Advertisment

ಮುಲಾಜಿಲ್ಲದೇ ನಟ ದರ್ಶನ್ ಧರಿಸಿದ್ದ ವಿಗ್ ಬಿಚ್ಚಿಸಿದ ಪೊಲೀಸರು; ಕಾರಣವೇನು?

author-image
Bheemappa
Updated On
ನನಗೆ ಸಿಗರೇಟ್ ಬೇಕು.. ಟೆನ್ಷನ್​ನಲ್ಲಿರೋ ನಟ ದರ್ಶನ್‌ಗೆ ಪೊಲೀಸ್ರು ಚಾಕಲೇಟ್ ಕೊಟ್ಟು ಖಡಕ್ ವಾರ್ನಿಂಗ್!
Advertisment
  • ನಟ ದರ್ಶನ್ ವಿಗ್ ತೆಗೆಸಿದರ ಹಿಂದೆ ಇದೆಯಾ ಬಲವಾದ ಕಾರಣ?
  • ಪ್ರಕರಣ ಸಂಬಂಧ ಡಿಎನ್ಎ ಪರೀಕ್ಷೆಗೆ ಮುಂದಾಗಿರುವ ಪೊಲೀಸ್ರು
  • ಯಾವ ಆಸ್ಪತ್ರೆಗೆ ದರ್ಶನ್ ಆ್ಯಂಡ್ ಗ್ಯಾಂಗ್ ಅನ್ನು ಕರೆದೊಯ್ಯಲಾಗಿದೆ?

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್​ಗೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ವಿಚಾರಣೆ ನಡೆಯುತ್ತಿದೆ. ಸದ್ಯ ಮೆಡಿಕಲ್ ಚೆಕಪ್​​ಗಾಗಿ ಎಲ್ಲ ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ನಟ ದರ್ಶನ್ ಅವರು ತಲೆಗೆ ಹಾಕಿದ್ದ ವಿಗ್ ಅನ್ನು ಪೊಲೀಸರು ತೆಗೆಸಿದ್ದಾರೆ.

Advertisment

ಇದನ್ನೂ ಓದಿ:ದರ್ಶನ್ ಕೇಸ್​​ನಲ್ಲಿ ಸಚಿವರ ಒತ್ತಡ.. SPP ಬದಲಾವಣೆ ಆಗ್ತಾರಾ? ಸಿಎಂ ಸಿದ್ದು ಕೊಟ್ರು ಹೊಸ ಟ್ವಿಸ್ಟ್; ಏನದು?

ರೇಣುಕಾಸ್ವಾಮಿ ಕೊಲೆ ಪ್ರಕರಣ ಅತ್ಯಂತ ಚುರುಕಿನಿಂದ ನಡೆಯುತ್ತಿದೆ. ನಾಳೆ ಎಲ್ಲ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ತನಿಖೆಗಾಗಿ ಕೂದಲಿನ ಮಾದರಿ ಸಂಗ್ರಹಿಸಲು ನಟ ದರ್ಶನ್ ಧರಿಸಿದ್ದ ವಿಗ್ ಅನ್ನು ಪೊಲೀಸರು ತೆಗೆಸಿದ್ದಾರೆ. ಪ್ರಕರಣ ಸಂಬಂಧ ಡಿಎನ್ಎ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದಾರೆ.

ಇದನ್ನೂ ಓದಿ: ವಿರಾಟ್​ ಉಗ್ರರೂಪ, ಎದುರಾಳಿಗಳಿಗೆ ಖಡಕ್​ ವಾರ್ನ್​.. ಕೊಹ್ಲಿಗೆ ಕಂಟಕ ಆಗ್ತಾರಾ ಯಶಸ್ವಿ ಜೈಸ್ವಾಲ್?

Advertisment

publive-image

ಆರೋಪಿ ದರ್ಶನ್ ಅವರ ರಕ್ತ ಹಾಗೂ ಕೂದಲಿನ ಸ್ಯಾಂಪಲ್‌ ಅನ್ನು ಪೊಲೀಸರು ಪಡೆದಿದ್ದಾರೆ. ಕೊಲೆ ನಡೆದ ಜಾಗದಲ್ಲಿ ಪತ್ತೆಯಾದ ಕೂದಲು, ರಕ್ತ ಹೊಂದಾಣಿಕೆ ಮಾಡಲು ಸ್ಯಾಂಪಲ್ ಪಡೆಯಲಾಗಿದೆ. ದರ್ಶನ್ ಅವರು ಧರಿಸಿದ್ದ ವಿಗ್ ಅನ್ನು ತೆಗೆಸಿ ಕೂದಲಿನ ಸ್ಯಾಂಪಲ್ ಅನ್ನು ವೈದ್ಯರು ಪಡೆದುಕೊಂಡಿದ್ದಾರೆ. ನ್ಯೂಸ್ ಫಸ್ಟ್​ ಚಾನೆಲ್​ಗೆ ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment