ದರ್ಶನ್ ತಲೆಗೂದಲು ಟೆಸ್ಟ್‌.. ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ DNA ಪರೀಕ್ಷೆ; ಕಾರಣವೇನು?

author-image
admin
Updated On
ಎಣ್ಣೆ ಅಮಲಿನಲ್ಲಿ CCTV ಮರೆತ ಆರೋಪಿಗಳು; ಕ್ಯಾಮೆರಾದಲ್ಲಿ ದರ್ಶನ್‌ ಹಲ್ಲೆ ಮಾಡಿದ್ದ ದೃಶ್ಯ ಸೆರೆ?
Advertisment
  • ಕೊಲೆ ಕೇಸ್‌ನಲ್ಲಿ ದರ್ಶನ್ ಸೇರಿ 17‌ ಆರೋಪಿಗಳ ಮೆಡಿಕಲ್ ಟೆಸ್ಟ್
  • ಪೊಲೀಸರಿಂದ ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ DNA ಪರೀಕ್ಷೆ
  • ಕೊಲೆ ನಡೆದ ಜಾಗದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿ ಪತ್ತೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಕೇಡುಗಾಲ ಆರಂಭವಾಗಿದೆ. ಕಳೆದ 9 ದಿನಗಳಿಂದ ಪೊಲೀಸ್ ಠಾಣೆಯಲ್ಲಿರುವ ಆರೋಪಿಗಳು ತೀವ್ರ ವಿಚಾರಣೆಯನ್ನ ಎದುರಿಸಿದ್ದಾರೆ. ನಾಳೆ ನಟ ದರ್ಶನ್ ಅಂಡ್ ಗ್ಯಾಂಗ್‌ ಪರಪ್ಪನ ಅಗ್ರಹಾರ ಜೈಲು ಪಾಲಾಗುವ ಸಾಧ್ಯತೆ ಹೆಚ್ಚಾಗಿದೆ.

ದರ್ಶನ್ ಅಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿ ನಾಳೆಗೆ ಅಂತ್ಯವಾಗುವ ಹಿನ್ನೆಲೆಯಲ್ಲಿ ಪೊಲೀಸರು ಇಂದೇ ಕೊಲೆ ಪ್ರಕರಣದ 17 ಆರೋಪಿಗಳ ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ತುರ್ತು ಚಿಕಿತ್ಸೆಗೆ ಕರೆತಂದಿರುವ ಪೊಲೀಸರು ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ನಾಳೆ ಕೊಲೆ ಕೇಸ್‌ನ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ಇದನ್ನೂ ಓದಿ: ಕಿವಿ ಕತ್ತರಿಸಿ, ಬೆನ್ನಿನ ಮೇಲೆ ಬಾಸುಂಡೆ.. ನಟ ದರ್ಶನ್‌ ಗ್ಯಾಂಗ್‌ ಕ್ರೂರಾತಿಕ್ರೂರ ಹಲ್ಲೆ; ಪಕ್ಕಾ ಸಾಕ್ಷಿಗಳು ಪತ್ತೆ! 

ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಕೊಲೆ ಪ್ರಕರಣದಲ್ಲಿ ಭಾಗಿಯಾದ ದರ್ಶನ್ ಸೇರಿ 17‌ ಆರೋಪಿಗಳ ಮೆಡಿಕಲ್ ಟೆಸ್ಟ್ ನಡೆಸಿದ್ದಾರೆ. ಈ ಪರೀಕ್ಷೆಯ ಜೊತೆಗೆ ಆರೋಪಿಗಳ ಡಿಎನ್ಎ ಟೆಸ್ಟ್‌ಗೂ ಪೊಲೀಸರು ಮುಂದಾಗಿದ್ದಾರೆ.

publive-image

ಡಿಎನ್‌ಎ ಪರೀಕ್ಷೆ ಯಾಕೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು 17 ಆರೋಪಿಗಳ ಮೆಡಿಕಲ್ ಟೆಸ್ಟ್ ಮಾಡಿದ್ರೆ ಇದರ ಜೊತೆಗೆ ಪವಿತ್ರಾ ಗೌಡ ಸೇರಿ 9 ಆರೋಪಿಗಳಿಗೆ ಡಿಎನ್ಎ ಪರೀಕ್ಷೆ ಕೂಡ ಮಾಡಲಾಗಿದೆ. ಆರೋಪಿಗಳ ರಕ್ತ, ಕೂದಲಿನ ಮಾದರಿಯನ್ನು ಡಿಎನ್‌ಎ ಪರೀಕ್ಷೆಗಾಗಿ ಸಂಗ್ರಹ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆ ಶೆಡ್‌ನಲ್ಲಿ ಪೊಲೀಸರಿಗೆ ಕೂದಲು, ರಕ್ತದ ಮಾದರಿ ಸಿಕ್ಕಿದೆ. ಆರೋಪಿಗಳ ಡಿಎನ್‌ಎ ಪರೀಕ್ಷೆಯಲ್ಲಿ ಈ ಮಾದರಿಯನ್ನು ಮ್ಯಾಚ್ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಆರೋಪಿಗಳ ರಕ್ತ, ಕೂದಲನ್ನು ಎಫ್ಎಸ್ಎಲ್‌ಗೆ ಕಳುಹಿಸಿ ತಾಳೆ ಮಾಡಲಾಗುತ್ತಿದೆ. ಕೊಲೆಯಾದ ಸ್ಥಳದಲ್ಲಿ ಪತ್ತೆಯಾದ ಕೂದಲು, ರಕ್ತದ ಮಾದರಿಗಳು ಒಂದೇ ಆದಲ್ಲಿ ಕೊಲೆಗೆ ಮತ್ತಷ್ಟು ಸಾಕ್ಷ್ಯ ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಡಿಎನ್ಎ ಟೆಸ್ಟ್‌ಗೆ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ಮುಲಾಜಿಲ್ಲದೇ ನಟ ದರ್ಶನ್ ಧರಿಸಿದ್ದ ವಿಗ್ ಬಿಚ್ಚಿಸಿದ ಪೊಲೀಸರು; ಕಾರಣವೇನು?  

ದರ್ಶನ್ ವಿಗ್ ತೆಗೆಸಿದ ಪೊಲೀಸರು!
ರೇಣುಕಾಸ್ವಾಮಿ ಕೊಲೆ ಪ್ರಕರಣ ಅತ್ಯಂತ ಚುರುಕಿನಿಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ತನಿಖೆಗಾಗಿ ಕೂದಲಿನ ಮಾದರಿ ಸಂಗ್ರಹಿಸಲು ನಟ ದರ್ಶನ್ ಧರಿಸಿದ್ದ ವಿಗ್ ಅನ್ನು ಪೊಲೀಸರು ತೆಗೆಸಿದ್ದಾರೆ. ಆರೋಪಿ ದರ್ಶನ್ ಅವರ ರಕ್ತ ಹಾಗೂ ಕೂದಲಿನ ಸ್ಯಾಂಪಲ್‌ ಅನ್ನು ಪೊಲೀಸರು ಪಡೆದಿದ್ದಾರೆ. ಕೊಲೆ ನಡೆದ ಜಾಗದಲ್ಲಿ ಪತ್ತೆಯಾದ ಕೂದಲು, ರಕ್ತ ಹೊಂದಾಣಿಕೆ ಮಾಡಲು ಸ್ಯಾಂಪಲ್ ಪಡೆಯಲಾಗಿದೆ. ದರ್ಶನ್ ಅವರು ಧರಿಸಿದ್ದ ವಿಗ್ ಅನ್ನು ತೆಗೆಸಿ ಕೂದಲಿನ ಸ್ಯಾಂಪಲ್ ಅನ್ನು ವೈದ್ಯರು ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment