/newsfirstlive-kannada/media/post_attachments/wp-content/uploads/2024/06/DARSHAN-17.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣ ತನಿಖೆಯನ್ನು ಬೆಂಗಳೂರು ಪೊಲೀಸರು ತೀವ್ರಗೊಳಿಸಿದ್ದಾರೆ. ಒಟ್ಟು 13 ಆರೋಪಿಗಳನ್ನು ಕೋರ್ಟ್ ಮೂಲಕ ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು, ಸ್ಥಳ ಮಹಜರು ಕೆಲಸ ಮಾಡುತ್ತಿದ್ದಾರೆ.
ಕೊಲೆ ಮಾಡುವ ಮೊದಲು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿಕೊಂಡು ಬೆಂಗಳೂರಿಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರಲಾಗಿತ್ತು ಎಂಬ ಮಾಹಿತಿ ಇದೆ. ಬೆಂಗಳೂರಿಗೆ ಬಂದ ಬಳಿಕ ಆರ್.ಆರ್.ನಗರದ ಪಟ್ಟಣಗೆರೆ ಶೆಡ್ನಲ್ಲಿ ಕೂಡಿ ಹಾಕಿದ್ದರು. ಇದೇ ಶೆಡ್ಗೆ ರೇಣುಕಾಸ್ವಾಮಿಯನ್ನು ಕರೆದುಕೊಂಡು ಬರಲು ಕಾರಣ ಕೂಡ ಇದೆ.
ಇದನ್ನೂ ಓದಿ:ಕಿವಿನಲ್ಲೇ ರಕ್ತ ಬರ್ತಿದೆ.. ಆ ಭಗವಂತ ದರ್ಶನ್ ಸರ್ನನ್ನು ಇದ್ರಿಂದ ಆಚೆಗೆ ಕರ್ಕೊಂಡು ಬನ್ನಿ -ಸಂಜನಾ ಕಣ್ಣೀರು
ರೇಣುಕಾಸ್ವಾಮಿಯನ್ನು ಅದೇ ಶೆಡ್ ಗೆ ತರಲು ಕಾರಣವಾದ್ರೂ ಏನು..?
- ಕಾರಣ 1: ಹತ್ಯೆ ನಡೆದ ಶೆಡ್ ದರ್ಶನ್ ಸ್ನೇಹಿತ ವಿನಯ್ ಮಾವ ಜಯಣ್ಣ ಎಂಬುವರಿಗೆ ಸೇರಿದ್ದು
- ಕಾರಣ 2: ಸಿಟಿಯಲ್ಲಿದ್ರೂ ಜನರ ಹೆಚ್ಚಾಗಿ ಓಡಾಡದ ಜಾಗವಾಗಿತ್ತು ಈ ಶೆಡ್
- ಕಾರಣ 3: ದರ್ಶನ್ ಸ್ನೇಹಿತ ವಿನಯ್ಗೆ ಸಂಬಂಧಿಸಿದ ಶೆಡ್, ಹೀಗಾಗಿ ಸೇಫ್ ಎಂಬ ಕಾರಣ
- ಕಾರಣ 4: ದರ್ಶನ್ ನಿವಾಸಕ್ಕೆ ಸ್ವಲ್ಪ ದೂರದಲ್ಲೇ ಶೆಡ್ ಇತ್ತು
- ಕಾರಣ 5: ಒಂದು ವೇಳೆ ಶೆಡ್ ಸಿಸಿಟಿವಿಯಲ್ಲಿ ರೆಕಾರ್ಡ್ ಆದ್ರೂ ಡಿಲೀಟ್ ಮಾಡಿಸಬಹುದು ಎಂಬ ಕಾರಣ
- ಕಾರಣ 6: ಹಲ್ಲೆ ವೇಳೆ ಎಷ್ಟೇ ಕಿರುಚಿಡಿದ್ರೂ ಯಾರಿಗೂ ಧ್ವನಿ ಕೇಳಲ್ಲ ಅನ್ನೋದು, ಈ ಎಲ್ಲಾ ಕಾರಣಗಳಿಂದ ದರ್ಶನ್ ಗ್ಯಾಂಗ್ ಅದೇ ಶೆಡ್ ಆಯ್ಕೆ ಮಾಡಿಕೊಂಡಿತ್ತು ಎನ್ನಲಾಗಿದೆ.
ಇದನ್ನೂ ಓದಿ:ರೇಣುಕಾಸ್ವಾಮಿಗೆ ಪವಿತ್ರಗೌಡ ಚಪ್ಪಲಿ ಏಟು..? ಶೆಡ್ಗೆ ಕರ್ಕೊಂಡು ಬಂದ ಮೇಲೆ ದರ್ಶನ್ ಮಾಡಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ