ನೇಣು ಬಿಗಿದು ಸಾವಿಗೆ ಶರಣಾದ ನಿವೃತ್ತ ASI.. ಸಾವಿಗೆ 2 ಕಾರಣಗಳು..!

author-image
Bheemappa
Updated On
ನೇಣು ಬಿಗಿದು ಸಾವಿಗೆ ಶರಣಾದ ನಿವೃತ್ತ ASI.. ಸಾವಿಗೆ 2 ಕಾರಣಗಳು..!
Advertisment
  • ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡ್ರು ಹೊರಬರಲಾಗಲಿಲ್ಲ
  • ನಗರದ ಡಿಸಿಎಂ ಟೌನ್​ಶಿಪ್​ನ ಮನೆಯಲ್ಲಿ ನೇಣಿಗೆ ಶರಣು
  • ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು

ದಾವಣಗೆರೆ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ನಿವೃತ್ತ ಎಎಸ್​ಐ ಅಧಿಕಾರಿಯೊಬ್ಬರು ನೇಣು ಬಿಗದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ನಗರದ ಡಿಸಿಎಂ ಟೌನ್​ಶಿಪ್​ನಲ್ಲಿ ನಡೆದಿದೆ.

ಇದನ್ನೂ ಓದಿ:ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ

ನಗರದ ಡಿಸಿಎಂ ಟೌನ್ ಶಿಪ್​ನ ನಿವಾಸಿಯಾಗಿರುವ ನಿವೃತ್ತ ಎಎಸ್​ಐ ಸುರೇಶ್ (70) ಆತ್ಮಹತ್ಯೆ ಮಾಡಿಕೊಂಡವರು. ಇವರು ಬಿ.ಪಿ, ಶುಗರ್​ನಿಂದ ಬಳಲುತಿದ್ದರು. ಇವುಗಳಿಗಾಗಿ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದ್ದರೂ ಅವುಗಳು ಕಡಿಮೆಯಾಗಲಿಲ್ಲ. ಹೀಗಾಗಿ ಬಿ.ಪಿ, ಶುಗರ್ ಹತೋಟಿಗೆ ಬಾರದಿದ್ದಕ್ಕೆ ಮನನೊಂದು ತಮ್ಮ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸುರೇಶ್ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment