/newsfirstlive-kannada/media/post_attachments/wp-content/uploads/2024/06/darshan47.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ಜೈಲಿಗಾ? ಕಸ್ಟಡಿಗಾ ಎಂಬ ವಾದ-ಪ್ರತಿವಾದ ನಿನ್ನೆ ಕೋರ್ಟ್‌ನಲ್ಲಿ ನಡೆಯಿತು. ಕೊನೆಗೆ ಡೆವಿಲ್ ಗ್ಯಾಂಗ್‌ನ ನಾಲ್ವರನ್ನು ಕೋರ್ಟ್ ಪರಪ್ಪನ ಅಗ್ರಹಾರಕ್ಕೆ ಕಳಿಸಿಕೊಟ್ಟಿದೆ. ಇಷ್ಟಾದ್ರೂ ಎಸ್‌ಪಿಪಿ ವಾದ ನಿಂತಿರ್ಲಿಲ್ಲ. ದರ್ಶನ್ ಗ್ಯಾಂಗ್‌ನಲ್ಲಿರೋರ ಕ್ರೌರ್ಯವನ್ನು ಮನಗಂಡಿದ್ದ ಎಸ್‌ಪಿಪಿ ಪ್ರತ್ಯೇಕ ಜೈಲಿಗೆ ಶಿಫ್ಟ್ ಮಾಡೋ ವಾದ ಮಂಡಿಸಿದ್ದರು.
ಡೆವಿಲ್ ಗ್ಯಾಂಗ್ ಕೊಲೆ ಮಾಡಿದ ಮೇಲೆ ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿದಂತೆ ಅವರವರೇ ಒಬ್ಬರ ಮೇಲೆ ಒಬ್ರು ಗೂಬೆ ಕೂರಿಸ್ತಿದ್ದಾರಂತೆ. ಇದು ಅತಿರೇಕಕ್ಕೆ ತಿರುಗಿ ಸೆಲ್‌ನಲ್ಲೇ ವಾರ್ ಆಗೋ ಲಕ್ಷಣ ಇದೆಯಂತೆ. ಈ ಅನುಮಾನದಲ್ಲಿ ನಿನ್ನೆ ಕೋರ್ಟ್‌ನಲ್ಲಿ ಪೊಲೀಸರು ಬೇರೆ ಬೇರೆ ಜೈಲಿಗೆ ಕಳುಹಿಸುವಂತೆ ಮನವಿ ಮಾಡಿದ್ದರು.
ಒಳ ಸಂಚು.. ಸಹ ಆರೋಪಿಗಳ ಮೇಲೆ ಹಲ್ಲೆ ಪ್ರಸ್ತಾಪ!
ಡೆವಿಲ್ ಗ್ಯಾಂಗ್‌ನ ಬೇರೆ ಬೇರೆ ಜೈಲಿಗೆ ಶಿಫ್ಟ್‌ಗೆ ಮನವಿ
ನ್ಯಾಯಾಧೀಶರ ಮುಂದೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರ ಬಲವಾದ ವಾದವನ್ನು ಮಂಡಿಸಿದ್ದರು. ರೇಣುಕಾಸ್ವಾಮಿ ಕೊಲೆ ಕೇಸ್‌ನ ಎಲ್ಲಾ ಆರೋಪಿಗಳನ್ನ ಪರಪ್ಪನ ಅಗ್ರಹಾರಕ್ಕೆ ಕಳಿಸಬೇಡಿ. ಬೇರೆ ಬೇರೆ ಕಾರಾಗೃಹಕ್ಕೆ ಶಿಫ್ಟ್ ಮಾಡುವಂತೆ ವಾದಿಸಿದ್ದರು. ಒಂದೇ ಸೆಲ್‌ನಲ್ಲಿ ಇಟ್ರೆ ಇವರು ಸುಮ್ನೆ ಇರ್ತಾರಾ? ಏನಾದ್ರೂ ಕಿತಾಪತಿ ಮಾಡಬಹುದು. ಹೀಗಾಗಿ ಆರೋಪಿಗಳನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಲು ಪೊಲೀಸರು ಮನವಿ ಮಾಡಿದ್ದರು.
ಇದನ್ನೂ ಓದಿ: ನಟಿ ಸೋನಾಲ್ ಮದುವೆ ಆಗ್ತಾರಾ ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್; ಇದು ಎಷ್ಟು ನಿಜ?
‘ಕಾಟೇರ’ ಗ್ಯಾಂಗ್‌ನ ಕುತಂತ್ರ
ಕೊಲೆ ಕೇಸ್‌ನ ಆರೋಪಿಗಳು ಒಳಸಂಚಿನಲ್ಲಿ ಭಾಗಿ
ಒಂದೇ ಜೈಲಿನಲ್ಲಿ ಇದ್ದರೆ ಸಂಚು ರೂಪಿಸುವ ಸಾಧ್ಯತೆ
ಈಗಾಗಲೇ ಸಾಕ್ಷಿ ನಾಶಕ್ಕೆ ಆರೋಪಿಗಳು ಯತ್ನಿಸಿದ್ದಾರೆ
ಜೈಲಿನಲ್ಲಿ ಮತ್ತೆ ಕುತಂತ್ರ ನಡೆಸುವಂತ ಸಾಧ್ಯತೆಯಿದೆ
ಆರೋಪಿಗಳ ಮಧ್ಯೆಯೇ ಎದ್ದಿದ್ಯಾ ವಿರೋಧದ ವಾರ್
ಬರೀ ಕುತಂತ್ರವಷ್ಟೇ ಅಲ್ಲ ಕೊಲೆ ಆರೋಪಿಗಳು ಅವರವರೇ ಹೊಡೆದಾಡಿಕೊಳ್ಳಬಹುದು ಅಂತಲೂ ಪೊಲೀಸರಿಗೆ ಡೌಟ್ ಇದೆ. ಆರೋಪಿಗಳ ಮಧ್ಯೆಯೇ ಪರಸ್ಪರ ದ್ವೇಷ ಹುಟ್ಟಿಕೊಂಡಿರುವ ಸುಳಿವು ಸುಳಿವು ಸಿಕ್ಕಿದೆ. ದರ್ಶನ್ ಕಡೆಯವರು ಸಹ ಆರೋಪಿಗಳ ಮೇಲೆ ಹಲ್ಲೆ ನಡೆಸುವ ಸಾಧ್ಯತೆ ಇದೆ ಅಂತ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ. ಇದನ್ನೆಲ್ಲ ನೋಡ್ತಿದ್ರೆ ಆರೋಪಿಗಳ ಮಧ್ಯೆನೇ ವಿರೋಧದ ವಾರ್ ಶುರುವಾಗಿರೋ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ: ವಿವಾಹಿತ ಪುರುಷನೊಂದಿಗೆ ಕಾಲೇಜು ವಿದ್ಯಾರ್ಥಿನಿ ಸಾವಿಗೆ ಹೊಸ ಟ್ವಿಸ್ಟ್; ಆತ್ಮಹತ್ಯೆಯೋ? ಕೊಲೆಯೋ?
ನಿನ್ನೆ ಎಸ್‌ಪಿಪಿ ಮಂಡಿಸಿರೋ ವಾದವನ್ನ ಆಲಿಸಿದ್ದ 24ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರು ನಾಳೆ ಅಂದ್ರೆ ಸೋಮವಾರ ಬೇರೆ ಜೈಲಿಗೆ ಶಿಫ್ಟ್ ಮಾಡುವ ಬಗ್ಗೆ ವಿಚಾರಣೆ ನಡೆಸೋದಾಗಿ ತಿಳಿಸಿದ್ದಾರೆ. ಹೀಗಾಗಿ ಯಾವ್ಯಾವ ಆರೋಪಿಗಳು ತುಮಕೂರು ಕಾರಾಗೃಹಕ್ಕೆ ಶಿಫ್ಟ್ ಆಗ್ತಾರೆ? ಯಾರೆಲ್ಲಾ ಪರಪ್ಪನ ಅಗ್ರಹಾರದಲ್ಲೇ ಉಳಿತಾರೆ ಅನ್ನೋದು ನಾಳೆ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ