/newsfirstlive-kannada/media/post_attachments/wp-content/uploads/2025/06/TN-Temple-1.jpg)
ದೇವಾಲಯದ ಹುಂಡಿಗಳಲ್ಲಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತರು ಹಣ ಹಾಕುತ್ತಾರೆ. ಅಪರೂಪಕ್ಕೆ ಚಿನ್ನ, ಬೆಳ್ಳಿ ಆಭರಣಗಳನ್ನೂ ಹಾಕುತ್ತಾರೆ. ಇನ್ನೂ ಕೆಲವರು ಚೀಟಿಗಳ ಮೂಲ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ‘ದೇವರೇ ನೀನೇ ಕಾಪಾಡಪ್ಪ’ ಅಂತಾ ಬೇಡಿಕೊಳ್ತಾರೆ. ನಿಮಗೆ ಅಚ್ಚರಿ ಅನಿಸಬಹುದು, ಆದರೆ ಇಲ್ಲೊಬ್ಬರು ದೇವಾಲಯದ ಹುಂಡಿಗೆ ಬರೋಬ್ಬರಿ 4 ಕೋಟಿ ಮೌಲ್ಯದ ಆಸ್ತಿಯ ದಾಖಲೆ ಪತ್ರ ಹಾಕಿದ್ದಾರೆ!
ಎಲ್ಲಿ, ಎಲ್ಲಿ..?
ತಮಿಳುನಾಡಿನ ತಿರುವಣ್ಣಾಮಲೈ (Tiruvannamalai) ಜಿಲ್ಲೆಯ ಅರಲುಮಿಗು ರೇಣುಗುಂಬಲ ಅಮ್ಮಾನ್ ದೇವಾಲಯದ (Renugambal Amman) ಹುಂಡಿಯಲ್ಲಿ ಆಸ್ತಿ ಪತ್ರ ಪತ್ತೆಯಾಗಿದೆ. ಹುಂಡಿ ಎಣಿಸುವ ವೇಳೆ ಯಾವುದೋ ಪತ್ರವೊಂದು ಹಾಕಿದ್ದಾರೆ ಅಂತಾ ತೆಗೆದು ನೋಡಿದ ಸಿಬ್ಬಂದಿಗೆ ಅಚ್ಚರಿ ತಂದಿದೆ. ಯಾಕೆಂದರೆ ವ್ಯಕ್ತಿಯೊಬ್ಬರು ತಮಗೆ ಸೇರಿದ ಎಲ್ಲಾ ಆಸ್ತಿಗಳನ್ನು ದೇವಾಲಯಕ್ಕೆ ಮಾರಲು ನಿರ್ಧರಿಸಿ ಹುಂಡಿಗೆ ಹಾಕಿದ್ದಾರೆ.
ಇದನ್ನೂ ಓದಿ: ಪ್ರಿಯಕರ ಕಾನ್ಸ್ಟೆಬಲ್ ಜೊತೆ ಸೇರಿಕೊಂಡು ಪತಿಗೆ ಕೊಡಬಾರದ ಕಷ್ಟ ಕೊಟ್ಟಳು.. ವಿಡಿಯೋ ಮಾಡಿ ಜೀವ ಬಿಟ್ಟ ಗಂಡ
ಯಾರು ಅವರು..?
ಹೆಸರು ವಿಜಯನ್. ಇವರು ಮೂಲತಃ ಅರಣಿ ಸಿಟಿಯ (Arani town) ಕೇಶವಪುರಂ ಗ್ರಾಮದವರು. ಮೇಲಾಗಿ ನಿಬೃತ್ತ ಸೇನಾಧಿಕಾರಿ. ವಿಜಯನ್ ಇತ್ತೀಚೆಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ತಮ್ಮ ಆಸ್ತಿಗೆ ಸಂಬಂಧಿಸಿದ ನಾಲ್ಕು ಪುಟಗಳಲ್ಲಿರುವ ದಾಖಲೆಗಳನ್ನು ಹುಂಡಿಗೆ ಹಾಕಿದ್ದಾರೆ. ಅದರಲ್ಲಿ ಒಂದು ಆಸ್ತಿ ಮೂರು ಕೋಟಿ ಮೌಲ್ಯದ್ದಾಗಿದೆ. ಇನ್ನೊಂದು ಒಂದು ಕೋಟಿ ಬೆಲೆ ಬಾಳುತ್ತದೆ. ಒಟ್ಟ ಆಸ್ತಿ ಪತ್ರದಲ್ಲಿ ನಾಲ್ಕು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಇನ್ನು, ಹಾಕಿರುವ ಎಲ್ಲಾ ದಾಖಲೆ ಪತ್ರಗಳೂ ಕೂಡ ವರಿಜಿನಲ್ ಆಗಿವೆ.
ಇದನ್ನೂ ಓದಿ: ಜೈಲಿಗೆ ಕಳಿಸ್ತೀನಿ ಅಂತ ಪತ್ನಿ ಬೆದರಿಸ್ತಿದ್ದಾಳಾ? ಭಯ ಬೇಡ, ಸುಪ್ರೀಂ ಕೋರ್ಟ್ನ ಈ ಮಹತ್ವದ ನಿರ್ದೇಶನ ಬಗ್ಗೆ ತಿಳಿಯಿರಿ
ಯಾಕೆ ಇಂಥ ನಿರ್ಧಾರ..?
ಜೂನ್ 24 ರಂದು ದೇಗುಲದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯ ನಡೆಸಿದ್ದಾರೆ. ಈ ವೇಳೆ ಪ್ರಸಂಗ ಬೆಳಕಿಗೆ ಬಂದಿದೆ. ಆಸ್ತಿ, ಹಣ, ಐಶ್ವರ್ಯ ಜನರಿಗೆ ಇದ್ದಷ್ಟೂ ಸಾಕಾಗಲ್ಲ. ಅಂತಹದ್ರಲ್ಲಿ ಇವರು ಎಲ್ಲಾ ಆಸ್ತಿಯನ್ನು ದೇಗುಲಕ್ಕೆ ದಾನ ಮಾಡಲು ನಿರ್ಧರಿಸಿದ್ದಾರೆ ಅಂದರೆ ಅದಕ್ಕೆ ಬಲವಾದ ಕಾರಣವಿದೆ. ಅದು ಅವರ ಇಬ್ಬರು ಹಣ್ಮಕ್ಕಳು!
ವಿಜಯನ್ ಬಾಲ್ಯದಿಂದಲೂ ರೇಣುಗುಂಬಲ ಅಮ್ಮನ ಅಪ್ಪಟ ಭಕ್ತರಾಗಿದ್ದಾರೆ. ಇವರು ಕಳೆದ 10 ವರ್ಷಗಳಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸವಿದ್ದಾರೆ. ಹೀಗಾಗಿ ಕುಟುಂಬದಿಂದ ಯಾವುದೇ ಬೆಂಬಲ ಇವರಿಗೆ ಸಿಗುತ್ತಿಲ್ಲ. ಅಮ್ಮನ (ವಿಜಯನ್ ಪತ್ನಿ) ಜೊತೆ ಇರುವ ಇಬ್ಬರು ಹೆಣ್ಣು ಮಕ್ಕಳು ತಮಗೆ ಆಸ್ತಿ ಬೇಕು ಎಂದು ಗಲಾಟೆ ಮಾಡುತ್ತಿದ್ದಾರಂತೆ. ಗಲಾಟೆಯಿಂದ ಬೇಸತ್ತು, ಮಕ್ಕಳಿಂದ ಆಗುತ್ತಿರುವ ಅಪಮಾನ, ಕಿರುಕುಳ ಸಹಿಸಲಾಗದೇ ದೇವರ ಹುಂಡಿಗೆ ಆಸ್ತಿಪತ್ರ ಹಾಕಿದ್ದಾರೆ.
ಇದನ್ನೂ ಓದಿ: ಬ್ರಹ್ಮಾನಂದಗೆ ವಿಲನ್ ಆದ ಮಾವ.. ತನ್ನ ಹೆಂಡತಿನ ತಾನು ಕರೆದೊಯ್ಯಲು ಕಠಿಣ 36 ಷರತ್ತುಗಳು!
ನಿಜವಾಗಿಯೂ ಮಾರಿಬಿಡ್ತಾರಾ..?
ಸದ್ಯದ ವರದಿಗಳ ಪ್ರಕಾರ ಹೌದು! ಆಸ್ತಿ ಪತ್ರ ಪತ್ತೆ ಆಗುತ್ತಿದ್ದಂತೆಯೇ ದೇಗುಲದ ಸಿಬ್ಬಂದಿ ನಿವೃತ್ತ ಸೇನಾಧಿಕಾರಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಮಾತುಕತೆ ಆಗಿದೆ. ಮಕ್ಕಳು ನನಗೆ ದಿನ ನಿತ್ಯದ ಖರ್ಚಿಗೂ ಹಣ ನೀಡದೇ ಸತಾಯಿಸುತ್ತಿದ್ದಾರೆ. ಆಸ್ತಿ ಮಾರಿಕೊಡುವಂತೆ ಒತ್ತಾಯಿಸುತ್ತಿದ್ದಾರೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಅವರಿಗೆ ಆಸ್ತಿ ಸಿಗಬಾರದು. ಅಧಿಕೃತವಾಗಿ ಕಾನೂನು ಬದ್ಧವಾಗಿ ಆಸ್ತಿಯನ್ನು ದೇವರಿಗೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪ್ಯಾರಾಸಿಟಮೋಲ್ ಸೇರಿ ಅಪಾಯಕಾರಿ 15 ಔಷಧಗಳು ಕರ್ನಾಟಕದಲ್ಲಿ ಬ್ಯಾನ್..! ಅವು ಯಾವುವು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ