/newsfirstlive-kannada/media/post_attachments/wp-content/uploads/2024/06/Pavithra-Gowda-Darshan.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಗ್ಯಾಂಗ್‌ನ ವಿಚಾರಣೆ ತೀವ್ರಗೊಂಡಿದೆ. ಕೊಲೆ ಕೇಸ್ ಅನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಇಂಚಿಂಚು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ. ಕಸ್ಟಡಿಯಲ್ಲಿರುವ ಆರೋಪಿಗಳಿಂದ ಹಲವು ಮಹತ್ವದ ಹೇಳಿಕೆಯನ್ನು ದಾಖಲಿಸಲಾಗಿದೆ.
ಇಂದು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ಮುಂದುವರಿದಿದೆ. ಪೊಲೀಸ್ ವಿಚಾರಣೆಯಲ್ಲಿ ಕಸ್ಟಡಿಯಲ್ಲಿದ್ದ ಆರೋಪಿ ಪವಿತ್ರಾಗೌಡ ಅವರು ಅಸ್ವಸ್ಥರಾಗಿದ್ದಾರೆ. ಪೊಲೀಸ್ ಠಾಣೆಗೆ ವೈದ್ಯರನ್ನು ಕರೆಸಿಕೊಂಡ ಅಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಪವಿತ್ರಾಗೌಡ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.
ಪವಿತ್ರಾಗೌಡ ಅಸ್ವಸ್ಥರಾಗಿದ್ದೇಕೆ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ A1 ಆಗಿರುವ ಪವಿತ್ರಾ ಗೌಡ ಅವರನ್ನು ಪ್ರತಿದಿನ ಮಹಿಳಾ ಸಾಂತ್ವನ ಕೇಂದ್ರದಲ್ಲಿರಿಸಲಾಗಿದೆ. ಅಲ್ಲಿಂದ ದಿನ ಬೆಳಗ್ಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ಪೊಲೀಸ್ ಕಸ್ಟಡಿ ವೇಳೆ ಪವಿತ್ರಾ ಗೌಡ ಅವರು ಸರಿಯಾಗಿ ಊಟ, ತಿಂಡಿ ಸೇವಿಸಿಲ್ಲ. ಇಂದು ಮಧ್ಯಾಹ್ನವೂ ಪವಿತ್ರಾ ಅವರು ಊಟ ಮಾಡಿರಲಿಲ್ಲ. ಇಂದು ಸತತ ವಿಚಾರಣೆ ವೇಳೆ ಪವಿತ್ರಾಗೌಡ ಅವರು ಅಸ್ವಸ್ಥರಾಗಿ ಬಿದ್ದಿದ್ದಾರೆ.
ಇದನ್ನೂ ಓದಿ: ದರ್ಶನ್ ಗ್ಯಾಂಗ್ನಿಂದ ಕೊಲೆಗೆ ಅಸಲಿ ಕಾರಣ ಬಿಚ್ಚಿಟ್ಟ ಇಂದ್ರಜಿತ್.. ಕೇಸ್ಗೆ ಬಿಗ್ ಟ್ವಿಸ್ಟ್!
ಪವಿತ್ರಾ ಗೌಡ ಅವರು ಅಸ್ವಸ್ಥರಾಗುತ್ತಿದ್ದಂತೆ ತಕ್ಷಣವೇ ಪೊಲೀಸರು ವೈದ್ಯರನ್ನು ಠಾಣೆಗೆ ಕರೆಸಿಕೊಂಡಿದ್ದರು. ವೈದ್ಯರು ಚೆಕ್ ಮಾಡಿದಾಗ ಪವಿತ್ರಾ ಅವರು ಅಸ್ವಸ್ಥರಾಗಿರೋದು ಬೆಳಕಿಗೆ ಬಂದಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದು ತಪಾಸಣೆ ಮಾಡಿದ್ದಾರೆ.
ಮಲ್ಲತ್ತಹಳ್ಳಿಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಪರೀಕ್ಷೆ ಮಾಡಿದ್ದು, ಅಸ್ವಸ್ಥರಾಗಿದ್ದ ಪವಿತ್ರಾ ಗೌಡ ಅವರು ಸುಸ್ತಾಗಿದ್ದರು. ಪೊಲೀಸ್ ಕಸ್ಟಡಿಯಲ್ಲಿ ಸರಿಯಾಗಿ ಊಟ ಸೇವಿಸದೆ ಇರೋದ್ರಿಂದ ಸುಸ್ತಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ