ಕಿವಿಗೆ ಪೆನಾಯಿಲ್‌, ಗೂಗಲ್​ನಲ್ಲಿ ಸರ್ಚ್.. ನಿವೃತ್ತ DG-IGP ಓಂ ಪ್ರಕಾಶ್ ಸಾವಿಗೂ ಮುನ್ನ ಆಗಿದ್ದೇನು?

author-image
admin
Updated On
ಕಿವಿಗೆ ಪೆನಾಯಿಲ್‌, ಗೂಗಲ್​ನಲ್ಲಿ ಸರ್ಚ್.. ನಿವೃತ್ತ DG-IGP ಓಂ ಪ್ರಕಾಶ್ ಸಾವಿಗೂ ಮುನ್ನ ಆಗಿದ್ದೇನು?
Advertisment
  • ಕೊಲೆಗೂ ಮುನ್ನ ಗೂಗಲ್‌ನಲ್ಲಿ ಓಂ ಪ್ರಕಾಶ್​​ ಪತ್ನಿ ಸರ್ಚ್‌ ಮಾಡಿದ್ದೇನು?
  • ಮನೆಯಲ್ಲಿ ಅನೇಕ ಬಾರಿ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ್ರಾ ಪಲ್ಲವಿ?
  • ಹೆಂಡತಿ ಗಲಾಟೆಯಿಂದ ಬೇಸತ್ತು ತಂಗಿ ಮನೆಗೆ ಹೋಗಿದ್ದ ಓಂ ಪ್ರಕಾಶ್‌

ನಿವೃತ್ತ DG-IGP ಓಂ ಪ್ರಕಾಶ್ ಅವರ ಬರ್ಬರ ಹತ್ಯೆ ಪ್ರಕರಣ ನಿಗೂಢವಾಗಿದ್ರು ಟ್ವಿಸ್ಟ್​ಗಳ ಮೇಲೆ ಟ್ವಿಸ್ಟ್​ಗಳು ಪೋಣಿಸಿಕೊಂಡು ಹೋಗುತ್ತಿವೆ. ಓಂ ಪ್ರಕಾಶ್​​ ಪತ್ನಿ ಪಲ್ಲವಿ ತನ್ನ ಪತಿಯನ್ನು ಕೊಲ್ಲೋ ಮುನ್ನ, How to Kill, how to face legal cases ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ ಎನ್ನಲಾಗಿದೆ.

ಹಲವು ದಿನಗಳಿಂದ ಪತಿಯ ಕೊಲೆಗೆ ಪ್ರಯತ್ನ?
ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿ, ಪತಿಯ ಹತ್ಯೆಗೆ ಅನೇಕ ಬಾರಿ ಸ್ಕೆಚ್ ಹಾಕಿದ್ದರು ಎನ್ನಲಾಗ್ತಿದೆ. ಕಳೆದೊಂದು ವಾರದ ಹಿಂದೆಯೇ, ಹತ್ಯೆಗೆ ಸ್ಕೆಚ್ ಹಾಕಿ ಫೇಲ್​ ಆಗಿದ್ದರಂತೆ. ಒಂದೇ ಮನೆಯಲ್ಲಿದ್ದರೂ ಪತಿ, ಪತ್ನಿ ಬೇರೆ ಬೇರೆ ರೂಮ್​​ಗಳಲ್ಲಿ ನಿದ್ರೆ ಮಾಡುತ್ತಿದ್ದರು. ಹೀಗಾಗಿಯೇ ಆಕೆಯ ಮಾಸ್ಟರ್‌ ಪ್ಲ್ಯಾನ್​​ ಎಲ್ಲಾ ಬಾರಿ ಸಲೀಸಾಗಿ ನಡೆದಿರಲಿಲ್ಲ. ಅದರಲ್ಲೂ ಪತ್ನಿಯ ಕಿರುಕುಳ ಹೆಚ್ಚಾಗಿದ್ದರಿಂದ ಓಂಪ್ರಕಾಶ್ ಅವರು ಪಿಸ್ತೂಲ್‌ ಅನ್ನ ಸದಾಕಾಲ ತನ್ನ ಜೊತೆನೇ ಇಟ್ಟುಕೊಳ್ಳುತ್ತಿದ್ದರು.

ನಿದ್ರೆಯಲ್ಲಿದ್ದ ಓಂಪ್ರಕಾಶ್​​ ಕಿವಿಗೆ ಪೆನಾಯಿಲ್​​ ಸುರಿದ್ದಿದ್ದ ಪತ್ನಿ!
ಓಂ ಪ್ರಕಾಶ್ ಸಾವಿಗೂ ಮುನ್ನ ಅಂದ್ರೆ 5 ದಿನಗಳ ಹಿಂದಷ್ಟೇ ಪಲ್ಲವಿ ಅವರು ಪತಿಯ ಕೊಲೆ ಮಾಡಲು ರೂಮ್​ಗೆ ಹೋಗಿದ್ದರಂತೆ. ಗಾಢ ನಿದ್ರೆಯಲ್ಲಿದ್ದ ಓಂಪ್ರಕಾಶ್​​ರನ್ನ ಹತ್ಯೆ ಮಾಡಲೇಬೇಕು ಅನ್ನೋ ಪ್ರಯತ್ನ ಮಾಡಿದ್ದಾರೆ. ಆ ದಿನ ಪತಿಯ ಕೊಲೆ ಸಾಧ್ಯವಾಗದಿದ್ದಾಗ, ಪಲ್ಲವಿ ಕೋಪದಲ್ಲಿ ನಿದ್ರೆಯಲ್ಲಿದ್ದ ಓಂಪ್ರಕಾಶ್ ಕಿವಿಗೆ ಪೆನಾಯಿಲ್ ಸುರಿದು ಸೈಲಾಂಟಾಗಿ ರೂಮ್​ನಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

publive-image

ಅಂದು ಓಂ ಪ್ರಕಾಶ್​​ ಅವರು ಬೆಳಗ್ಗೆ ಎದ್ದು ನೋಡಿದಾಗ, ಕಿವಿ ಹಾಗೂ ಕುತ್ತಿಗೆ ಬಳಿ ಏನೋ ಅಂಟಿನ ಲಿಕ್ವಿಡ್ ಅಂಶ ಪತ್ತೆಯಾಗಿತ್ತು. ಕಿವಿಗೆ ಅಂಟಿದ್ದ ಆ ಲಿಕ್ವಿಡ್ ಅಂಶ ಏನು ಅಂತ ತಿಳಿದುಕೊಳ್ಳೋಕೆ ಓಂಪ್ರಕಾಶ್ ಅವರು ಅದನ್ನ ಲ್ಯಾಬ್​ಗೆ ಕೊಟ್ಟಿದ್ದರು. ಲ್ಯಾಬ್​ ರಿಪೋರ್ಟ್​ನಲ್ಲಿ ಅದು ಪೆನಾಯಿಲ್​ ಅಂತ ಗೊತ್ತಾಗಿದೆ. ಇದು ಪತ್ನಿಯ ಕೆಲಸವೇ ಅಂತ ತಿಳಿದುಕೊಂಡ ಓಪ್ರಕಾಶ್​ ಅವರು, ತನ್ನ ತಂಗಿಯ ಮನೆಯವರಿಗೆ ಈ ವಿಚಾರ ತಿಳಿಸಿದ್ದರು. ವಿಷಯ ತಿಳಿದು ಆತಂಕಗೊಂಡಿದ್ದ ಓಪ್ರಕಾಶ್​​ ಅವರ ತಂಗಿ ಸರಿತಾ, ತಮ್ಮ ಮನೆಗೆ ಬರುವಂತೆ ಹೇಳಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಓಂ ಪ್ರಕಾಶ್ ಹತ್ಯೆಗೆ ಮೊದಲೇ ಪ್ಲಾನ್.. ಅನುಮಾನ ಹೆಚ್ಚಿಸಿದ ಪತ್ನಿ, ಪುತ್ರಿಯ ಈ ನಡೆ.. 

ಕಿವಿಗೆ ಪೆನಾಯಿಲ್​ ಸುರಿದ ಪತ್ನಿ ನಡೆ ಕಂಡು, ಓಂಪ್ರಕಾಶ್​​ ಸೋದರಿ ಮನೆಗೆ ಹೋಗಿದ್ದರು. ಅತ್ತ ತಂದೆ ಅತ್ತೆ ಮನೆಗೆ ಹೋಗಿರೋದನ್ನ ತಿಳಿದ ಮಗಳು ಕೃತಿ, ಇತ್ತ ತಾಯಿ ಜೊತೆ ಜಗಳವಾಡಿ ಊಟ ಬಿಟ್ಟಿದ್ದಳಂತೆ. ಸೋದರಿ ಮನೆಯಲ್ಲಿದ್ದುಕೊಂಡು, ಪೆನಾಯಿಲ್​ ವಿಚಾರವನ್ನ ಓಂಪ್ರಕಾಶ್ ಅವರು ತನ್ನ ಬ್ಯಾಚ್ ಮೆಟ್ ಅಧಿಕಾರಿಗೆ ತಿಳಿಸಿದ್ದರು. ಅವರು ಸಹ ನಿನ್ನ ಪತ್ನಿಯ ಸಹವಾಸ ಯಾಕೆ, ಸುಮ್ಮನೆ ಸಹೋದರಿಯ ಮನೆಯಲ್ಲೇ ಇದ್ದು ಬಿಡು, ನಿನಗೆ ಅಲ್ಲೇ ಸೇಫ್​​ ಅನ್ನೋ ಸಲಹೆ ​ ಕೊಟ್ಟಿದ್ದರಂತೆ.

‘ಮಿಸ್​ ಯೂ ಪಪ್ಪಾ ಪ್ಲೀಸ್​ ಮನೆಗೆ ಬಂದು ಬಿಡಿ’ ಮಗಳ ಕಣ್ಣೀರು!
ಅತ್ತೆ ಮನೆಗೆ ಹೋಗಿ ವಾಪಸ್​ ಬರದ ತಂದೆಯನ್ನ ನೆನೆದು ಪುತ್ರಿ ಕೃತಿ, ಪಪ್ಪಾ ಐ ಮಿಸ್ ಯೂ ಪ್ಲೀಸ್ ಕಮ್ ಟು ಹೋಂ ಅಂತ ಕಣ್ಣೀರಿಟ್ಟು ಗೋಗರೆದು ಕರೆಸಿದ್ದಳು. ಮನೆಗೆ ಬಂದಿದ್ದ ಓಂ ಪ್ರಕಾಶ್​​ ಅವರು ಗ್ರೌಂಡ್​ಫ್ಲೋರ್​ನಲ್ಲೇ ವಾಸ ಮಾಡ್ತಿದ್ದರು. ಮನೆಯ ಫಸ್ಟ್ ಪ್ಲೋರ್​​ನಲ್ಲಿ ಮಗ ಕಾರ್ತಿಕೇಶ್ ಹಾಗೂ ಅವರ ಪತ್ನಿ ವಾಸ ಮಾಡುತ್ತಿದ್ದರು. ಮಗಳು ಕೃತಿ ಮನೆಯ ಸೆಕೆಂಡ್ ಪ್ಲೋರ್ ನಲ್ಲಿ ಒಬ್ಬಳೇ ವಾಸವಾಗಿರುತ್ತಿದ್ದಳು. ಮೂರನೇ ಪ್ಲೋರ್​​​ನಲ್ಲಿ ಹೆಂಡತಿ ಮಗಳು ಇರುತ್ತಿದ್ದರು. ಆದರೆ ಓಂಪ್ರಕಾಶ್​ ಅವರ ಕೊಲೆ ನಡೆದ ದಿನ ​ಮಗ ಕಾರ್ತಿಕೇಶ್ ಮನೆಯಲ್ಲಿ ಇರಲಿಲ್ಲ ಅಂತ ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment