Advertisment

ಪಟ್ಟಣಗೆರೆ ಶೆಡ್​ನಲ್ಲಿ ರಕ್ತ ಚರಿತ್ರೆಗಳ ಕತೆ..? ಸಿಕ್ಕ ರಕ್ತದ ಕಲೆಗಳು ಹೇಳ್ತಿವೆಯಂತೆ ಪಾಪಿಗಳ ಲೋಕದ ಕತೆ..!

author-image
Ganesh
Updated On
ಪೂರ್ತಿ ಊಟ ಮಾಡಲ್ಲ.. ಸೆಲ್​ನಲ್ಲಿ ಏಕಾಂಗಿ.. 1 ಸೆಲ್​.. 1 ಚಾಪೆ.. 1 ಚೇರ್.. ದರ್ಶನ್ ಸ್ಟೇಷನ್ ಡೈರಿ..!
Advertisment
  • ವಿನಯ್ ಅಂಡ್ ಗ್ಯಾಂಗ್​ನಿಂದ ಬೇರೆಯವರ ಮೇಲೂ ಹಲ್ಲೆ?
  • ವ್ಯವಹಾರದ ವಿಚಾರಕ್ಕೆ ಹಲ್ಲೆ ಮಾಡಿದ್ದರ ಬಗ್ಗೆ ಪೊಲೀಸರಿಂದ ತನಿಖೆ
  • ಹಲ್ಲೆಗೊಳಗಾದ ಯಾರು ಸಹ ದೂರು ನೀಡಲು ಮುಂದೆ ಬಂದಿಲ್ಲ..

ಬೆಂಗಳೂರು: ಪಟ್ಟಣಗೆರೆ ಶೆಡ್ ಅಂದರೆ ಅಲ್ಲಿನ ಬೆಚ್ಚಿ ಬೀಳುವಂತೆ ಆಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ಈ ಶೆಡ್ ಭಾರೀ ಸುದ್ದಿಯಲ್ಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ, ಸ್ಥಳ ಮಹಜರಿಗೆ ಹೋಗಿದ್ದ ಪೊಲೀಸರಿಗೆ ಶಾಕಿಂಗ್ ವಿಚಾರಗಳು ಗೊತ್ತಾಗಿದೆ ಎನ್ನಲಾಗಿದೆ.

Advertisment

publive-image

ಕೊಲೆ, ದರೋಡೆ, ಸುಲಿಗೆಗಳ ತಾಣದಂತೆ ಕಾಣುತ್ತಿರುವ ಈ ಶೆಡ್​​ನಲ್ಲಿ ರೇಣುಕಾಸ್ವಾಮಿ ಅಲ್ಲದೇ ಬೇರೆಯವರ ರಕ್ತದ ಕಲೆಗಳು ಸಿಕ್ಕಿದೆ ಎನ್ನಲಾಗುತ್ತಿದೆ. ವಿನಯ್ ಅಂಡ್ ಗ್ಯಾಂಗ್​ ಈ ಶೆಡ್​ನಲ್ಲಿ ಬರೆಯವರನ್ನೂ ಕರೆದುಕೊಂಡು ಬಂದು ಹಲ್ಲೆ ನಡೆಸಿದ ಆರೋಪಗಳು ಇವೆ. ಹೀಗಿರುವಾಗ ಬೇರೆ ಯಾರದ್ದೋ ರಕ್ತದ ಕಲೆಗಳು ಸಿಕ್ಕಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊಲೆ ಕೇಸ್ ಬಿಟ್ಟು ಬೇರೆಯವರ ರಕ್ತದ ಕಲೆಗಳು ಸಿಕ್ಕಿರೋ ಮಾಹಿತಿ ಇದೆ.

ಇದನ್ನೂ ಓದಿ:ದರ್ಶನ್ ತನಿಖೆಯಲ್ಲಿ ಪೊಲೀಸರಿಂದ ಮಹತ್ವದ ನಿರ್ಧಾರ.. ಇವತ್ತು ಮೈಸೂರಿಗೆ ಕರ್ಕೊಂಡು ಬರ್ತಾರೆ..!

publive-image

ರೇಣುಕಾಸ್ವಾಮಿ ಸಾವಿನ ನಂತರ ಸಾಕ್ಷಿ ಸಂಗ್ರಹಿಸಲು ಎಫ್‌ಎಸ್ಎಲ್ ಟೀಂ ಶೆಡ್​ಗೆ ತೆರಳಿತ್ತು. ಆಗ ಮೂರರಿಂದ ನಾಲ್ಕು ತಿಂಗಳ ಹಿಂದಿನ ರಕ್ತದ ಗುರುತು ಪತ್ತೆಯಾಗಿದೆ. ಆದರೆ ಹಲ್ಲೆಗೊಳಗಾದ ವ್ಯಕ್ತಿ ಇನ್ನೂ ದೂರು ನೀಡಲು ಮುಂದೆ ಬಾರದ ಹಿನ್ನೆಲೆಯಲ್ಲಿ ತನಿಖೆಗೆ ಹಿನ್ನಡೆ ಆಗಬಹುದು. ಆದರೂ ಬಂಧಿತ ಆರೋಪಿಗಳಿಂದ ಬಾಯಿ ಬಿಡಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

Advertisment

ವ್ಯವಹಾರಿಕ ವಿಚಾರವಾಗಿ ವಿನಯ್ ಅಂಡ್ ಗ್ಯಾಂಗ್ ಹಲ್ಲೆ ಮಾಡಿದ್ದರ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಡುವೆ ಈ ಹಿಂದೆ ಶೆಡ್​ನಲ್ಲಿ ಬೇರೆ ಯಾಱರ ಮೇಲೆ ಹಲ್ಲೆ ಮಾಡಲಾಗಿದೆ? ಅನ್ನೋದ್ರ ಬಗ್ಗೆ ತನಿಖೆ ಆರಂಭಿಸಿದ್ದಾರಂತೆ.

ಇದನ್ನೂ ಓದಿ:ಮಿಷನ್ ಅನ್​ಸ್ಟಾಪಬಲ್.. ಟೀಂ ಇಂಡಿಯಾ ಟಾರ್ಗೆಟ್ 5.. ಇನ್ಮೇಲೆ ಬೇರೆಯದ್ದೇ ಲೆಕ್ಕ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment