/newsfirstlive-kannada/media/post_attachments/wp-content/uploads/2024/06/Renukaswamy-Wife-crying.jpg)
- ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಅವರಿಗೆ ಪೊಲೀಸ್ ಕಸ್ಟಡಿ!
- ನನಗೆ ನ್ಯಾಯ ಕೊಡಿಸಿ ಎಂದು ಮೃತ ಯುವಕ ರೇಣುಕಾ ಸ್ವಾಮಿ ಹೆಂಡತಿ ಕಣ್ಣೀರು
- ‘ಮದುವೆ ಆಗಿ 1 ವರ್ಷ ಆಗಿದೆ, ಮಗುವಿನ ಜವಾಬ್ದಾರಿ ಯಾರದು’ ಎಂದು ಪ್ರಶ್ನೆ
ಬೆಂಗಳೂರು: ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರೋ ಯುವಕನ ಕೊಲೆ ಕೇಸಲ್ಲಿ ನಟ ಚಾಲೆಂಜಿಂಗ್​ ಸ್ಟಾರ್​​ ದರ್ಶನ ಅವರಿಗೆ 24ನೇ ಎಸಿಎಂಎಂ ಕೋರ್ಟ್​ ಬಿಗ್​ ಶಾಕ್​ ನೀಡಿದೆ. ದರ್ಶನ್​ ಮತ್ತು ಗ್ಯಾಂಗ್​​ಗೆ ಬರೋಬ್ಬರಿ 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಇನ್ನು, ಈ ಮಧ್ಯೆ ಮೃತ ರೇಣುಕಾ ಸ್ವಾಮಿ ಎಂಬ ಪತ್ನಿ ಸಹನಾ ಮಾತಾಡಿದ್ದಾರೆ. ನನ್ನ ಮನೆಯವರನ್ನು ಕೊಂದು ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ. ನಾನು ಒಂದು ಮನೆ ಗೃಹಿಣಿ ಆಗಿದ್ದೀನಿ, ಗಂಡನನ್ನು ಕಳೆದುಕೊಂಡಿದ್ದೀನಿ. ಹೀಗೆ ಆಗಬಾರದಿತ್ತು ಎಂದು ಕಣ್ಣೀರಿಟ್ಟಿದ್ದಾರೆ.
ಮದುವೆ ಆಗಿ ಕೇವಲ 1 ವರ್ಷ ಆಗಿದೆ. ತಾಯಿ ಬೇರೆ ಆಗ್ತೀದಿನಿ, ನನ್ನ ಗಂಡ ಇಲ್ಲ. ನಾನು ಈಗ ಏನು ಮಾಡಲಿ. ಮೊನೆಯಷ್ಟೇ ಕರೆ ಮಾಡಿ ಮಾತಾಡಿದ್ದು ಕೊನೆ. ನನ್ನ ಗಂಡ ದರ್ಶನ್​ ಅಭಿಮಾನಿ ಅಲ್ಲ. ನಾನು ಮುಂದೆ ಜೀವನ ಮಾಡೋದು ಹೇಗೆ? ಎಂದು ತಮ್ಮ ಅಳಲು ತೋಡಿಕೊಂಡರು.
ದರ್ಶನ್​ ಮೇಲೆ ಆರೋಪ ಕೇಳಿ ಬಂದಿದೆ. ಅವರಿಗೆ ನ್ಯಾಯ ಕೊಡಿಸಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ನನ್ನ ಮಗುವಿಗೆ ಯಾರು ಸಹಾಯ ಮಾಡುತ್ತಾರೆ. ನಮಗೆ ನ್ಯಾಯ ಕೊಡಿಸಿ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ