/newsfirstlive-kannada/media/post_attachments/wp-content/uploads/2024/07/renuka.jpg)
ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ನಟ ದರ್ಶನ್ ಅಂಡ್​ ಗ್ಯಾಂಗ್​ ಪರಪ್ಪನ ಅಗ್ರಹಾರ ಜೈಲಿನಲ್ಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಫಿಂಗರ್ ಪ್ರಿಂಟ್ ಪ್ರಮುಖ ಸಾಕ್ಷ್ಯ ಕಲ್ಪಿಸಿದೆ ಅನ್ನೋ ಮಾಹಿತಿ ನ್ಯೂಸ್ ​​ಫಸ್ಟ್​​ಗೆ ಸಿಕ್ಕಿದೆ.
/newsfirstlive-kannada/media/post_attachments/wp-content/uploads/2024/07/renuka1.jpg)
‘ಫಿಂಗರ್’ ಲಾಕ್​​!
01 : ರೇಣುಕಾಸ್ವಾಮಿ ಹತ್ಯೆಯಾದ ದಿನ ಆತ ಧರಿಸಿದ್ದ ಬಟ್ಟೆಗಳು
02 : ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ ವಸ್ತುಗಳು
03 : ಹತ್ಯೆ ಆರೋಪಿಗಳು ಧರಿಸಿದ್ದ ಬಟ್ಟೆ ಮೇಲಿನ ಫಿಂಗರ್ ಪ್ರಿಂಟ್
04 : ರೇಣುಕಾಸ್ವಾಮಿಯ ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿ
05 : ರೇಣುಕಾಸ್ವಾಮಿಯ ಮೃತದೇಹ ಸಾಗಾಟ ಮಾಡಿದ್ದ ವಾಹನ
06 : ರೇಣುಕಾ ಶವ ವಿಲೇವಾರಿ ಮಾಡಿದ್ದ ಸ್ಥಳದಲ್ಲಿ ಫಿಂಗರ್ ಪ್ರಿಂಟ್
/newsfirstlive-kannada/media/post_attachments/wp-content/uploads/2024/06/darshan54.jpg)
ರೇಣುಕಾಸ್ವಾಮಿ ಹತ್ಯೆಯಾದ ದಿನ ಆತ ಧರಿಸಿದ್ದ ಬಟ್ಟೆಗಳ ಮೇಲೆ ಫಿಂಗರ್​​ ಪ್ರಿಂಟ್​ ಸಿಕ್ಕಿವೆ. ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಲು ಬಳಸಿದ ವಸ್ತುಗಳ ಮೇಲೂ ಅದೇ ಗುರುತಿದೆ. ಜೊತೆಗೆ ಹತ್ಯೆ ಆರೋಪಿಗಳು ಧರಿಸಿದ್ದ ಬಟ್ಟೆಯ ಮೇಲೂ ಬೆರಳು ಮುದ್ರೆ, ಸಾಕ್ಷಿಗೆ ಸೀಲ್​ ಹೊಡೆದಿದೆ. ಜೊತೆಗೆ ರೇಣುಕಾಸ್ವಾಮಿಯ ಶವ ಇಟ್ಟಿದ್ದ ಸೆಕ್ಯೂರಿಟಿ ಗಾರ್ಡ್ ಕೊಠಡಿಯಲ್ಲೂ ಸಾಕಷ್ಟು ಫಿಂಗರ್​ ಪ್ರಿಂಟ್​ಗಳು ಸಿಕ್ಕಿವೆ. ಇನ್ನು, ರೇಣುಕಾಸ್ವಾಮಿಯ ಮೃತದೇಹ ಸಾಗಾಟ ಮಾಡಿದ್ದ ವಾಹನ ಮತ್ತು ಶವ ವಿಲೇವಾರಿ ಮಾಡಿದ್ದ ಸ್ಥಳದಲ್ಲಿ ಫಿಂಗರ್ ಪ್ರಿಂಟ್​ಗಳು ಕೊರಳು ಬಿಗಿ ಮಾಡ್ತಿವೆ. ಎಫ್ಎಸ್ಎಲ್ ಪರೀಕ್ಷೆಯಲ್ಲಿ ಈ ಸ್ಫೋಟಕ ಮಾಹಿತಿ ಬಹಿರಂಗ ಆಗಿದೆ. ಹತ್ತಕ್ಕೂ ಹೆಚ್ಚು ಆರೋಪಿಗಳ ಫಿಂಗರ್ ಪ್ರಿಂಟ್ ಮ್ಯಾಚಿಂಗ್​ ಆಗಿದೆ. ಆರಂಭದಲ್ಲೇ ಫಿಂಗರ್ ಪ್ರಿಂಟ್ ಜಾಡು ಬೆನ್ನು ಹತ್ತಿದ್ದ ಪೊಲೀಸರಿಗೆ ವಿಧಿವಿಜ್ಞಾನ ಪ್ರಯೋಗಾಲಯ ಕೊಟ್ಟ ವರದಿ ಬಲ ನೀಡಿದೆ.
/newsfirstlive-kannada/media/post_attachments/wp-content/uploads/2024/06/DARSHAN-JAIL-3.jpg)
ಅಲ್ಲಿ ಫಿಂಗರ್​​​ ಪ್ರಿಂಟ್​​​ನಲ್ಲಿ ಲಾಕ್​ ಆದ್ರೆ, ಇಲ್ಲಿ ಪೊಲೀಸರ ಕ್ರೈಂ ಡೈರಿಗೆ ಇನ್ನಷ್ಟು ಮತ್ತಷ್ಟು ಸಾಕ್ಷಿಗಳ ಸಂಗ್ರಹ ಆಗ್ತಿದೆ. ಹತ್ಯೆ ಕೇಸ್​​ನಲ್ಲಿ ಸಾಕ್ಷಿಗಳ ಸಂಖ್ಯೆ ಡಬಲ್​​ ಸೆಂಚ್ಯುರಿ ಬಾರಿಸಿದೆ. ಪ್ರಕರಣ ಸಂಬಂಧ ಭೌತಿಕ, ತಾಂತ್ರಿಕ, ವೈಜ್ಞಾನಿಕ ಸಾಕ್ಷಿ ಸಂಗ್ರಹ ಆಗಿದೆ. ಅಲ್ಲದೆ, ಪ್ರತ್ಯಕ್ಷ, ಪರೋಕ್ಷ ಸಾಕ್ಷಿ ಹೊರತುಪಡಿಸಿ 200 ಗಡಿದಾಟಿದೆ. ಪ್ರಕರಣ ಸಂಬಂಧ ದಿನದಿಂದ ದಿನಕ್ಕೆ ಸಾಕ್ಷಿಗಳ ಸಂಖ್ಯೆ ಹೆಚ್ಚಾಗ್ತಿರೋದು ದರ್ಶನ್​ಗೆ ದಿಗಿಲು ಶುರುವಾಗಿದೆ. ಒಟ್ಟಾರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಸುತ್ತ ಸದ್ಯ ಸಮಸ್ಯೆಗಳ ಸರಮಾಲೆಗಳೆ ಸುತ್ತಿಕೊಂಡಿವೆ. ಯಾವ ದಿಕ್ಕಿನಲ್ಲೂ ಹುಡುಕಿದರೂ ಪೊಲೀಸರಿಗೆ ಹತ್ಯೆಯ ಬಗ್ಗೆ ಒಂದಲ್ಲ, ಒಂದು ಸಾಕ್ಷಿ ಸಿಗುತ್ತಿದೆ. ನವಗ್ರಹಗಳ ಮೊರೆ ಹೋದ್ರು, ದಶ ಕಂಟಕ ಮಾತ್ರ ತಪ್ಪೋ ಹಾಗೇ ಕಾಣಿಸ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us