ನಮ್ಮ ಮಗನೇ ಹುಟ್ಟಿ ಬಂದಷ್ಟು ಸಂತೋಷ.. ರೇಣುಕಾಸ್ವಾಮಿ ನೆನೆದು ಕಣ್ಣೀರಿಟ್ಟ ತಂದೆ

author-image
AS Harshith
Updated On
ನಮ್ಮ ಮಗನೇ ಹುಟ್ಟಿ ಬಂದಷ್ಟು ಸಂತೋಷ.. ರೇಣುಕಾಸ್ವಾಮಿ ನೆನೆದು ಕಣ್ಣೀರಿಟ್ಟ ತಂದೆ
Advertisment
  • ಗಂಡು ಮಗುವಿಗೆ ಜನ್ಮವಿತ್ತ ರೇಣುಕಾಸ್ವಾಮಿ ಪತ್ನಿ
  • ಮೊಮ್ಮಗನನ್ನು ನೋಡಿ ಖುಷಿಯಲ್ಲಿ ತೇಲಾಡಿದ ಅಜ್ಜ
  • ಮಗನನ್ನು ಕಳೆದುಕೊಂಡು ಕಣ್ಣೀರು ಹಾಕಿದ ರೇಣುಕಾಸ್ವಾಮಿ ತಂದೆ

ಚಿತ್ರದುರ್ಗ: ದರ್ಶನ್​​ ಮತ್ತು ಗ್ಯಾಂಗ್​ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಗಂಡು ಮಗುವನ್ನ ಕುಟುಂಬಕ್ಕೆ ಬರಮಾಡಿಕೊಂಡ ರೇಣುಕಾಸ್ವಾಮಿ ತಂದೆ ಸಂತಸದ ನಗು ಬೀರಿದ್ದಾರೆ.

ಮಗನ ನೆನಪಿನಲ್ಲೇ ಕಳೆಯುತ್ತಿದ್ದ ರೇಣುಕಾಸ್ವಾಮಿ ತಂದೆ ಕಾಶೀನಾಥ ಶಿವನಗೌಡ್ರ ಮೊಮ್ಮಗ ಬಂದ ಬಳಿಕ ಮಾಧ್ಯಮಗಳ ಮುಂದೆ ಮೊದಲ ಬಾರಿಗೆ ನಗು ಬೀರಿ ಮಾತನಾಡಿದ್ದಾರೆ. ನಮ್ಮ ಮಗನೇ ಹುಟ್ಟಿ ಬಂದಷ್ಟು ಸಂತೋಷವಾಗಿದೆ ಎಂದಿದ್ದಾರೆ.

ಕಣ್ಣೀರು ಹಾಕುತ್ತಲೇ ಮಗ ರೇಣುಕಾಸ್ವಾಮಿಯನ್ನು ಕಾಶೀನಾಥ ಶಿವನಗೌಡ್ರ ನೆನೆದಿದ್ದಾರೆ. ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತುಂಬಾ ಕಾಳಜಿ ವಹಿಸಿದ್ದಾರೆ. ನಾನು ವೈದ್ಯರು ಹಾಗೂ ಸಿಬ್ಬಂದಿಗೆ ಚಿರರುಣಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್​​ ಖಾನನ್ನು ಕೊಲ್ಲುವುದೇ ಲಾರೆನ್ಸ್​ ಬಿಷ್ಣೋಯ್​ ಗುರಿ! ಖ್ಯಾತ ನಿರ್ದೇಶಕ ಹೀಗಂದಿದ್ಯಾಕೆ?

ರೇಣುಕಾಸ್ವಾಮಿ ಹೆಂಡತಿ ಸಹನಾ ಇಂದು ಬೆಳಗಿನ ಜಾವ 7 ಗಂಟೆ 1 ನಿಮಿಷಕ್ಕೆ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾರೆ. ಸಹನಾ ನಗರದ  ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗುವನ್ನ ಹೆತ್ತಿದ್ದಾರೆ.

ಇದನ್ನೂ ಓದಿ: Breaking News: ಮತ್ತೆ ಹುಟ್ಟಿ ಬಂದ ರೇಣುಕಾಸ್ವಾಮಿ! ಮುದ್ದಾದ ಗಂಡು ಮಗುವನ್ನು ಬರಮಾಡಿಕೊಂಡ ಕುಟುಂಬ

ರೇಣುಕಾಸ್ವಾಮಿ ಹತ್ಯೆ ಸಮಯದಲ್ಲಿ ಪತ್ನಿ ಸಹನಾ ಗರ್ಭಿಣಿಯಾಗಿದ್ದು, ಮನೆಯಲ್ಲಿಯೇ ವಿಶ್ರಾಂತಿಯಲ್ಲಿದ್ದರು. ಇದೇ ಸಮಯದಲ್ಲಿ ದರ್ಶನ್​​ ಮತ್ತು ಗ್ಯಾಂಗ್​ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಿ ಕೊಲೆ ಮಾಡಿದ್ದರು. ಈಗ ದರ್ಶನ್​ ಬಳ್ಳಾರಿ ಜೈಲಿನಲ್ಲಿದ್ದು, ಬೇಲ್​ಗಾಗಿ ಹೋರಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment