ಪತ್ನಿಯಿಂದಲೇ ನಿವೃತ್ತ DG-IGP ಓಂ ಪ್ರಕಾಶ್ ಜೀವ ತೆಗೆದ ಭಯಾನಕ ಕೃತ್ಯ; ಅಸಲಿಗೆ ಆಗಿದ್ದೇನು?

author-image
Bheemappa
Updated On
ಪತ್ನಿಯಿಂದಲೇ ನಿವೃತ್ತ DG-IGP ಓಂ ಪ್ರಕಾಶ್ ಜೀವ ತೆಗೆದ ಭಯಾನಕ ಕೃತ್ಯ; ಅಸಲಿಗೆ ಆಗಿದ್ದೇನು?
Advertisment
  • ಬೆಂಗಳೂರಿನ 2 ಭಯೋತ್ಪಾದನಾ ಪ್ರಕರಣ ತನಿಖೆ ಮಾಡಿದ್ದ ಓಂ ಪ್ರಕಾಶ್
  • ಬೆಂಗಳೂರಿನಲ್ಲಿ ಓಂ ಪ್ರಕಾಶ್ ಅವರ ದುರಂತ ಅಂತ್ಯಕ್ಕೆ ಕಾರಣವೇನು?
  • ಬೆಂಗಳೂರು ಹೆಚ್​ಎಸ್​ಆರ್​ ಲೇಔಟ್​ನಲ್ಲಿ ವಾಸವಿದ್ದ ನಿವೃತ್ತ ಅಧಿಕಾರಿ

ಬೆಂಗಳೂರು: ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್​ ಅವರ ಮೃತದೇಹ ರಕ್ತದ ಮಡುವಿನಲ್ಲಿ ಬೆಂಗಳೂರು ನಗರದ ಹೆಚ್ಎಸ್ಆರ್ ಲೇಔಟ್​ನ ಅವರ ನಿವಾಸದಲ್ಲಿ ಪತ್ತೆಯಾಗಿದೆ. ಘಟನೆ ನಡೆದಿರುವ ಮನೆಯಲ್ಲಿ ಪೊಲೀಸರು ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಲಿಕಾನ್ ಸಿಟಿಯ ನಿವೃತ್ತ ಪೊಲೀಸ್ ಮಹಾನಿರ್ದೇಶಕರು ಓಂ ಪ್ರಕಾಶ್ ಅವರ ಬರ್ಬರ ಹತ್ಯೆಯಾಗಿದೆ. ಅವರ ದೇಹದ ಮೂರು ಕಡೆಗಳಲ್ಲಿ ಚಾಕುವಿನಿಂದ ಇರಿದು ಭೀಕರವಾಗಿ ಜೀವ ತೆಗೆಯಲಾಗಿದೆ. ಸದ್ಯ ಈ ಸಂಬಂಧ ಡಿಜಿ ಮತ್ತು ಐಜಿಪಿಯಾಗಿದ್ದ ಓಂಪ್ರಕಾಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ಕೊಟ್ಟು ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿವೃತ್ತ DG-IGP ಓಂ ಪ್ರಕಾಶ್ ದುರಂತ ಅಂತ್ಯ; ಕಾರಣವೇನು?

publive-image

ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್​ ಅವರು ಬಿಹಾರ ಮೂಲದವರು. 1981 ಬ್ಯಾಚ್ ಐಪಿಎಸ್ ಅಧಿಕಾರಿ ಆಗಿದ್ದರು. ತಮ್ಮ ಕರ್ತವ್ಯದಲ್ಲಿ ತುಂಬಾ ಚಾಣಕ್ಷರಾಗಿದ್ದ ಓಂ ಪ್ರಕಾಶ್​ ಅವರು ಬೆಂಗಳೂರಿನ ಎರಡು ಭಯೋತ್ಪಾದಕ ಪ್ರಕರಣಗಳನ್ನು ತನಿಖೆ ಮಾಡಿದ್ದರು. 2013 ಏಪ್ರಿಲ್ 17ರಂದು ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ನಡೆದ ಸ್ಫೋಟ ಹಾಗೂ 2014 ಡಿಸೆಂಬರ್ 28 ರಂದು ಚರ್ಚ್​ ಸ್ಟ್ರೀಟ್​ನಲ್ಲಿ ನಡೆದ ಬ್ಲಾಸ್ಟ್ ಪ್ರಕರಣದಲ್ಲಿ​ ಶಂಕಿತ ಉಗ್ರರನ್ನ ಬಂಧಿಸಿದ್ದರು.

ಕೌಟುಂಬಿಕ ಕಲಹ ಹಿನ್ನೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್​ ಅವರನ್ನ ಹೆಂಡತಿಯೇ ಬರ್ಬರವಾಗಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment