/newsfirstlive-kannada/media/post_attachments/wp-content/uploads/2025/04/OM-Prakash-wife-Pallavi.jpg)
ಬೆಂಗಳೂರು: ನಿವೃತ್ತ ಡಿಜಿಪಿ ಓಂ ಪ್ರಕಾಶ್​​ ಮತ್ತು ಪತ್ನಿ ಪಲ್ಲವಿ ನಡುವೆ ಮೊದಲಿನಿಂದಲೂ ಮನಸ್ತಾಪಗಳಿದ್ದವು. ಇಷ್ಟಕ್ಕೆ ಪಲ್ಲವಿಗೆ ಪತಿಯ ಮೇಲೆ ದ್ವೇಷ ಹುಟ್ಟಿಕೊಂಡಿಲ್ಲ. ಓಂ ಪ್ರಕಾಶ್ ಅವರು ದಾಂಡೇಲಿಯಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದರು. ಆಗಲ್ಲೇ ಪಲ್ಲವಿಗೆ ಗಂಡನ ಮೇಲೆ ಹಗೆ ಶುರುವಾಗಿತ್ತು ಎನ್ನಲಾಗಿದೆ.
ಆಸ್ತಿ ಕೊಂಡಿದ್ದು ಕೋಪವಲ್ಲ ಆ ಆಸ್ತಿ ತನ್ನ ತಂಗಿಯ ಹೆಸರಲ್ಲಿ ಕೊಂಡಿದ್ದು ಪಲ್ಲವಿಗೆ ಅರಗಿಸಿಕೊಳ್ಳಲು ಆಗಿರಲಿಲ್ಲವಂತೆ. ಇದೇ ವಿಚಾರಕ್ಕೆ ಓಂಪ್ರಕಾಶ್ ಅವರ ಬಳಿ ಪದೇ ಪದೇ ಜಗಳ ಮಾಡುತ್ತಿದ್ದರಂತೆ. ತಂಗಿಯ ಹೆಸರಲ್ಲಿ ಆಸ್ತಿ ಯಾಕೆ ಮಾಡಿದ್ದು ಎಂದು ಆಗಾಗ ಜಗಳ ಶುರು ಮಾಡುತ್ತಿದ್ದರು. ಆಗ ಓಂಪ್ರಕಾಶ್​ ನನ್ನ ತಂಗಿಯ ವಿಚಾರಕ್ಕೆ ನೀನು ಬರಬೇಡ ಎಂದು ಓಂಪ್ರಕಾಶ್ ಪತ್ನಿಗೆ ವಾರ್ನಿಂಗ್​ ಮಾಡಿದ್ದರು.
/newsfirstlive-kannada/media/post_attachments/wp-content/uploads/2025/04/DGP-OM-Prakash-Case-2.jpg)
ತಂಗಿಯ ಹೆಸರಿಗೆ ಪ್ರಾಪರ್ಟಿ ಮಾಡಿದ್ದರಿಂದಲೇ ಕೆರಳುತ್ತಿದ್ದ ಪಲ್ಲವಿ, ಪತಿಯ ಮೇಲೆ ಧ್ವೇಷ ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಪದೇ ಪದೇ ಜಗಳ ಮಾಡುತ್ತಾ, ಇಬ್ಬರಲ್ಲೂ ದೂರ ಬೆಳೆದಿತ್ತು. ನಂತರ ರೂಮ್​ಗಳು ಬದಲಾಗಿದ್ದವು, ಆಗಲೇ ಪತಿಯನ್ನ ಮುಗಿಸಲು ಪಲ್ಲವಿ ಪ್ಲ್ಯಾನ್​ಗಳು ಶುರು ಮಾಡಿದ್ದರು. ಈ ವಿಷಯವನ್ನ ಸ್ನೇಹಿತೆಯರ ಜೊತೆ ಹಂಚಿಕೊಳ್ಳುತ್ತಿದ್ದರು.
ಸದ್ಯಕ್ಕೆ ಈ ಕೊಲೆಯಲ್ಲಿ, ಆ ದಿನ ತಂಗಿ ಮನೆಯಿಂದ ತಂದೆಯನ್ನ ಬಲವಂತವಾಗಿ ಮನೆಗೆ ಕರೆಸಿದ್ದ ಮಗಳ ಪಾತ್ರ ಏನಾದರೂ ಇದೆಯಾ ಅನ್ನೋದರ ಬಗ್ಗೆಯೂ ತನಿಖೆ ನಡೀತಾ ಇದೆ.
ನಿರ್ದಯವಾಗಿ ಕೊಂದ ‘ಪಲ್ಲವಿ’ ವಿಕೃತ ಕೇಕೆ ಹಾಕಿದ್ರಾ?
ಮನೆಯಲ್ಲಿ ಪತಿಯನ್ನ ನಿರ್ದಯವಾಗಿ ಹತ್ಯೆ ಮಾಡಿ, ಎಷ್ಟೋ ದಿನದ ದ್ವೇಷ ಈ ದಿನ ತೀರಿತು. ಮಾನ್​ಸ್ಟರ್​ ಸತ್ತ ಅಂತ, ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಪಲ್ಲವಿ ರಣಕೇಕೆ ಹಾಕಿದ್ದರಂತೆ. ವಿಕೃತವಾಗಿ ಕಿರುಚುತ್ತಾ, ನಗುತ್ತಾ.. ಹಿರಿಯ ಪೊಲೀಸ್ ಅಧಿಕಾರಿ ಪತ್ನಿ ಒಬ್ಬರಿಗೆ ಕಾಲ್ ಮಾಡಿ, ಐ ಹ್ಯಾವ್ ಫಿನಿಶ್ಡ್ ಮಾನ್ ಸ್ಟರ್ ಎಂದು ವಿಕೃತವಾಗಿ ನಕ್ಕಿದ್ದಾರಂತೆ.
ಆದರೆ ಆ ನಿವೃತ್ತ ಆಫೀಸರ್ ಪತ್ನಿ ಯಾವಾಗಲೂ ನಿಂದು ಇದೇ ಆಯ್ತು. ನೀನು ಇದನ್ನೇ ಹೇಳ್ತಾ ಇರ್ತೀಯಾ ಎಂದು ಈಸಿಯಾಗಿ ತಗೊಂಡಿದ್ದಾರೆ. ಆಗ ಸ್ನೇಹಿತೆಗೆ ಬೇಕಿದ್ದರೆ ನೋಡು ಎಂದು ಆ ನಿವೃತ್ತ ಪೊಲೀಸ್ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್​ ಮಾಡಿ, ಯೂ ಕ್ಯಾನ್ ಸೀ ರಿಯಲ್ ಐ ಹ್ಯಾವ್ ಫಿನಿಶ್ಡ್ ಮಾನ್‌ಸ್ಟರ್ ಅಂತ ರಕ್ತಸಿಕ್ತವಾಗಿದ್ದ ಓಂಪ್ರಕಾಶ್ ಮೃತದೇಹವನ್ನ ತೋರಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/OM-PRAKASH.jpg)
ವಿಡಿಯೋ ಕಾಲ್​ನಲ್ಲಿ ಓಂಪ್ರಕಾಶ್ ಮೃತದೇಹ ನೋಡಿ ಕಕ್ಕಾಬಿಕ್ಕಿಯಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಪತ್ನಿ, ಕೂಡಲೇ ಮನೆಯಲ್ಲಿದ್ದ ತನ್ನ ಪತಿಗೆ ವಿಚಾರ ತಿಳಿಸಿದ್ದಾರೆ. ಅವರು ತಡಮಾಡದೇ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸ್ ಕಂಟ್ರೋಲ್ ರೂಂನಿಂದ ಹೆಚ್.ಎಸ್.ಆರ್ ಲೇಔಟ್ ಪೊಲೀಸರಿಗೆ ಮಾಹಿತಿ ರವಾನೆಯಾಗಿತ್ತು.
ಇದನ್ನೂ ಓದಿ: ಕಿವಿಗೆ ಪೆನಾಯಿಲ್, ಗೂಗಲ್​ನಲ್ಲಿ ಸರ್ಚ್.. ನಿವೃತ್ತ DG-IGP ಓಂ ಪ್ರಕಾಶ್ ಸಾವಿಗೂ ಮುನ್ನ ಆಗಿದ್ದೇನು?
30 ನಿಮಿಷಗಳ ಕಾಲ ಬಾಗಿಲು ತೆರೆಯದೇ ಸತಾಯಿಸಿದ್ದ ಪಲ್ಲವಿ!
ನಿನ್ನೆ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಮಧ್ಯಾಹ್ನ 4:30ರ ಸುಮಾರಿಗೆ ಕಂಟ್ರೋಲ್ ರೂಮ್​ನಿಂದ ಕರೆ ಬಂದಿದ್ದೇ ತಡ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಖಾಕಿ ಪಡೆ ಸೀದಾ ಓಂಪ್ರಕಾಶ್​​ ಅವರ ಮನೆಗೆ ಬಂದಿದೆ. ಗ್ರೌಂಡ್​ ಪ್ಲೋರ್​ ಒಳಗೆ ಇದ್ದ ಪಲ್ಲವಿ, ಪೊಲೀಸರು ಬಂದಾಗ 30 ನಿಮಿಷಗಳ ಕಾಲ ಬಾಗಿಲು ತೆರೆಯದೇ ಸತಾಯಿಸಿದ್ದರು. ಕಡೆಗೆ ಬೇರೆ ದಾರಿ ಇಲ್ಲದೇ ಹೊರ ಬಂದು ಪೊಲೀಸರಿಗೆ ಶರಣಾಗಿದ್ದಾರೆ. ವಿಚಾರಣೆ ಸಮಯದಲ್ಲಿ ನನ್ನ ಪತಿ ನನ್ನನ್ನು ಶೂಟ್ ಮಾಡಲು ಬಂದಿದ್ದರು. ಆತ್ಮರಕ್ಷಣೆಗಾಗಿ, ಡೈನಿಂಗ್​ ಟೇಬಲ್​ ಮೇಲಿದ್ದ ಚಾಕುವಿನಿಂದ ಇರಿದು ಕೊಂದೇ ಎಂದು ಪಲ್ಲವಿ ಭಯಾನಕ ಘಟನೆ ಬಗ್ಗೆ ಹೇಳಿಕೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us