6 ವರ್ಷ, 8 ತಿಂಗಳು.. ಸಿಕ್ಕಿಲ್ಲ ಮತ್ತೊಬ್ಬ ಪಾಂಡ್ಯ.. ಟೀಂ ಇಂಡಿಯಾದ ಈ ಕೊರಗಿಗೆ ಮುಕ್ತಿ ಯಾವಾಗ?

author-image
Ganesh
Updated On
6 ವರ್ಷ, 8 ತಿಂಗಳು.. ಸಿಕ್ಕಿಲ್ಲ ಮತ್ತೊಬ್ಬ ಪಾಂಡ್ಯ.. ಟೀಂ ಇಂಡಿಯಾದ ಈ ಕೊರಗಿಗೆ ಮುಕ್ತಿ ಯಾವಾಗ?
Advertisment
  • ಟೀಮ್ ಇಂಡಿಯಾಗೆ ಸಿಕ್ಕಿಲ್ಲ ಪಾಂಡ್ಯಗೆ ಪರ್ಯಾಯ
  • ಇಂಗ್ಲೆಂಡ್ ಪ್ರವಾಸದ ಹೊತ್ತಲ್ಲಿ ಮತ್ತೆ ಕಾಡ್ತಿದೆ ಪ್ರಶ್ನೆ
  • ಪಾಂಡ್ಯಗೆ ನಿತಿಶ್​, ಶಾರ್ದೂಲ್ ಉತ್ತರಾಧಿಕಾರಿನಾ..?

ಫಾಸ್ಟ್​ ಬೌಲಿಂಗ್ ಆಲೌಂಡರ್. ಟೀಮ್​ ಇಂಡಿಯಾದಲ್ಲಿ ಈ ಶಬ್ಧ ಕೇಳಿದಾಗೆಲ್ಲಾ ಹಾರ್ದಿಕ್ ಪಾಂಡ್ಯ ಹೆಸರು ನೆನಪಾಗ್ತಿತ್ತು. ಟೀಮ್ ಇಂಡಿಯಾಗೆ ಸಿಕ್ಕ ಒಳ್ಳೆಯ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್. ಆದರೆ ಇವರು ಟೆಸ್ಟ್​ನಿಂದ ದೂರ ಉಳಿದು 7 ವರ್ಷಗಳೇ ಕಳೆದಿದೆ. ಇವರ ಉತ್ತರಾಧಿಕಾರಿ ಮಾತ್ರ ಇನ್ನೂ ಸಿಕ್ಕಿಲ್ಲ.

2018.. ಸೆಪ್ಟೆಂಬರ್ 2.. ಸೌತಾಂಪ್ಟನ್ ಟೆಸ್ಟ್ ಕೊನೆ​​..!

2018 ಸೆಪ್ಟೆಂಬರ್ 2. ಸೌತಾಂಪ್ಟನ್​ನಲ್ಲಿ ನಡೆದ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯ​. ಈ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ 60 ರನ್ ಗಳ ಹೀನಾಯ ಸೋಲು ಕಂಡಿತ್ತು. ಈ ಟೆಸ್ಟ್ ಪಂದ್ಯ ನಡೆದು ಬರೋಬ್ಬರಿ 6 ವರ್ಷ 8 ತಿಂಗಳೇ ಕಳೆದಿವೆ. ಈ ಸೋಲನ್ನೂ ಮರೆತು ಮುಂದೆ ಸಾಗಿದ್ದಾಗಿದೆ. ಇದೇ ಅವಧಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯನೂ ಬಿಟ್ಟು ಮುಂದೆ ಸಾಗಿದ್ದಾಗಿದೆ.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಲೌಂಡರ್, ವೈಟ್​ ಜರ್ಸಿಯಲ್ಲಿ ಕಂಡು 2462 ದಿನಗಳು ಉರುಳಿವೆ. ಈ 7 ವರ್ಷದಲ್ಲಿ ಟೀಮ್ ಇಂಡಿಯಾ ಹಲವು ಟೆಸ್ಟ್​ ಪಂದ್ಯಗಳನ್ನಾಡಿದೆ. ಸೋಲು-ಗೆಲುವು ಎಲ್ಲವನ್ನೂ ಕಂಡಿದೆ. ಟೀಮ್ ಇಂಡಿಯಾಗೆ ಮಾತ್ರ ಓರ್ವ ಸಮರ್ಥ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್​​ನ ಕೊರಗು ಬಿಟ್ಟೂ ಬಿಡದೇ ಕಾಡಿದೆ.

ಇದನ್ನೂ ಓದಿ: ಪತ್ನಿಯ ಹುಟ್ಟುಹಬ್ಬದಂದು ಕಣ್ಣೀರು.. ಸೋತು ಗೆದ್ದ ಕನ್ನಡಿಗ ಕರುಣ್ ನಾಯರ್..​

publive-image

ಟೀಮ್ ಇಂಡಿಯಾಗೆ ಸಿಕ್ಕಿಲ್ಲ ಪಾಂಡ್ಯಗೆ ಪರ್ಯಾಯ

2018ರಲ್ಲಿ ಬ್ಯಾಕ್ ಇಂಜುರಿಗೆ ತುತ್ತಾಗಿದ್ದ ಹಾರ್ದಿಕ್, ಸರಿ ಸುಮಾರು 1 ವರ್ಷ ಕ್ರಿಕೆಟ್​ನಿಂದಲೇ ದೂರ ಉಳಿದಿದ್ದರು. ಬಳಿಕ ಕಮ್​ಬ್ಯಾಕ್​ ಮಾಡಿದ್ರೂ ವೈಟ್​ ಬಾಲ್​ ಫಾರ್ಮೆಟ್​​ಗೆ ಮಾತ್ರವೇ ಸಿಮೀತವಾಗಿದ್ದಾರೆ. ಈ ಅವಧಿಯಲ್ಲಿ ಟೀಮ್ ಇಂಡಿಯಾ, ಸಮರ್ಥ ಫಾಸ್ಟ್​ ಬೌಲಿಂಗ್ ಆಲ್​ರೌಂಡರ್​ ಇಲ್ಲದ, 2021,2023ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್ ಸೋತಿತ್ತು. ಇದಕ್ಕೆ ಕಾರಣ ಇಂಗ್ಲೆಂಡ್​ನಂತ ಪಿಚ್​​​ನಲ್ಲಿ ಕಾಡಿದ್ದ ಫಾಸ್ಟ್​ ಬೌಲಿಂಗ್​ ಆಲ್​ರೌಂಡರ್​​ ಕೊರತೆ. ಆದ್ರೀಗ ಮತ್ತೆ ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾಗಿರುವ ಟೀಮ್ ಇಂಡಿಯಾದಲ್ಲಿ ಮತ್ತದೇ ಫಾಸ್ಟ್ ಬೌಲಿಂಗ್ ಆಲ್​ರೌಂಡರ್ ಪ್ರಶ್ನೆ ಹುಟ್ಟಿಕೊಂಡಿದೆ.

ಪಾಂಡ್ಯಗೆ ನಿತಿಶ್​, ಶಾರ್ದೂಲ್ ಉತ್ತರಾಧಿಕಾರಿನಾ?

ಹಾರ್ದಿಕ್ ಪಾಂಡ್ಯ ಅಲಭ್ಯತೆಯಲ್ಲಿ ಟೀಮ್ ಇಂಡಿಯಾಗೆ ಹಲವು ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ಸ್ ಬಂದಿದ್ದಾರೆ. ಅವರಲ್ಲಿ ಯಾರೂ ಸಮರ್ಥವಾಗಿ ಹಾರ್ದಿಕ್​ಗೆ ಸಾಟಿಯಾಗಲಿಲ್ಲ. ಕನಿಷ್ಠ ಕಾಂಪಿಟೇಟರ್​ಗಳಾಗಿಯೂ ಉಳಿಯಲಿಲ್ಲ. ಪಾಂಡ್ಯಗೆ ಉತ್ತರಾಧಿಕಾರಿಗಳಾಗಿ ನಿತಿಶ್ ಕುಮಾರ್ ರೆಡ್ಡಿ, ಶಾರ್ದೂಲ್ ಠಾಕೂರ್ ಕಾಣಿಸಿಕೊಳ್ತಿದ್ದಾರೆ. ಇವರಿಬ್ಬರು ಸಮರ್ಥ ಆಲ್​ರೌಂಡರ್​ಗಳಂದ್ರೆ ನಿಜಕ್ಕೂ ಉತ್ತರ ಇಲ್ಲದ ಪ್ರಶ್ನೆಯೇ ಆಗಿದೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿದ್ದ ನಿತಿಶ್ ಕುಮಾರ್ ರೆಡ್ಡಿ, ಹಾರ್ದಿಕ್ ಸ್ಥಾನ ತುಂಬ್ತಾರೆ ಎಂಬ ನಿರೀಕ್ಷೆಯೇ ದಟ್ಟವಾಗಿತ್ತು. ಆ ಸರಣಿಯಲ್ಲಿ ನಿತಿಶ್ ಕುಮಾರ್ ರೆಡ್ಡಿ, 1 ಶತಕ ಒಳಗೊಂಡ 298 ರನ್​​​​​​​​​​ ಸಿಡಿಸಿದ್ದು ಬಿಟ್ರೆ, ಬೌಲಿಂಗ್​ನಲ್ಲಿ ಕಮಾಲ್​ ಮಾಡಲಿಲ್ಲ. 5 ಪಂದ್ಯಗಳಿಂದ ಕೇವಲ 5 ವಿಕೆಟ್ ಮಾತ್ರವೇ ಬೇಟೆಯಾಡಿದ ನಿತಿಶ್​, ನಿಜಕ್ಕೂ ಪಾಂಡ್ಯಗೆ ಪರ್ಯಾಯವಾ ಎಂಬ ಪ್ರಶ್ನೆ ಆಸ್ಟ್ರೇಲಿಯಾದಲ್ಲೇ ಹುಟ್ಟಿಕೊಂಡಿತ್ತು..

ಇದನ್ನೂ ಓದಿ: ABD ಮೇಲೆ ಕೊಹ್ಲಿಗೆ ಕೋಪ.. ತಿಂಗಳುಗಟ್ಟಲೇ ಮಾತಿಲ್ಲ, ಕಥೆಯಿಲ್ಲ.. ಈ ಸ್ಟೋರಿ ಗೊತ್ತಾ ನಿಮಗೆ..?

ನಿತಿಶ್ ಕುಮಾರ್ ರೆಡ್ಡಿ ಮಾತ್ರವೇ ಅಲ್ಲ. ಇಂಗ್ಲೆಂಡ್ ಪ್ರವಾಸಕ್ಕೆ ಆಣಿಯಾಗಿರುವ ಶಾರ್ದೂಲ್ ಠಾಕೂರ್ ಬಗ್ಗೆಯೂ ಅನುಮಾನ ಇದೆ. 2021-23ರ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಶಾರ್ದೂಲ್, 8 ಇನ್ನಿಂಗ್ಸ್​ಗಳಿಂದ 10 ವಿಕೆಟ್ ಉರುಳಿಸಿ, 2 ಅರ್ಧಶತಕ ಒಳಗೊಂಡ 122 ರನ್ ಗಳಿಸಿದ್ದಾರೆ. ಹೀಗಾಗಿ ಶಾರ್ದೂಲ್, ಓರ್ವ ಜನ್ಯೂನ್ ಆಲ್​ರೌಂಡರ್ ಎನ್ನಲು ಸಾಧ್ಯವಿಲ್ಲ.

ಹರ್ಷಿತ್ ರಾಣಾ, ಶಾರ್ದೂಲ್ ಠಾಕೂರ್ ಹೊರತುಪಡಿಸಿ, ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಆಲ್​ರೌಂಡರ್ ಮತ್ಯಾರು ಎಂಬ ಪ್ರಶ್ನೆಗೆ ಉತ್ತರ ಭಾರತ ಎ ತಂಡದಲ್ಲಿನ ಮೂವರು ಆಟಗಾರರು ಆಗಿದ್ದಾರೆ. ಈ ಪೈಕಿ ಒಬ್ಬ ಅರ್ಶಿನ್ ಕುಲಕರ್ಣಿ, ಮತ್ತೊಬ್ಬ ಕೃಷ್​​​​​​​​ ಭಗತ್, ಮಗದೊರ್ವ ಜಮೀತ್ ಪಟೇಲ್.

ಫಾಸ್ಟ್​ ಬೌಲಿಂಗ್ ಆಲ್​ರೌಂಡರ್ ಆಗಿರುವ ಮಹಾರಾಷ್ಟ್ರದ ಅರ್ಶಿನ್ ಕುಲಕರ್ಣಿ, 4 ಪಂದ್ಯಗಳಿಂದ 202 ರನ್ ಗಳಿಸಿ, 3 ವಿಕೆಟ್ ಉರುಳಿಸಿದ್ದಾರೆ. ಪಂಜಾಬ್​ನ ಕ್ರಿಷ್ ಭಗತ್, ಆಡಿರೋ 3 ಪಂದ್ಯಗಳಿಂದ ಒಂದು ಅರ್ಧಶತಕ ಒಳಗೊಂಡ 3 ವಿಕೆಟ್ ಬೇಟೆಯಾಡಿದ್ದಾರೆ. ಗುಜರಾತ್​ನ ಜಮೀತ್ ಪಟೇಲ್, 9 ಪಂದ್ಯಗಳಿಂದ 2 ಶತಕ, 5 ಅರ್ಧಶತಕ ಒಳಗೊಂಡ 661 ರನ್ ಗಳಿಸಿದ್ದಾರೆ. ಬೌಲಿಂಗ್​ನಲ್ಲೂ 10 ವಿಕೆಟ್ ಉರುಳಿಸಿ ಮಿಂಚಿರುವ ಜಮೀತ್, ಭವಿಷ್ಯದ ಆಲ್​ರೌಂಡರ್ ಆಗುವ ಭರವಸೆ ಹುಟ್ಟಿಹಾಕಿದ್ದಾರೆ. ಈ ಯುವ ಪ್ರತಿಭೆಗಳ ಬೆಳವಣಿಗೆಗೆ ಮತ್ತಷ್ಟು ವೇದಿಕೆ ಸೃಷ್ಟಿಸುವ ಹೊಣೆಗಾರಿಕೆ ಬಿಸಿಸಿಐ ಮುಂದಿದೆ.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ ತೊರೆಯಲು ಸಂಜು ಸಜ್ಜು.. ಯಾವ ತಂಡ ಸೇರ್ತಾರೆ ಕ್ಯಾಪ್ಟನ್..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment