/newsfirstlive-kannada/media/post_attachments/wp-content/uploads/2024/06/darshan23.jpg)
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಬಹಳ ಕುತೂಹಲದಿಂದ ಸಾಗುತ್ತಿದೆ. ದರ್ಶನ್​ ಆ್ಯಂಡ್​ ಗ್ಯಾಂಗನ್ನು ಪೊಲೀಸರು ಬಿಟ್ಟು ಬಿಡದೆ ಪ್ರಶ್ನಿಸುತ್ತಿದ್ದಾರೆ. ಆದರೆ ವಿಚಾರಣೆ ಎದುರಿಸಿ ಬೇಸತ್ತ ನಟ ದರ್ಶನ್​ ಪೊಲೀಸರ ಮುಂದೆ ಸ್ವ- ಇಚ್ಚಾ ಹೇಳಿಕೆ ನೀಡಿದ್ದಾರೆ.
ಪೊಲೀಸ್, ಲಾಯರ್​ಗಳಿಗೆ ಹಣ
ಕೊಲೆಯಾದ ರೇಣುಕಾಸ್ವಾಮಿ ಮೃತದೇಹವನ್ನು ವಿಲೇವಾರಿ ಮಾಡುವಂತೆ ದರ್ಶನ್​ ಹೇಳಿದ್ದರಂತೆ. ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು ಎಂದು ಸೂಚಿಸಿದ್ದರಂತೆ. ಮಾತ್ರವಲ್ಲದೆ, ಪೊಲೀಸ್, ಲಾಯರ್, ಶವ ಸಾಗಿಸೋ ವ್ಯಕ್ತಿಗಳಿಗೆ ದರ್ಶನ್​ ಹಣ ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ರದೋಶ್​ಗೆ 30 ಲಕ್ಷ ಹಣ ನೀಡಿದ್ದಾಗಿ ಪೊಲೀಸರ ಮುಂದೆ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/06/DARSHAN-33.jpg)
ಎರಡು ಕಡೆ ಭರ್ಜರಿ ಪಾರ್ಟಿ
ರೇಣುಕಾಸ್ವಾಮಿ ಹತ್ಯೆ ಬಳಿಕ ಎರಡೆರಡು ಕಡೆ ಎಣ್ಣೆ ಪಾರ್ಟಿ ಮಾಡಲಾಗಿದೆ. ಜೂನ್ 8ರ ರಾತ್ರಿ ಎರಡು ತಂಡಗಳಾಗಿ ಬೇರೆ ಬೇರೆ ಕಡೆ ಪಾರ್ಟಿ ಮಾಡಿದ್ದಾರೆ. ದರ್ಶನ್, ವಿನಯ್, ದೀಪಕ್, ಪ್ರದೋಶ್, ನಾಗರಾಜ್ ಒಂದ್ಕಡೆ ಪಾರ್ಟಿ ಮಾಡಿದ್ದಾರೆ. ಆರ್.ಆರ್.ನಗರದ ಸ್ಟೋನಿ ಬ್ರೂಕ್​​​ ಹೋಟೆಲ್​​​ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ.
ಇದನ್ನೂ ಓದಿ: ದರ್ಶನ್ ರಕ್ಷಿಸಲು ಸಚಿವರು, ಶಾಸಕರ ಯತ್ನ! ಕೊನೆಗೆ ಪ್ರಕರಣದ SPP ಬದಲಾಯಿಸಲು ಶುರುವಾದ ಷಡ್ಯಂತ್ರ!
/newsfirstlive-kannada/media/post_attachments/wp-content/uploads/2024/06/darshan18.jpg)
ಅತ್ತ ಶವ ಬೀಸಾಡಿದ ನಂತರ ಕಾರ್ತಿಕ್, ಕೇಶವ್, ನಿಖಿಲ್​ ಕೂಡ ಎಣ್ಣೆ ಪಾರ್ಟಿ ಮಾಡಿದ್ದಾರೆ. ಆರ್.ಆರ್.ನಗರದ ಟ್ರೋಬೋ 98 ಸ್ಟ್ರೀಟ್ ರೆಸ್ಟೋರೆಂಟ್​​​ಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ದೀಪಕ್ ನೀಡಿದ ಹಣದಲ್ಲಿ ಆರೋಪಿಗಳು ಹೋಟೆಲ್​​​ನಲ್ಲಿ ಪಾರ್ಟಿ ಮಾಡಿದ್ದರು.
11 ದಿನಗಳಿಂದ ರೇಣುಕಾಸ್ವಾಮಿ ಮೊಬೈಲ್​​ಗಾಗಿ ಶೋಧ
ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ಸತತ 11 ದಿನಗಳಿಂದ ರೇಣುಕಾಸ್ವಾಮಿ ಮೊಬೈಲ್​​ಗಾಗಿ ಶೋಧ ನಡೆಯುತ್ತಿದೆ. 5ನೇ ಆರೋಪಿ ರಾಘವೇಂದ್ರ ಮತ್ತು ಪ್ರದೋಶ್ ಸಾವನ್ನಪ್ಪಿರುವ ವ್ಯಕ್ತಿಯ ಮೊಬೈಲ್ ಬಿಸಾಡಿದ್ದರು.
/newsfirstlive-kannada/media/post_attachments/wp-content/uploads/2024/06/darshan-4.jpg)
ರೇಣುಕಾಸ್ವಾಮಿ ಮೊಬೈಲನ್ನು ಸುಮನಹಳ್ಳಿ ಬಳಿ ಬಿಸಾಡಿದ್ದಾಗಿ ಪ್ರದೋಶ್ ಹೇಳಿದ್ದಾರೆ. ಕೊಲೆಗೂ ಮುನ್ನ ಶೆಡ್​​​ನಲ್ಲಿ ಹಲ್ಲೆ ದೃಶ್ಯ ಮೊಬೈಲ್​​ನಲ್ಲಿ ಆರೋಪಿಗಳು ಚಿತ್ರೀಕರಿಸಿದ್ದರು. ಹೀಗಾಗಿ ಪ್ರದೋಶ್ ಮೊಬೈಲ್ ಬಿಸಾಡಿದ್ದ ಸ್ಥಳದಲ್ಲಿ ಪೊಲೀಸರಿಂದ ಮಹಜರು ಮಡಿದ್ದಾರೆ. ಎಷ್ಟೇ ಹುಡುಕಾಡಿದ್ದರೂ ಇಬ್ಬರ ಮೊಬೈಲ್​ಗಳು ಪತ್ತೆಯಾಗಿಲ್ಲ.
ಇನ್ನು ಈ ಪ್ರಕರಣದಲ್ಲಿ ರೇಣುಕಾ, ರಾಘು ಮೊಬೈಲ್​ಗಳು ಪ್ರಮುಖ ಸಾಕ್ಷ್ಯಗಳಾಗಿವೆ. ಪೊಲೀಸರಿಗೆ ಮೊಬೈಲ್ ಸಿಗದಿದ್ದರಿಂದ ಅಗ್ನಿಶಾಮಕ ದಳದ ಮೊರೆ ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us