/newsfirstlive-kannada/media/post_attachments/wp-content/uploads/2024/06/renukaswami2.jpg)
ದರ್ಶನ್​​ ಮತ್ತು ಟೀಂನಿಂದ ಕೊಲೆಯಾದ ರೇಣುಕಾಸ್ವಾಮಿ ಕಾಮೆಂಟ್​ ವಿಚಾರಕ್ಕೆ ಕೊಲೆಯಾಗಿರುವ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಆದರೀಗ ಕೊಲೆಯಾದ ವ್ಯಕ್ತಿ ದಿನಕ್ಕೆ ಎಷ್ಟು ಗಂಟೆ ಸಾಮಾಜಿಕ ಜಾಲತಾಣ ಬಳಸುತ್ತಿದ್ದರು ಎಂಬ ಸಂಗತಿ ಹೊರಬಿದ್ದಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಫೇಸ್​ಬುಕ್, ಇನ್​ಸ್ಟಾಗ್ರಾಂನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದನು. ಫೋಟೋ, ವಿಡಿಯೋಗಳಿಗೆ ಕಾಮೆಂಟ್ಸ್ ಮಾಡ್ತಿದ್ದನು. ಪೊಲೀಸ್​ ತನಿಖೆಯ ವೇಳೆ ರೇಣುಕಾಸ್ವಾಮಿ ಬಳಸುತ್ತಿದ್ದ ಸಾಧನದ ಸ್ಕ್ರೀನ್ ಟೈಂ ಪರಿಶೀಲನೆ ಮಾಡಲಾಗಿದೆ.
ತನಿಖೆಯಲ್ಲಿ ರೇಣುಕಾಸ್ವಾಮಿ ಸೋಶಿಯಲ್ ಮೀಡಿಯಾದಲ್ಲೇ 5 ಗಂಟೆಗೂ ಹೆಚ್ಚು ಸಮಯ ಕಳೆಯುತ್ತಿದ್ದರು ಎಂಬುದು ತಿಳಿದುಬಂದಿದೆ. ಫೇಸ್​ಬುಕ್, ಇನ್ಸ್​ಗ್ರಾಂನಲ್ಲಿ ದಿನದ 5 ಗಂಟೆಗೂ ಹೆಚ್ಚು ಸಮಯ ಮೀಸಲಿಡುತ್ತಿದ್ದರು. ಅಪೋಲೊ ಫಾರ್ಮಸಿಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ರೇಣುಕಾ ರೀಲ್ಸ್ ನೋಡುವ ಗೀಳು ಬೆಳಸಿಕೊಂಡಿದ್ದರು.
ಇದನ್ನೂ ಓದಿ: ಪವಿತ್ರಾ ಗೌಡಳನ್ನು ಕಾಣಲು ಠಾಣೆಗೆ ಬಂದ ಖುಷಿ.. ತಾಯಿಯ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ ಮಗಳು
ರೇಣುಕಾಸ್ವಾಮಿ ಅತೀ ಹೆಚ್ಚು ಸಮಯ ಪೋನ್ ಬಳಕೆ ಮಾಡುತ್ತಿದ್ದರು. ಗಂಟೆಗಟ್ಟಲೇ ರೀಲ್ಸ್ ಸ್ಕ್ರೋಲ್ ಮಾಡ್ತಿದ್ದ ಡಾಟಾ ಪೊಲೀಸರಿಗೆ ಪತ್ತೆಯಾಗಿದೆ. ಸ್ಕ್ರೀನ್ ಟೈಂ ಪರಿಶೀಲನೆ ಮಾಡಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us