/newsfirstlive-kannada/media/post_attachments/wp-content/uploads/2024/01/REPUBLIC-DAY.jpg)
ದೇಶದಾದ್ಯಂತ 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಈ ಬಾರಿ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ಧತೆಗಳು ನಡೆದಿವೆ. ದೆಹಲಿ ನಗರದ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. 8 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಡ್ಯೂಟಿ ಪಥ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ.. ಈ ವರ್ಷ ಪರೇಡ್ ವೀಕ್ಷಿಸಲು ಸುಮಾರು 77,000 ಜನ ಕರ್ತವ್ಯ ಪಥ್ಗೆ ಬರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಡ್ರೋನ್ ಮೂಲಕವೂ ಹದ್ದಿನ ಕಣ್ಣಿಡಲಾಗಿದೆ. ಗಣರಾಜ್ಯೋತ್ಸವದ ಪರೇಡ್ ಪೂರ್ವಾಭ್ಯಾಸಗಳು ಮತ್ತು ಬೀಟಿಂಗ್ ದಿ ರಿಟ್ರೀಟ್‌ನ ಅಭ್ಯಾಸ ಮಾಡಲಾಗಿದೆ.
ಫ್ರಾನ್ಸ್ ಅಧ್ಯಕ್ಷ ಮುಖ್ಯ ಅತಿಥಿ
ಬೆಳಗ್ಗೆ 7:30ಕ್ಕೆ ರಾಷ್ಟ್ರಧ್ವಜಾರೋಹಣ ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ವಿವಿಧ ತಂಡಗಳಿಂದ ಗೌರವ ವಂದನೆ ನಡೆಯಲಿದೆ. ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ನಿನ್ನೆಯೇ ಭಾರತಕ್ಕೆ ಆಗಮಿಸಿದ್ದಾರೆ. ಇಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 9.30 ರಿಂದ 10ರ ನಡುವೆ ಫ್ರಾನ್ಸ್ ಅಧ್ಯಕ್ಷರನ್ನು ಔಪಚಾರಿಕವಾಗಿ ಸ್ವಾಗತಿಸಲಾಗುತ್ತದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ಇದು ಮಹತ್ವದ ರಾಜತಾಂತ್ರಿಕ ಕ್ಷಣವಾಗಿದೆ. ಈ ವರ್ಷ ಫ್ರಾನ್ಸ್‌ನ 95 ಸದಸ್ಯರ ಮಾರ್ಚ್ ಸ್ಕ್ವಾಡ್ ಮತ್ತು 33 ಸದಸ್ಯರ ಬ್ಯಾಂಡ್ ಸ್ಕ್ವಾಡ್ ಕೂಡ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗಿಯಾಗುತ್ತಿವೆ.
ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ
ಮಧ್ಯಾಹ್ನ ಭಾರತದ ಕಲಾ ವೈವಿಧ್ಯತೆ ಕೊಂಡಾಡುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇಶದ ಮಿಲಿಟರಿ ಶಕ್ತಿ, ಅದರ ಸನ್ನದ್ಧತೆಯನ್ನು ಪ್ರದರ್ಶಿಸಲಾಗುತ್ತದೆ. ಈ ವರ್ಷದ ಗಣರಾಜ್ಯೋತ್ಸವದ ಥೀಮ್ ಅಭಿವೃದ್ಧಿ ಭಾರತ ಮತ್ತು ಭಾರತ-ಪ್ರಜಾಪ್ರಭುತ್ವದ ತಾಯಿ, ದೇಶದ ಆಕಾಂಕ್ಷೆಗಳು ಮತ್ತು ಪ್ರಜಾಪ್ರಭುತ್ವದ ನೀತಿಯ ಸಂಕೇತವಾಗಿದೆ.
51 ವಿಮಾನಗಳು ಭಾಗಿ
ವಾಯುಪಡೆಯ ಫ್ಲೈಪಾಸ್ಟ್‌ನಲ್ಲಿ 51 ವಿಮಾನಗಳು ಭಾಗಿಯಾಗಲಿವೆ. ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಸಾರಿಗೆ ವಿಮಾನಗಳು ಸೇರಿದಂತೆ 51 ವಿಮಾನಗಳು ಫ್ಲೈಪಾಸ್ಟ್‌ನಲ್ಲಿ ಭಾಗಿ ಆಗುತ್ತಿವೆ. ಈ ವಿಮಾನಗಳಲ್ಲಿ 15 ಮಹಿಳೆಯರು ಇರಲಿದ್ದಾರೆ. ಈ ಬಾರಿ ಶೇ.80ರಷ್ಟು ಮಹಿಳೆಯರು ಕರ್ತವ್ಯ ಪಥದಲ್ಲಿ ಪರೇಡ್‌ನಲ್ಲಿ ಭಾಗವಹಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ