/newsfirstlive-kannada/media/post_attachments/wp-content/uploads/2025/02/BNG-Mother-1.jpg)
ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಮಾರ್ಚ್ 3 ರಿಂದ ಆರಂಭವಾಗಲಿದ್ದು ರಾಜ್ಯಪಾಲ ಥಾವರ್‌ಚಂದ್ ಗೆಹೋಟ್ ಅವರು ಉಭಯ ಸದನಗಳನ್ನು ಉದ್ದೇಶಿಸಿ ಮೊದಲು ಭಾಷಣ ಮಾಡಲಿದ್ದಾರೆ. ಮಾರ್ಚ್ 7 ರಂದು 2025-26ನೇ ಸಾಲಿನ ಬಜೆಟ್ ಅನ್ನು ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡಲಿದ್ದಾರೆ. ಸದ್ಯ ಈ ಬಜೆಟ್​ನಲ್ಲಿ ಆಟೋ ಮತ್ತು ಟ್ಯಾಕ್ಸಿ ಚಾಲಕರ ಕೆಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯ ಮಾಡಲಾಗಿದೆ.
ಆದರ್ಶ್ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಅವರು ಪತ್ರದ ಮೂಲಕ ಬೇಡಿಕೆ ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಆಟೋ ಖರೀದಿಗೆ ಸಾಲ, ಚಾಲಕರಿಗೆ ಮನೆ, ಪ್ರತ್ಯೇಕ ಕಾಲೋನಿ, ಗೌರವಧನ ಸೇರಿ ಇನ್ನು ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಆಟೋ ಸಾರಥಿಗಳ ಬೇಡಿಕೆ
2025- 26ರ ಸಾಲಿನ ಬಜೆಟ್​ನಲ್ಲಿ ಆಟೋ- ಟ್ಯಾಕ್ಸಿ ಖಾಸಗಿ ಬಸ್, ಲಾರಿ, ಕ್ಯಾಬ್, ಗೂಡ್ಸ್ ಚಾಲಕರ ವರ್ಗಕ್ಕೆ ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.
ನಿರುದ್ಯೋಗಿ ಬಾಡಿಗೆ ಆಟೋ ಮತ್ತು ಟ್ಯಾಕ್ಸಿ ಚಾಲನೆ ಮಾಡುವ ಚಾಲಕರು ಸ್ವಾವಲಂಬಿತರಾಗಲು ಸರ್ಕಾರದ ವಿವಿಧ ಜಾತಿವಾರು ನಿಗಮಗಳಿಂದ ನೇರ ಸಾಲ ಯೋಜನೆಯಲ್ಲಿ ಹೊಸ ಆಟೋರಿಕ್ಷಾ ಟ್ಯಾಕ್ಸಿ, ಗೂಡ್ಸ್ ಆಟೋರಿಕ್ಷಾ ಕೊಳ್ಳಲು ಶೇ.95 ರಷ್ಟು ಸಾಲ ಹೈಪೋಥಿಕೆಶನ್​ನಲ್ಲಿ ಕೊಡಬೇಕು.
ಸಿಎಂ ವಸತಿ ಯೋಜನೆ ಅಡಿ ನಿರ್ಮಿಸುತ್ತಿರುವ ಮನೆಗಳಲ್ಲಿ ಚಾಲಕರಿಗೆ ಮೀಸಲಿಡಬೇಕು ಅಥವಾ ಬೆಂಗಳೂರು ನಗರದ 4 ದಿಕ್ಕುಗಳಲ್ಲಿ ವಾಸಿಸುವ ಚಾಲಕರಿಗಾಗಿ ಪ್ರತ್ಯೇಕ ಕಾಲೋನಿ ಬೇಕು.
ಇದನ್ನೂ ಓದಿ: Champions Trophy; ಭಾರತ ಶುಭಾರಂಭ, ಗಿಲ್​ ಸೆಂಚುರಿ.. ಕನ್ನಡಿಗನ ವಿನ್ನಿಂಗ್ ಶಾಟ್ ಹೇಗಿತ್ತು?
/newsfirstlive-kannada/media/post_attachments/wp-content/uploads/2025/02/AUTO_1.jpg)
ಹೊಸ ಎಲೆಕ್ಟ್ರಿಕ್ ಇವಿ ಆಟೋರಿಕ್ಷಾ ಕೊಳ್ಳಲು ವಾಹನದ ಬೆಲೆಯಲ್ಲಿ ಶೇ.50 ರಷ್ಟು ಸಹಾಯಧನ ಸರ್ಕಾರ ಕೊಡಬೇಕು. ಪ್ರಯಾಣಿಕರನ್ನ ಕರೆದುಕೊಂಡು ಹೋಗುವ ಈವಿ ಆಟೋರಿಕ್ಷಾಗಳಿಗೆ ಪರ್ಮಿಟ್ ಚಾಲನಾ ಪತ್ರ ಕಡ್ಡಾಯಗೊಳಿಸಬೇಕು.
ಸರ್ಕಾರ, ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ಸಾರಿಗೆ ವಲಯ ಚಾಲಕರು ವೃತ್ತಿಯಲ್ಲಿರುವಾಗ ಅಪಘಾತವಾದ್ರೆ ಪರಿಹಾರವಾಗಿ ₹5 ಲಕ್ಷ ಕುಟುಂಬಕ್ಕೆ ನೀಡಲಾಗುತ್ತಿದೆ. ಇದನ್ನು ಹೃದಯಘಾತದಿಂದ ನಿಧನ ಹೊಂದುವ ಚಾಲಕರಿಗೂ ಅನ್ವಯವಾಗುವಂತೆ ಮಾಡಬೇಕು.
ಸರ್ಕಾರದ ವತಿಯಿಂದ ಚಾಲಕರ ದಿನಾಚರಣೆ ಘೋಷಿಸಬೇಕು ಹಾಗೂ ಪ್ರತಿ ಜಿಲ್ಲಾ ಅವರು ನಿಗದಿಪಡಿಸಿರುವ ಚಾಲಕರ ಸಂಖ್ಯೆಯನ್ನು ಆಯಾ ಜಿಲ್ಲೆಯ ಚಾಲಕರ ಸಂಖ್ಯೆಗನುಗುಣವಾಗಿ ಪರಿಷ್ಕರಣೆ ಆಗಬೇಕು. ಬೆಂಗಳೂರು ನಗರಕ್ಕೆ ಕನಿಷ್ಠ 150 ಚಾಲಕರ ನಿಗದಿ ಮಾಡಿ ಪ್ರಾಮಾಣಿಕ ಮತ್ತು ಹಿರಿಯ ಚಾಲಕರಿಗೆ ಪ್ರಶಸ್ತಿ ಹಾಗೂ 25,000 ಗೌರವ ಧನ ಘೋಷಿಸಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ತಿಳಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us