newsfirstkannada.com

1950ರಲ್ಲಿ ಭಾರತವು ಹೇಗೆ ಗಣರಾಜ್ಯವಾಯ್ತು..? ಜ.26 ರಂದೇ ಸಂವಿಧಾನ ಜಾರಿಗೆ ತರಲು ಇದೆ ವಿಶೇಷ ಕಾರಣ

Share :

Published January 26, 2024 at 11:54am

  ದೇಶದಲ್ಲಿ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ

  ದೆಹಲಿಯಲ್ಲಿ ಧ್ವಜಾರೋಹಣ ಮಾಡಿದ ರಾಷ್ಟ್ರಪತಿ ಮುರ್ಮು

  ಯಾಕೆ ಜನವರಿ 26 ರಂದೇ ಆಚರಣೆ ಮಾಡ್ತೀವಿ..?

ಜನವರಿ 26 ಭಾರತಕ್ಕೆ ತುಂಬಾನೇ ಮಹತ್ವದ ದಿನ.. ಇದರ ಕಥೆಯು 1950 ರಿಂದ ಪ್ರಾರಂಭವಾಗುತ್ತದೆ. ಭಾರತವು ಜನವರಿ 26, 1950 ರಂದು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಈ ದಿನದಂದೇ ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತರಲಾಯಿತು. ಭಾರತದ ಸಂವಿಧಾನವು ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ. ಸ್ವಾತಂತ್ರ್ಯದ ನಂತರ ಭಾರತಕ್ಕೆ ಇದು ಎರಡನೇ ವಿಶೇಷ ಕ್ಷಣ.

ಜನವರಿ 26 ರಂದೇ ಸಂವಿಧಾನ ಜಾರಿಗೆ ತರಲು ವಿಶೇಷ ಕೂಡ ಕಾರಣವಿತ್ತು. ದೇಶವು ಮೊದಲ ಬಾರಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಿದ್ದು ಜನವರಿ 26, 1930 ರಂದು. ಅದರ ಸವಿ ನೆನಪಿಗಾಗಿ ಸಂವಿಧಾನವನ್ನು ಜನವರಿ 26 ರಂದು ಜಾರಿಗೆ ತರಲಾಯಿತು.

ಜನವರಿ 26 ನಮ್ಮ ಹೃದಯದಲ್ಲಿ ಶಾಶ್ವತ
ಡಿಸೆಂಬರ್ 31, 1929 ರಂದು ಜವಾಹರಲಾಲ್ ನೆಹರು ಅಧ್ಯಕ್ಷತೆಯಲ್ಲಿ ಲಾಹೋರ್​​ನಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಿ ನಿರ್ಣಯ ಒಂದನ್ನು ಅಂಗೀಕರಿಸಿತ್ತು. ದೇಶಕ್ಕೆ ಸಂಪೂರ್ಣ ಸ್ವಾತಂತ್ರ್ಯ ಒತ್ತಾಯಿಸುವುದು ಆ ನಿರ್ಣಯದ ಉದ್ದೇಶವಾಗಿತ್ತು. 1930ರ ಜನವರಿ 26 ರೊಳಗೆ ಬ್ರಿಟಿಷರು ಡೊಮಿನಿಯನ್ ಸ್ಟೇಟ್ ಸ್ಥಾನಮಾನ ನೀಡದಿದ್ರೆ ‘ದೇಶವನ್ನು ಸಂಪೂರ್ಣ ಸ್ವತಂತ್ರ’ ಎಂದು ಘೋಷಿಸಲಾಗುವುದು ಎಂದು ನಿರ್ಣಯ ಅಂಗೀಕರಿಸಲಾಗಿತ್ತು. ಅದರಂತೆ ಜನವರಿ 26, 1930 ರಂದು ದೇಶದಲ್ಲಿ ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಆಗಸ್ಟ್ 15, 1947 ರಂದು ನಮಗೆ ಸ್ವಾತಂತ್ರ್ಯ ಸಿಕ್ಕರೂ ಜನವರಿ 26 ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿದಿದೆ.

ಹಾಗೆ ನೋಡಿದರೆ 1920ರಲ್ಲಿಯೇ ಭಾರತದಲ್ಲಿ ಗಣರಾಜ್ಯ ಆರಂಭವಾಗಿತ್ತು. 1920ರಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಈ ಚುನಾವಣೆಯಲ್ಲಿ ರಾಷ್ಟ್ರೀಯ ಚುನಾವಣೆಯ ಜೊತೆಗೆ ಪ್ರಾಂತೀಯ ಚುನಾವಣೆಗಳನ್ನೂ ಆಯೋಜಿಸಲಾಗಿತ್ತು. 9 ಫೆಬ್ರವರಿ 1921ರಂದು ದೆಹಲಿಯಲ್ಲಿ ಡ್ಯೂಕ್ ಆಫ್ ಕನ್ನಾಟ್ ಉಪಸ್ಥಿತಿಯಲ್ಲಿ ಸಂಸತ್ತು ಉದ್ಘಾಟನೆ ಆಯಿತು. ಆಗಸ್ಟ್ 15, 1947 ರಂದು ಸ್ವಾತಂತ್ರ್ಯ ಪಡೆದ ನಂತರವೂ ಬ್ರಿಟಿಷರೊಂದಿಗೆ ಒಡನಾಟ ಮುಂದುವರೆಯಿತು.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ನಮ್ಮದು
ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ರಚಿಸಲು ಸಂವಿಧಾನ ರಚನಾ ಸಭೆ ರಚಿಸಲಾಯಿತು. ಇದರಲ್ಲಿ ಒಟ್ಟು 22 ಸಮಿತಿಗಳಿದ್ದವು. ಅದರಲ್ಲಿ ‘ಕರಡು ಸಮಿತಿ’ಯು ಅತ್ಯಂತ ಪ್ರಮುಖವಾದ ಸಮಿತಿಯಾಗಿದ್ದು, ಇಡೀ ಸಂವಿಧಾನವನ್ನು ಸಿದ್ಧಪಡಿಸುವುದು ಅದರ ಕೆಲಸವಾಗಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಆ ಸಮಿತಿಯ ಅಧ್ಯಕ್ಷರಾಗಿದ್ದರು. 2 ವರ್ಷ, 11 ತಿಂಗಳದ 18 ದಿನಗಳ ಕಠಿಣ ಪರಿಶ್ರಮದ ನಂತರ ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ರಚನೆ ಆಯಿತು.

ಡಾ.ಭೀಮರಾವ್ ಅಂಬೇಡ್ಕರ್ ಅವರು 26 ನವೆಂಬರ್, 1949 ರಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದ್​ಗೆ ಸಿದ್ಧಪಡಿಸಿದ್ದ ಸಂವಿಧಾನವನ್ನು ಹಸ್ತಾಂತರಿಸಿದರು. ಆದರೆ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಎರಡು ತಿಂಗಳು ವಿಳಂಬವಾಯಿತು. ಎರಡು ತಿಂಗಳ ನಂತರ ಸಂವಿಧಾನವನ್ನು ಜಾರಿಗೆ ತರಲಾಯಿತು. ಗಣರಾಜ್ಯೋತ್ಸವವನ್ನು ನವೆಂಬರ್ 26, 1949 ರ ಬದಲಿಗೆ 26 ಜನವರಿ 1950 ರಂದು ಜಾರಿಗೆ ಬಂತು. 1950ರಿಂದ ಇಂದಿನವರೆಗೆ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1950ರಲ್ಲಿ ಭಾರತವು ಹೇಗೆ ಗಣರಾಜ್ಯವಾಯ್ತು..? ಜ.26 ರಂದೇ ಸಂವಿಧಾನ ಜಾರಿಗೆ ತರಲು ಇದೆ ವಿಶೇಷ ಕಾರಣ

https://newsfirstlive.com/wp-content/uploads/2024/01/REPUBLIC-DAY-2.jpg

Load More