ಫಿಶ್ ಕರಿ, ಕಣ್ಣಿಗೆ ಖಾರದಪುಡಿ.. ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ; ಪತ್ನಿಯಿಂದ ಓಂ ಪ್ರಕಾಶ್ ಫಿನಿಶ್‌!

author-image
admin
Updated On
ನಿವೃತ್ತ DG-IGP ಓಂ ಪ್ರಕಾಶ್​ಗೆ ಎಷ್ಟು ಬಾರಿ ಇರಿದರು.. ಜೀವ ಹೋಗುವರೆಗೂ ಪತ್ನಿ ನಿಂತು ನೋಡಿದ್ರಾ?
Advertisment
  • ಮಧ್ಯಾಹ್ನ 2:35ಕ್ಕೆ ಫಿಶ್ ಕರಿ ಆರ್ಡರ್ ಮಾಡಿದ್ದ ಓಂ ಪ್ರಕಾಶ್‌!
  • ತನ್ನ ಇಷ್ಟದ ಊಟವೇ ಓಂ ಪ್ರಕಾಶ್ ಅವರಿಗೆ ಕೊನೆಯ ಊಟ
  • ಪತ್ನಿ 5-6 ಬಾರಿ ಚಾಕು ಇರಿದರೂ ಉಸಿರಾಡ್ತಿದ್ದ ಓಂ ಪ್ರಕಾಶ್

ಬೆಂಗಳೂರು: ನಿವೃತ್ತ DG-IGP ಓಂ ಪ್ರಕಾಶ್ ಅವರು ನಿನ್ನೆ ಮಧ್ಯಾಹ್ನ 2:35ರ ಸುಮಾರಿಗೆ ತನ್ನ ಇಷ್ಟದ ಫಿಶ್ ಕರಿಯನ್ನ ಜೆ.ಪಿ ನಗರದ ಒಂದು ಹೋಟೆಲ್​ನಿಂದ ಆರ್ಡರ್ ಮಾಡಿದ್ದರು. 3:00 ಗಂಟೆ ಸುಮಾರಿಗೆ ಆರ್ಡರ್​ ಬಂದಿದೆ. ಆರ್ಡರ್​​ ಬರುವ ಮುನ್ನ, ಪತ್ನಿ ಪಲ್ಲವಿ ಗ್ರೌಂಡ್​ ಪ್ಲೋರ್​ಗೆ ಬಂದಿದ್ದಳಂತೆ. 3:10ರ ವೇಳೆಗೆ ಓಂ ಪ್ರಕಾಶ್​​ ಊಟ ಸೇವಿಸಲು ಕೂತಿದ್ದರು. ಈ ಊಟ ಸೇವಿಸುವ ಮುನ್ನ ಅಂದರೆ ಕೆಲವೇ ನಿಮಿಷಗಳ ಮುಂಚೆ, ಮತ್ತೆ ಪತಿ, ಪತ್ನಿ ಮಧ್ಯೆ ಮಾತಿನ ಚಕಮಕಿಯಾಗಿತ್ತು ಎನ್ನಲಾಗಿದೆ.

ಗಲಾಟೆ ಮಾಡಿ ಎಂದಿನಂತೆ ಬೈದುಕೊಂಡು ಪತ್ನಿ ಮಲಗಿದ್ದಾಳೆ ಎಂದು ಭಾವಿಸಿ, ಓಂಪ್ರಕಾಶ್​ ಊಟಕ್ಕೆ ಕುಳಿತಿದ್ದರು. ಹೇಗೋ ಪತ್ನಿ ರೂಂನಲ್ಲಿ ನಿದ್ರೆ ಮಾಡ್ತಿದ್ದಾಳೆಂದು ಭಾವಿಸಿ, ಪಿಸ್ತೂಲ್‌ ಅನ್ನು ಕಬೋರ್ಡ್‌ನಲ್ಲಿಟ್ಟು ಊಟ ಮಾಡಲು ಶುರು ಮಾಡಿದ್ದರು. ಇದೇ ಓಂಪ್ರಕಾಶ್​ ಅವರ ಕೊನೆಯ ಊಟವಾಗಿತ್ತು.

ಇದನ್ನೂ ಓದಿ: ಕಿವಿಗೆ ಪೆನಾಯಿಲ್‌, ಗೂಗಲ್​ನಲ್ಲಿ ಸರ್ಚ್.. ನಿವೃತ್ತ DG-IGP ಓಂ ಪ್ರಕಾಶ್ ಸಾವಿಗೂ ಮುನ್ನ ಆಗಿದ್ದೇನು? 

ಕಣ್ಣಿಗೆ ಖಾರದಪುಡಿ.. ಹೊಟ್ಟೆಗೆ ಕತ್ತಿಗೆ ಚಾಕುವಿನ ಇರಿತ!
ಸಮಯ ಮಧ್ಯಾಹ್ನ 3:35 ಆಗಿತ್ತು. ಇನ್ನೇನು ಊಟ ಮುಗಿಸಿ ಏಳಬೇಕಿದ್ದ ಓಂಪ್ರಕಾಶ್ ಅವರ ಮೇಲೆ, ಹಗೆ ಮಸೆಯುತ್ತಿದ್ದ ಪತ್ನಿ ಪಲ್ಲವಿ, ಏಕಾಏಕಿ ಬಂದು ಕಣ್ಣಿಗೆ ಖಾರದಪುಡಿ ಎರಚಿದ್ದಾರೆ. ಕೂಡಲೇ ಅಡುಗೆ ಮನೆಯಲ್ಲಿ ಕಾಯಿಸಿದ್ದ ಬಿಸಿ ಅಡುಗೆ ಎಣ್ಣೆಯನ್ನ ಪತಿ ಮೇಲೆ ಸುರಿದಿದ್ದಾರೆ ಎನ್ನಲಾಗಿದೆ.

ಅಲ್ಲೇ ಡೈನಿಂಗ್ ಟೇಬಲ್ ಮೇಲೆ ಪತಿ ವಾಲುತ್ತಿದ್ದಂತೆ, ಬೆಡ್ ಶೀಟ್​ನಿಂದ ಮುಖವನ್ನ ಸುತ್ತಿ ಹೊಟ್ಟೆಗೆ ಚಾಕು ಇರಿದಿದ್ದಾರೆ. ಐದಾರು ಬಾರಿ ಚಾಕು ಇರಿದರೂ ಉಸಿರಾಡ್ತಿದ್ದ ಓಂಪ್ರಕಾಶ್ ಅವರನ್ನ ಕಂಡು, ಹಾಗೆ ಬಿಟ್ಟರೇ ತನ್ನನ್ನೇ ಕೊಲ್ಲಬಹುದು ಅನ್ನೋ ಭೀತಿಯಲ್ಲಿ, ಕುತ್ತಿಗೆಯ ಕಡೆಗೆ ಎಡಬದಿಯಲ್ಲಿ ಎರಡೆರಡು ಬಾರಿ ಚಾಕುವಿನಿಂದ ಇರಿದು, ಪಲ್ಲವಿ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ.

publive-image

ಪತ್ನಿಯಿಂದ ಓಂ ಪ್ರಕಾಶ್ ಫಿನಿಶ್‌!
ಮಧ್ಯಾಹ್ನ 2.30 - ಊಟ ಆರ್ಡರ್
ಮಧ್ಯಾಹ್ನ 3.20 - ಊಟದ ವೇಳೆ ಜಗಳ
ಸಂಜೆ 4.00 - ಪಲ್ಲವಿಯಿಂದ ಕೊಲೆ
ಸಂಜೆ 4.10 - ಕೊಲೆ ಬಳಿಕ ಕಾಲ್
ಸಂಜೆ 4.15 - ಪಲ್ಲವಿ ವಿಡಿಯೋ ಕಾಲ್
ಸಂಜೆ 4.45 -  ಸ್ಥಳಕ್ಕೆ ಪೊಲೀಸರ ಎಂಟ್ರಿ
ಸಂಜೆ 5.00 - ಪುತ್ರನಿಗೆ ಕೊಲೆ ಮಾಹಿತಿ
ಸಂಜೆ 5.45 - ಮನೆಗೆ ಆಗಮಿಸಿದ ಪುತ್ರ
ರಾತ್ರಿ 7.10 - ಪಲ್ಲವಿ, ಪುತ್ರಿ ಕೃತಿ ವಶಕ್ಕೆ
ರಾತ್ರಿ 7.30 - ಪಲ್ಲವಿ, ಕೃತಿ ವಿರುದ್ಧ FIR

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment