Advertisment

3 ಗಂಟೆ 30 ಪ್ರಶ್ನೆ.. ದರ್ಶನ್ ಭೇಟಿಯಾದ ಪವಿತ್ರಾ ಆಪ್ತೆ ಸಮತಾಗೆ ಶಾಕ್ ಕೊಟ್ಟ ಪೊಲೀಸರು; ಕಾರಣವೇನು?

author-image
admin
Updated On
3 ಗಂಟೆ 30 ಪ್ರಶ್ನೆ.. ದರ್ಶನ್ ಭೇಟಿಯಾದ ಪವಿತ್ರಾ ಆಪ್ತೆ ಸಮತಾಗೆ ಶಾಕ್ ಕೊಟ್ಟ ಪೊಲೀಸರು; ಕಾರಣವೇನು?
Advertisment
  • ಆಡುಗೋಡಿಯ ಟೆಕ್ನಿಕಲ್ ಸೆಲ್​ನಲ್ಲಿ 3 ಗಂಟೆಗಳ ಕಾಲ ವಿಚಾರಣೆ
  • ರೇಣುಕಾಸ್ವಾಮಿ & ಪವಿತ್ರಾ ಕಿರಿಕ್ ಬಗ್ಗೆ ಸಾಕ್ಷಿಯಾಗಿ ಪರಿಗಣನೆ
  • ಎ1 ಪವಿತ್ರಾ ಎಲ್ಲಾ ವಿಚಾರ ತಿಳಿದಿರುವ ಸಮತಾ ಅವರಿಗೆ 30 ಪ್ರಶ್ನೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್ ವಿರುದ್ಧ ನಡೆಯುತ್ತಿರುವ ಪೊಲೀಸ್‌ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಸಾಕಷ್ಟು ಸಾಕ್ಷ್ಯಗಳನ್ನು ಕಲೆ ಹಾಕಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಪಟ್ಟ ಒಬ್ಬರನ್ನೂ ಬಿಡದೇ ವಿಚಾರಣೆಗೆ ಒಳಪಡಿಸಿದ್ದಾರೆ. ಎಲ್ಲಾ ಆಯಾಮಗಳಲ್ಲೂ ಮಾಹಿತಿ ಕಲೆ ಹಾಕಿರುವ ಪೊಲೀಸರು ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.

Advertisment

publive-image

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ1 ಪವಿತ್ರಾ ಸ್ನೇಹಿತೆಗೂ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ ಸಮತಾ ಅವರು ಜೈಲಿನಲ್ಲಿ ದರ್ಶನ್ ಹಾಗೂ ಪವಿತ್ರಾ ಅವರನ್ನು ಭೇಟಿಯಾಗಿ ಬಂದಿದ್ದರು. ಇದಾದ ಬಳಿಕ ಪೊಲೀಸರು ಸಮತಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದು ಆಡುಗೋಡಿಯ ಟೆಕ್ನಿಕಲ್ ಸೆಲ್​ನಲ್ಲಿ 3 ಗಂಟೆಗಳ ಕಾಲ ಸುಮಾರು 30 ಪ್ರಶ್ನೆಗಳನ್ನ ಕೇಳಿ ತೀವ್ರ ವಿಚಾರಣೆ ನಡೆಸಿದ್ದಾರೆ.

publive-image

ಕಳೆದ ಜುಲೈ 3ರಂದು ಸಮತಾ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ಜುಲೈ 4ರಂದು ಸಮತಾ ವಿಚಾರಣೆಯಲ್ಲಿ ಭಾಗಿಯಾಗಿದ್ದರು. ತನಿಖಾಧಿಕಾರಿ AI ಚಂದನ್ ಕುಮಾರ್ ಅವರು ಮೊನ್ನೆ ಜೈಲಿಗೆ ಭೇಟಿ ನೀಡಿದ್ದ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ. ಪ್ರಮುಖವಾಗಿ ಸಮತಾ ಅವರನ್ನು ರೇಣುಕಾಸ್ವಾಮಿ & ಪವಿತ್ರಾ ಕಿರಿಕ್ ಬಗ್ಗೆ ಸಾಕ್ಷಿಯಾಗಿ ಪರಿಗಣನೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ಜೈಲಲ್ಲೂ ರೂಲ್ಸ್ ಬ್ರೇಕ್? ದರ್ಶನ್​ ಭೇಟಿಯಾಗಿದ್ದೇಕೆ ಪವಿತ್ರಾ ಗೌಡ ಸ್ನೇಹಿತೆ; ಈ ಸಮತಾ ಯಾರು? 

Advertisment

ಸಮತಾ ವಿಚಾರಣೆಗೆ ಕಾರಣಗಳೇನು?
01. ಸಮತಾ ಪವಿತ್ರಾ ಗೌಡರ ಪರಮಾಪ್ತ ಸ್ನೇಹಿತೆ
02. ಪವಿತ್ರಾಳ ಎಲ್ಲಾ ವಿಚಾರ ತಿಳಿದಿರುವ ಸಮತಾ
03. ಅತಿ ಹೆಚ್ಚು ಸಮತಾ ಜೊತೆ ಕಳೆಯುತ್ತಿದ್ದ ಪವಿತ್ರಾ
04. ರೇಣುಕಾಸ್ವಾಮಿ ಕೊಲೆ ಮುನ್ನ ಪವಿತ್ರಾ ಜೊತೆ ಚರ್ಚೆ
05. ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ಬಗ್ಗೆ ಮಾಹಿತಿ
06. ಕೃತ್ಯದ ಬಳಿಕವೂ ಸಮತಾ ಜೊತೆ ಪವಿತ್ರಾ ಮಾತುಕತೆ
07. ಪೊಲೀಸರ ವಿಚಾರಣೆಗೆ ಹೋಗುವ ಮುನ್ನ ಕಾಲ್
08. ಬಂಧಿಸುವಾಗ ಸಮತಾಗೆ ತಿಳಿಸಲೆಂದು ಪವಿತ್ರಾ ಹೇಳಿಕೆ
09. ಬಂಧನ ಆದ ಬಳಿಕ ಪವಿತ್ರಾಗೆ ಬಟ್ಟೆ ನೀಡಿದ್ದ ಸಮತಾ
10. ಪವಿತ್ರಾ ಗೌಡ ಜೈಲು ಸೇರಿದ ಬಳಿಕವೂ ಭೇಟಿ
11. ಪವಿತ್ರಾ ಪರ ವಕೀಲರ ನೇಮಕ ಮಾಡಿರೋ ಸಮತಾ
12. ಜೈಲಿನಲ್ಲಿ ಪವಿತ್ರಾ ಜೊತೆ ಮಾತನಾಡಿರುವ ಸಮತಾ
13. ರೇಣುಕಾಸ್ವಾಮಿ ಮೆಸೇಜ್ ಬಗ್ಗೆ ತಿಳಿಸಿದ್ದ ಪವಿತ್ರಾ ಗೌಡ
14. ಪವಿತ್ರಾಳ ರೆಡ್ ಕಾರ್ಪೆಟ್ ನೋಡಿಕೊಳ್ಳುತ್ತಿರುವ ಸಮತಾ
15. ದರ್ಶನ್​​ಗೂ ಜೈಲಿನಲ್ಲಿ ಭೇಟಿಯಾಗಿರೋದ್ರಿಂದ ಪ್ರಶ್ನೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment