newsfirstkannada.com

ಕೊಲೆ ಕೇಸ್​ಗೆ ಟ್ವಿಸ್ಟ್​​.. 50 ದಿನವಾದ್ರೂ ಬಯಲಾಗದ ನಟ ದರ್ಶನ್​ ಐಫೋನ್​ ರಹಸ್ಯ; ಮುಂದೇನು?

Share :

Published August 12, 2024 at 6:23am

Update August 12, 2024 at 10:18am

    50 ದಿನಗಳು ಕಳೆದ್ರೂ ಬಯಲಾಗದ ದರ್ಶನ್ ಐಫೋನ್ ಸಿಕ್ರೇಟ್​

    ವಾಟ್ಸಾಪ್​ ಕಾಲ್​ ಡೀಟೇಲ್ಸ್​ಗಾಗಿ ಸಿಎಫ್​ಎಸ್​ಎಲ್​ಗೆ ರವಾನೆ

    ಆಪ್ತ ರಾಜಕಾರಣಿಗಳಿಗೆ ಹತ್ಯೆಯ ಮಾಹಿತಿ ನೀಡಿರುವ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಜೈಲು ಸೇರಿ 50 ದಿನಗಳೇ ಕಳೆದಿದೆ. ಪೊಲೀಸರು ಆರೋಪಿಗಳ ವಿರುದ್ಧದ ಸಾಕ್ಷಿಗಳನ್ನ ಕಲೆ ಹಾಕೋ ಎಲ್ಲಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ ಎಲ್ಲಾ ಟೆಕ್ನಿಕಲ್​ ಸಾಕ್ಷಿಗಳನ್ನ ಕಲೆಹಾಕ್ತಿರೋ ಪೊಲೀಸರಿಗೆ ದರ್ಶನ್​ ಅವರ ಐಪೋನ್​ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ.

ಜೂನ್​ 9ನೇ ತಾರೀಖು ಪತ್ತೆಯಾದ ರೇಣುಕಾಸ್ವಾಮಿ ಮೃತದೇಹ ಸುಮಾರು 17 ಮಂದಿಯನ್ನ ಜೈಲಿಗೆ ಹೋಗುವಂತೆ ಮಾಡಿತ್ತು. ಸಾಮಾನ್ಯ ವ್ಯಕ್ತಿಯಿಂದ ಸ್ಟಾರ್​ ಸೆಲೆಬ್ರೆಟಿ ಜೈಲಲ್ಲಿ ದಿನ ಕಳೆಯುವಂತೆ ಮಾಡಿದೆ. ಪೊಲೀಸರು ಆರೋಪಿಗಳ ವಿರುದ್ಧ ಸಾಕ್ಷಿ ಸಂಗ್ರಹದಲ್ಲಿ ಬ್ಯುಸಿಯಾಗಿದ್ದಾರೆ. FSL, ಎಲ್ಲರ ಮೊಬೈಲ್‌ ರಿಟ್ರೀವ್ ವರದಿ, DNA ರಿಪೋರ್ಟ್ ಮತ್ತು CCTV ರಿಟ್ರೀವ್ ವರದಿಗಳು ಬಹುತೇಕ ನಾಳೆ ಪೊಲೀಸರ ಕೈ ಸೇರೋ ಸಾಧ್ಯತೆ ಇದೆ. ಆದ್ರೆ ದರ್ಶನ್​ ಬಳಸುತ್ತಿದ್ದ ಐಫೋನ್​ ರಿಟ್ರೀವ್​ ಮಾಡೋದೇ ಪೊಲೀಸರಿಗೆ ದೊಡ್ಡ ಸವಾಲಾಗಿಬಿಟ್ಟಿದೆ.

ಇದನ್ನೂ ಓದಿ: ಭೀಕರ ಅಪಘಾತ.. ತುಮಕೂರು-ಬೆಂಗಳೂರು ರಾ.ಹೆದ್ದಾರಿಯಲ್ಲಿ ಮೂವರು ದಾರುಣ ಸಾವು

ಎರಡು ತಿಂಗಳಾದ್ರು ಬಯಲಾಗಿಲ್ಲ ದರ್ಶನ್ ಐ ಪೋನ್ ರಹಸ್ಯ.!

ಹೌದು ರೇಣುಕಾಸ್ವಾಮಿ ಕೊಲೆ ಬಳಿಕ ದರ್ಶನ್​ ಒಂದಷ್ಟು ಜನರ ಬಳಿ ವಾಟ್ಸಾಪ್​ ಕಾಲ್​ನಲ್ಲಿ ಮಾತನಾಡಿದ್ದಾರೆ. ಬಳಿಕ ಕಾಲ್​ ಡೀಟೇಲ್ಸ್​ನ ಡಿಲೀಟ್​ ಮಾಡಿದ್ದಾರೆ ಅನ್ನೋ ಮಾಹಿತಿ ಪಡೆದಿರೋ ಪೊಲೀಸರು, ದರ್ಶನ್​ ಯಾಱರ ಬಳಿ ಮಾತನಾಡಿದ್ದಾರೆ. ಏನ್​ ಮಾತಾಡಿದ್ದಾರೆ ಅನ್ನೋ ರಹಸ್ಯ ಕಂಡುಹಿಡಿಯೋಕೆ ಶತಾಯ ಗತಾಯ ಪ್ರಯತ್ನ ಮಾಡ್ತಿದ್ದಾರೆ. ಆದ್ರೆ ಆ ಐಫೋನ್​ ಸೀಕ್ರೆಟ್​ ಮಾತ್ರ ಇನ್ನೂ ಹೊರ ಬಂದಿಲ್ಲ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮಂಡ್ಯದಲ್ಲಿ ಗುಂಡಿನ ಸದ್ದು; ರೌಡಿ ಶೀಟರ್ ಕಾಲಿಗೆ ಗುಂಡೇಟು

CFSL ಗೆ ದರ್ಶನ್​ ಮೊಬೈಲ್​ ಶಿಫ್ಟ್​..!

ಹೈದರಾಬಾದ್​ನಲ್ಲಿರೋ ಸಿಎಫ್​ಎಸ್​ಎಲ್​ಗೆ ದರ್ಶನ್​ ಮೊಬೈಲ್​ನ ರಿಟ್ರೀವ್​ಗೆ ಕಳುಹಿಸಲಾಗಿದೆ. ಬೆಂಗಳೂರು ಎಫ್​ಎಸ್​ಎಲ್​ನಲ್ಲಿ ಐಫೋನ್​ ರಿಟ್ರೀವ್​ ಸಾಧ್ಯವಾಗಿರಲಿಲ್ಲ. ಹೀಗಾಗಿ ಹೈದರಾಬಾದ್​ಗೆ ಕಳುಹಿಸಲಾಗಿದ್ದು, ವಾಟ್ಸಾಪ್​ ಕಾಲ್​ ಡೀಟೇಲ್ಸ್​ ವರದಿ ಕೊಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಇನ್ನು ದರ್ಶನ್​ ಫೋನ್​ ರಿಟ್ರೀವ್ ಆದ್ರೆ ದರ್ಶನ್ ಆಪ್ತ ರಾಜಕಾರಣಿಗಳಿಗೆ ಸಂಕಷ್ಟ ಎದುರಾಗೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕಾರಣ ಕೊಲೆ ಬಳಿಕ ಆಪ್ತ ರಾಜಕಾರಣಿಗಳಿಗೆ ದರ್ಶನ್ ಹತ್ಯೆಯ ಮಾಹಿತಿ ನೀಡಿದ್ರು ಎನ್ನಲಾಗ್ತಿದೆ. ರಾಜಕಾರಣಿಗಳು, ಬ್ಯುಸಿನೆಸ್ ಮ್ಯಾನ್​ಗಳು ದರ್ಶನ್​ಗೆ ಸಹಾಯ ಮಾಡಿರುವ ಶಂಕೆ ಇದ್ದು, ರಿಟ್ರೀವ್ ರಿಪೋರ್ಟ್​​ಗಾಗಿ ಪೊಲೀಸರು ಕಾಯುತ್ತಿದ್ದಾರೆ. ಈ ವರದಿ ಬಂದ್ರೆ ಇನ್ನೊಂದಷ್ಟು ಜನರ ಹೇಳಿಕೆ ದಾಖಲಿಸೋ ಸಾಧ್ಯತೆ ಇದೆ.

ಇನ್ನು ಈಗಾಗಲೇ ದರ್ಶನ್‌ ಆವತ್ತು ತೊಟ್ಟಿದ್ದ ಬಟ್ಟೆಗಳನ್ನ ಎಫ್‌ಎಸ್‌ಎಲ್‌ಗೆ ಕಳುಹಿಸಿ ವರದಿ ತರಿಸಿಕೊಂಡಿರುವ ಪೊಲೀಸರು, ದರ್ಶನ್‌ ಬಟ್ಟೆಯಲ್ಲಿ ರಕ್ತದ ಕಲೆಗಳಿರುವುದನ್ನ ಕನ್ಫರ್ಮ್​ ಮಾಡ್ಕೊಂಡಿದ್ದಾರೆ. ಇನ್ನು ಮೊಬೈಲ್​ ರಿಟ್ರೀವ್​ ರಿಪೋರ್ಟ್​ ಕೂಡಾ ಬಂದ್ರೆ ಆದಷ್ಟು ಬೇಗ ಚಾರ್ಜ್ ಶೀಟ್​ ಕೂಡಾ ಸಲ್ಲಿಸ್ತಾರೆ ಅಂತ ಹೇಳಲಾಗ್ತಿದೆ. ಒಟ್ನಲ್ಲಿ ದರ್ಶನ್​ ವಿರುದ್ಧದ ಸಾಕ್ಷಿಗಳು ತುಂಬಾ ಬಲವಾಗ್ತಿದ್ದು, ವಿಚಾರಣಾಧೀನ ಕೈದಿಯಾಗಿರೋ ದರ್ಶನ್​ ಬಿಡುಗಡೆಯಾಗೋದು ಬಹುತೇಕ ಡೌಟ್​ ಅಂತ ಹೇಳಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಕೇಸ್​ಗೆ ಟ್ವಿಸ್ಟ್​​.. 50 ದಿನವಾದ್ರೂ ಬಯಲಾಗದ ನಟ ದರ್ಶನ್​ ಐಫೋನ್​ ರಹಸ್ಯ; ಮುಂದೇನು?

https://newsfirstlive.com/wp-content/uploads/2024/07/darshan_renuka.jpg

Load More