/newsfirstlive-kannada/media/post_attachments/wp-content/uploads/2024/06/Darshan-Arrest-Case-6.jpg)
ರೇಣುಕಾಸ್ವಾಮಿಯ ಕೊಲೆ ಪ್ರಕರಣದ ಬೆನ್ನತ್ತಿರುವ ಪೊಲೀಸರಿಗೆ ಪಟ್ಟಣಗೆರೆ ಶೆಡ್ ಬಗ್ಗೆ ಅನುಮಾನಗಳು ಮೂಡತೊಡಗಿದೆ. ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿಯದ್ದು ಮಾತ್ರವಲ್ಲ, ಬೇರೆಯವರ ರಕ್ತದ ಗುರುತು ಕೂಡ ಎಫ್ಎಸ್ಎಲ್ ಪರಿಶೀಲನೆಯಲ್ಲಿ ಸಿಕ್ಕಿದ್ಯಂತೆ. ಹೀಗಾಗಿ ಪಟ್ಟಣಗೆರೆ ಶೆಡ್ನಲ್ಲಿ ವಿನಯ್ ಅಂಡ್ ಗ್ಯಾಂಗ್, ಮತ್ತಷ್ಟು ಅಪರಾಧ ಕೃತ್ಯಗಳನ್ನು ಎಸಗಿರುವ ಬಗ್ಗೆ ಪೊಲೀಸರಿಗೆ ಸಂಶಯ ಮೂಡಿದ್ದು, ಈ ಬಗ್ಗೆ ತನಿಖೆಗೆ ಮುಂದಾಗಿದ್ದಾರೆ.
ರಾಜರಾಜೇಶ್ವರಿ ನಗರದ ಪೆಟ್ಟಣಗೆರೆ ಎಂಬಲ್ಲಿರುವ ಒಂದು ಶೆಡ್. ಇಲ್ಲಿ ಪೊಲೀಸರಿಂದ ಸೀಜ್ ಆದ ವಾಹನಗಳು. ಸಾಲ ಕೊಡದವರಿಂದ ರಿಕವರಿ ಮಾಡಿಕೊಂಡು ಬಂದ ವಾಹನಗಳನ್ನು ಇಲ್ಲಿ ನಿಲ್ಲಿಸಲಾಗ್ತಿತ್ತು. ಇಷ್ಟು ದಿನ ಹೊರಜಗತ್ತಿಗೆ ಈ ಪಟ್ಟಣಗೆರೆ ಶೆಡ್ ಬಗ್ಗೆ ಇಷ್ಟೇ ಗೊತ್ತಿದ್ದು, ಆದ್ರೀಗ ರೇಣುಕಾಸ್ವಾಮಿಯ ಭೀಕರ ಹತ್ಯೆಯ ಬಳಿಕ ಪಟ್ಟಣಗೆರೆ ಶೆಡ್ನಲ್ಲಿ ಅಡಗಿದ್ದ ಅಪರಾಧ ಲೋಕ ಅನಾವರಣಗೊಳ್ಳತೊಡಗಿದೆ. ಎ.10 ಆರೋಪಿ ವಿನಯ್‌ನ ಉಸ್ತುವಾರಿಯಲ್ಲಿ ನಡೀತಿದ್ದ ಈ ಶೆಡ್ನಲ್ಲಿ, ಇನ್ನೂ ಹಲವು ಅಪರಾಧ ಕೃತ್ಯಗಳ ನಡೆದಿರಬಹುದು ಅನ್ನೋ ಅನುಮಾನ ಪೊಲೀಸರಿಗೆ ಮೂಡಿದೆ.
ಇದನ್ನೂ ಓದಿ: A1 ಪವಿತ್ರಾಗೌಡ ಅಸ್ವಸ್ಥ.. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಿಂದ ಆಸ್ಪತ್ರೆಗೆ ಶಿಫ್ಟ್!
ಪಟ್ಟಣಗೆರೆ ಶೆಡ್ನಲ್ಲಿ FSLಗೆ ಸಿಕ್ಕಿತ್ತಾ ಬೇರೆಯವರ ರಕ್ತದ ಕಲೆ?
ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ವಿನಯ್ ಅಂಡ್ ಗ್ಯಾಂಗ್ ಮೇಲೆ ಮತ್ತಷ್ಟು ಅನುಮಾನಗಳು ಮೂಡತೊಡಗಿದೆ. ಅದಕ್ಕೆ ಕಾರಣ ರೇಣುಕಾಸ್ವಾಮಿ ಕೊಲೆ ಸಂಬಂಧ ಪಟ್ಟಣಗೆರೆ ಶೆಡ್ನಲ್ಲಿ ಸ್ಥಳ ಮಹಜರು ಮಾಡುವಾಗ ಎಫ್ಎಸ್ಎಲ್ ತಂಡಕ್ಕೆ ಬೇರೆಯವರ ರಕ್ತದ ಕಲೆಯೂ ಸಿಕ್ಕಿದ್ಯಾಂತೆ. ಇದರಿಂದ ಪಟ್ಟಣಗೆರೆ ಶೆಡ್ನಲ್ಲಿ ವಿನಯ್ ಅಂಡ್ ಗ್ಯಾಂಗ್ ಈ ಹಿಂದೆ ಶೆಡ್ನಲ್ಲಿ ಬೇರೆಯವರ ಮೇಲೆ ಹಲ್ಲೆ ಮಾಡಿತ್ತಾ ಎಂಬ ಬಗ್ಗೆ ಪೊಲೀಸರಿಗೆ ಸಂಶಯ ಮೂಡಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ಪಟ್ಟಣಗೆರೆಯ ಶೆಡ್ನಲ್ಲಿ ಎಫ್ಎಸ್ಎಲ್ ಟೀಂಗೆ ಮೂರಿಂದ 4 ತಿಂಗಳ ಹಿಂದಿನ ಬ್ಲಡ್ ಸ್ಟೇನ್ಸ್ಗಳು ಸಿಕ್ಕಿವೆ. ಹೀಗಾಗಿ ವಿನಯ್ ಅಂಡ್ ಗ್ಯಾಂಗ್ ವ್ಯವಹಾರಿಕ ವಿಚಾರವಾಗಿ ಯಾರ ಮೇಲೆದಾದ್ರೂ ಹಲ್ಲೆ ಮಾಡಿದ್ದಾರಾ ಎಂಬ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ.. ಆದ್ರೆ ಹಲ್ಲೆಗೊಳಗಾದ ಯಾರು ಸಹ ದೂರು ನೀಡಲು ಮುಂದೆ ಬಂದಿಲ್ಲ. ಈ ಬಗ್ಗೆ ಆರೋಪಿಗಳನ್ನ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ..
ಇದನ್ನೂ ಓದಿ:ಅಪ್ಪನಿಲ್ಲದ ಮನೆಯಲ್ಲಿ ನಾನೂ ಇರಲ್ಲ.. ದರ್ಶನ್ ಜೈಲು ಸೇರಿದ ಬೆನ್ನಲ್ಲೇ ವಿನೀಶ್ ಎಲ್ಲಿದ್ದಾರೆ?
ರೇಣುಕಾಸ್ವಾಮಿ ಬಗ್ಗೆ ಗೊತ್ತಿಲ್ಲ ಎಂದ ಶೆಡ್ ಮಾಲೀಕ ಜಯಣ್ಣ
ಪಟ್ಟಣಗೆರೆಯ ಈ ಶೆಡ್ ಜಯಣ್ಣ ಎಂಬುವರಿಗೆ ಸೇರಿದ್ದು. ಇದನ್ನು ಜಯಣ್ಣ ಸಂಬಂಧಿಯೇ ಆಗಿರೋ ವಿನಯ್ ನೋಡಿಕೊಳ್ತಾನೆ. ಪಟ್ಟಣಗೆರೆ ಶೆಡ್ನಲ್ಲಿ ಏನ್ ಆಗ್ತಿತ್ತು ಅನ್ನೋ ಬಗ್ಗೆ ಮಾಲೀಕ ಜಯಣ್ಣಗೆ ಮಾಹಿತಿಯೇ ಇಲ್ವಂತೆ. ಇನ್ನು ನಟ ದರ್ಶನ್ ಶೆಡ್ಗೆ ಎರಡು ಬಾರಿ ಭೇಟಿ ಕೊಟ್ಟಿದ್ದು, ಬಿಟ್ರೆ ಮೊನ್ನೆ ರೇಣುಕಾಸ್ವಾಮಿಯನ್ನ ಕರೆತಂದಿದ್ದು ಗೊತ್ತಿರಲಿಲ್ಲ. ಸಿಸಿ ಕ್ಯಾಮೆರಾದ ಡಿವಿಆರ್ಅನ್ನು ಪೊಲೀಸರು ತೆಗೆದೊಂಡು ಹೋಗಿದ್ದಾರೆ ಅನ್ನೋದು ಶೆಡ್ನ ಮಾಲೀಕ ಜಯಣ್ಣರ ವಾದ.
ಪಟ್ಟಣಗೆರೆ ಶೆಡ್ ಬಗ್ಗೆ ಸ್ಥಳೀಯ ಜನರಿಗೆ ಇಷ್ಟು ದಿನ, ಸೀಜ್ ಮಾಡಿದ ವಾಹನಗಳನ್ನು ನಿಲ್ಲಿಸುತ್ತಿದ್ದ ಜಾಗ ಎಂದು ತಿಳಿದಿತ್ತು. ಆದ್ರೆ, ಆ ಶೆಡ್ಗೆ ಪೊಲೀಸರು ಕಾಲಿಡ್ತಿದ್ದಂತೆ ಮತ್ತಷ್ಟು ರಹಸ್ಯಗಳು ಬಯಲಾಗ್ತಿದ್ದು, ವಿನಯ್ ಅಂಡ್ ಗ್ಯಾಂಗ್ನ ಅಸಲಿ ಮುಖವಾಡ ಬಯಲಿಗೆ ಬರತೊಡಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ