/newsfirstlive-kannada/media/post_attachments/wp-content/uploads/2025/07/BNG-CYBER-CRIME4.jpg)
ಬೆಂಗಳೂರು: ಇದು ಅಂತಿಂಥ ವಂಚನೆ ಅಲ್ಲವೇ ಅಲ್ಲ. ಇಷ್ಟು ದಿನ ಸಣ್ಣ ಪುಟ್ಟ ವಂಚನೆ ಕೇಸ್ಗಳು ಮುನ್ನೆಲೆಗೆ ಬರುತ್ತಿದ್ದವು. ಇದೀಗ ಬೆಂಗಳೂರಿನಲ್ಲಿ ಅತಿ ದೊಡ್ಡ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ ₹384 ಕೋಟಿ ದೋಚಿದ ಸೈಬರ್ ಖದೀಮ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ರಾಹುಲ್ ಅಗರ್ವಾಲ್ ಬಂಧಿತ ಅರೋಪಿ.
ಇದನ್ನೂ ಓದಿ:ಬಿಸಿಸಿಐ ವಿರುದ್ಧ ತಿರುಗಿಬಿದ್ದ ವಾಷಿಂಗ್ಟನ್ ಸುಂದರ್ ತಂದೆ.. ಇವರ ಆಕ್ರೋಶಕ್ಕೆ ಕಾರಣ ಏನು..?
ಅತಿ ದೊಡ್ಡ ಸೈಬರ್ ವಂಚನೆ..
ಬೆಳಗಿನ ಜಾವ 2:37ಕ್ಕೆ ನೆಬಿಲೊ ಟೆಕ್ನಾಲಜೀಸ್ ಕಂಪನಿಗೆ ದೊಡ್ಡ ವಂಚನೆ ಆಗಿತ್ತು. ಕಂಪನಿ ವ್ಯಾಲೆಟ್ನಿಂದ ಇನ್ನೊಂದು ವ್ಯಾಲೆಟ್ಗೆ ವಂಚಕ ಕೋಟಿ ಕೋಟಿ ಟ್ರಾನ್ಸ್ಫರ್ ಮಾಡಿಕೊಂಡಿದ್ದ. ಅಲ್ಲದೇ 1USDT ಅನ್ನು ವರ್ಗಾವಣೆ ಮಾಡಿಕೊಳ್ಳಲಾಗಿತ್ತು. ಬೆಳಗಿನ ಜಾವ ಸಮಯ: 9:40ಕ್ಕೆ ಮತ್ತೆ ಸರ್ವರ್ಗೆ ವಂಚಕ ಎಂಟ್ರಿಯಾಗಿ 44 ಮಿಲಿಯನ್ USDT ಭಾರತೀಯ ರೂ.ಗೆ 384 ಕೋಟಿ ವರ್ಗಾವಣೆ ಮಾಡಿಕೊಂಡಿದ್ದ.
ಆರೋಪಿ ರಾಹುಲ್ ಅಗರ್ವಾಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 3,84,00,00,000 ದೋಚಿದ್ದ. ಪ್ರೈವೇಟ್ ಲಿಮಿಟೆಡ್ ಕಂಪನಿ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ಕೆಲಸ ಮಾಡುತ್ತದೆ. ಈ ಕಂಪನಿಯ ವ್ಯಾಲೇಟ್ನಿಂದ ಆರೋಪಿ ಬೆಳಗಿನ ಜಾವ 2:37ಕ್ಕೆ, ಇನ್ನೊಂದು ವ್ಯಾಲೇಟ್ಗೆ 1USDT ಅನ್ನು ವರ್ಗಾವಣೆ ಮಾಡಿಕೊಂಡಿದ್ದ. ನಂತರ ಬೆಳಗ್ಗೆ ಮತ್ತೆ 9:40ಕ್ಕೆ ಮತ್ತೆ ಸರ್ವರ್ಗೆ ವಂಚಕ ಎಂಟ್ರಿಯಾಗಿ 44 ಮಿಲಿಯನ್ USDT ಭಾರತೀಯ ರೂಪಾಯಿಗೆ 3,84,00,00,000 (ಮುನ್ನೂರ ಎಂಬತ್ತಾನಾಲ್ಕು ಕೋಟಿಗೂ ಹೆಚ್ಚಿನ ಹಣ) ರೂ ವರ್ಗಾವಣೆ ಮಾಡಿಕೊಂಡಿದ್ದ.
ಅಚ್ಚರಿ ವಿಚಾರ ಏನೆಂದರೆ ರಾಹುಲ್ ಅಗರ್ವಾಲ್ ಕಂಪನಿ ನೀಡಿದ್ದ ಲ್ಯಾಪ್ ಟಾಪ್ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡಿದ್ದ. ಅಲ್ಲಿ ಕೆಲಸ ಮಾಡಿ ರಾಹುಲ್ ಹದಿನೈದು ಲಕ್ಷ ಹಣ ಪಡೆದಿದ್ದ. ಕಂಪನಿ ಲ್ಯಾಪ್ ಟಾಪ್ ಬಳಸಿ ಕೆಲಸ ಮಾಡುತ್ತಿದ್ದ ವೇಳೆ ವಂಚಕ ಹ್ಯಾಕ್ ಮಾಡಿದ್ದಾನೆ. ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸರ್ವರ್ಗೆ ಎಂಟ್ರಿಯಾಗಿದ್ದ. ನಂತರ ಒಟ್ಟು 44 ಮಿಲಿಯನ್ ಡಾಲರ್ ವಂಚನೆ ಮಾಡಿದ್ದ. ಈ ನೆಬಿಲೊ ಟೆಕ್ನಾಲಜೀಸ್ ಭಾರತದಲ್ಲೇ ಪ್ರತಿಷ್ಠಿತ ಕ್ರಿಪ್ಟೊ ಕರೆನ್ಸಿ ಕಂಪನಿಯಾಗಿದೆ. ಇನ್ನೂ, ಈ ಬಗ್ಗೆ ಆಂತರಿಕ ತನಿಖೆ ನಡೆಸಿದ್ದ ನೆಬಿಲೊ ಕಂಪನಿ ವೈಟ್ ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಕೇಸ್ಗೆ ಸಂಬಂಧಿಸಿದಂತೆ ವಂಚಕ ರಾಹುಲ್ ಅಗರ್ವಾಲ್ನನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ