uploads/2024/06/death12.jpg)
ರೇಣುಕಾಸ್ವಾಮಿ ಮರ್ಡರ್ ಕೇಸ್ನಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಕೂಡ ತಗಲಾಕಿಕೊಂಡಿದ್ದಾರೆ. ಚಿತ್ರದುರ್ಗ ಮೂಲಕ ಆರೋಪಿ ಅನು ಕೂಡ ಹತ್ತರೊಟ್ಟಿಗೆ ಹನ್ನೊಂದು ಎಂಬಂತೆ ಅರೆಸ್ಟ್ ಆಗಿದ್ದು ಪೊಲೀಸರ ವಶದಲ್ಲಿದ್ದಾರೆ. ಇತ್ತ ಬಂಧಿತ ಆರೋಪಿಯ ಕುಟುಂಬ ಕಣ್ಣೀರ ಕಡಲಲ್ಲಿ ಮುಳುಗಿದೆ. ಆದರೆ ಇದರ ಮಧ್ಯೆ ಆರೋಪಿ ಅನು ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ದರ್ಶನ್ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತೊಬ್ಬ ಅಮಾಯಕ
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ A7 ಅನು@ ಅನು ಕುಮಾರ್ ಚಿತ್ರದುರ್ಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಆದರೆ ಇತ್ತ ಆರೋಪಿ ಅನು ತಂದೆ ಚಂದ್ರಣ್ಣ (60) ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಚಿತ್ರದುರ್ಗದ ಸಿಹಿನೀರು ಹೊಂಡ ರಸ್ತೆಯ ಬಳಿಯಿರುವ ಮನೆ ಬಳಿ ಏಕಾಏಕಿ ಕುಸಿದು ಬಿದ್ದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಮಗ ಅನು ಬಂಧನದಿಂದ ತಂದೆ ಖಿನ್ನತೆಗೆ ಒಳಗಾಗಿದ್ದರಂತೆ.
ಪೆಟ್ರೋಲ್ ಬಂಕ್ನಲ್ಲಿ ಕೆಲಸ
ಮೊದಲೇ ಹೇಳಿದಂತೆ ಆರೋಪಿ ಅನಿಲ್ ಕುಮಾರ್ (ಅನು) ಚಿತ್ರದುರ್ಗ ಮೂಲದವನು. ಚಿತ್ರದುರ್ಗ ನಗರದ ಸಿಹಿ ನೀರು ಹೊಂಡದ ರಸ್ತೆಯಲ್ಲಿರುವ ಈತನ ಮನೆಯಿದೆ. ತಾಯಿ ಜಯಮ್ಮ, ತಂದೆ ಚಂದ್ರಪ್ಪ ದಂಪತಿಯ ಪುತ್ರನೀತ. ಕಳೆದ ಮೂರು ವರ್ಷದಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಇದಕ್ಕಿಂತ ಮೊದಲು ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದನು. ಅನು ಸಭ್ಯ ಹುಡುಗನಾಗಿದ್ದು ಅಕ್ಕನ ಮದುವೆ ಕೂಡ ಮಾಡಿದ್ದನು. ಆದರೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತಿಗೆ ಮರುಳಾಗಿ ಇದೀಗ ಪೊಲೀಸರ ವಶದಲ್ಲಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ