/newsfirstlive-kannada/media/post_attachments/wp-content/uploads/2025/04/OM-PRAKASH.jpg)
ನಿವೃತ್ತ ಐಪಿಎಸ್ ಓಂ ಪ್ರಕಾಶ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಆತ್ಮರಕ್ಷಣೆಗಾಗಿ ಕೊಲೆ ಮಾಡಿರೋದಾಗಿ ಪತ್ನಿ ಪಲ್ಲವಿ ಒಪ್ಪಿಕೊಂಡಿದ್ದಾರೆ ಅಂತ ಗೊತ್ತಾಗಿದೆ.
ಓಂ ಪ್ರಕಾಶ್ ಮೇಲೆ ಖಾರದ ಪುಡಿ, ಅಡುಗೆ ಆಯಿಲ್ ಸುರಿಯಲಾಗಿದೆ. ಕೈಕಾಲು ಕಟ್ಟಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಚುಚ್ಚಲಾಗಿದೆ. ನಂತರ ತೀವ್ರ ರಕ್ತಸ್ರಾವದಿಂದ ಓಂಪ್ರಕಾಶ್ ಸಾವನ್ನಪ್ಪಿದ್ದಾರೆ. ಸಂಜೆ ಸ್ಥಳೀಯ ಪೊಲೀಸರಿಗೆ ಪತ್ನಿ ಪಲ್ಲವಿ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ. ಪೊಲೀಸ್ ವಿಚಾರಣೆ ವೇಳೆ ಮಡಿವಾಳ ಎಸಿಪಿ ವಾಸುದೇವ್ ಮತ್ತು ಡಿಸಿಪಿ ಸಾ.ರಾ ಫಾತೀಮಾ ಮುಂದೆ ಹೇಳಿಕೆ ನೀಡಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: ‘ಗೆಲುವಿನ ಕ್ರೆಡಿಟ್ ಯಾರಿಗೆ ಅಂದರೆ..’ ಗೆದ್ದ ಖುಷಿಯಲ್ಲಿ RCB ಕ್ಯಾಪ್ಟನ್ ಹೊಗಳಿದ್ದು ಯಾರನ್ನ..?
ವಿಚಾರಣೆಯಲ್ಲಿ ಭಯಾನಕ ಸತ್ಯ!
ಮನೆಯಲ್ಲಿ ಗನ್ ಹಿಡಿದು ಓಡಾಡುತ್ತಿದ್ದರು. ಮನೆಯಲ್ಲಿದ್ರು ಪಿಸ್ತೂಲ್ನ್ನ ಸದಾಕಾಲ ಜೊತೆಯಲ್ಲಿ ಇಟ್ಟುಕೊಳ್ಳುತ್ತಿದ್ರು. ಸಣ್ಣಪುಟ್ಟ ಜಗಳವಾದರೂ ಗನ್ ತೋರಿಸಿ ಶೂಟ್ ಮಾಡೋದಾಗಿ ಹೆದರಿಸ್ತಿದ್ರು. ಕಳೆದ ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇ ಪದೆ ಗನ್ ತಂದು ನನಗೆ ಮತ್ತು ನನ್ನ ಮಗಳಿಗೆ ಶೂಟ್ ಮಾಡೋದಾಗಿ ಬೆದರಿಕೆ ಹಾಕುತ್ತಿದ್ರು. ಬೆಳಗ್ಗೆಯಿಂದ ಬೇರೆ ಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳ ಶುರುವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಯ್ತು. ಅವರೇ ಮೊದಲು ಹಲ್ಲೆಗೆ ಮುಂದಾದ್ರು. ನಮ್ಮನ್ನೇ ಕೊಲೆ ಮಾಡಲು ಓಂ ಪ್ರಕಾಶ್ ಯತ್ನ ನಡೆಸಿದ್ರು. ಗನ್ ತೋರಿಸಿ ಶೂಟ್ ಮಾಡೋದಾಗಿ ಬೆದರಿಕೆ ಹಾಕಿದ್ರು. ಈ ವೇಳೆ ನಮ್ಮನ್ನ ಉಳಿಸಿಕೊಳ್ಳಲು ಹೋರಾಟ ಮಾಡಿದ್ವಿ. ಆತ್ಮರಕ್ಷಣೆಗೆ ಚಾಕು ಇರಿದಿದ್ದೇನೆ ಅಂತಾ ಓಂ ಪ್ರಕಾಶ್ ಪತ್ನಿ ಪೊಲೀಸ್ ತನಿಖೆ ವೇಳೆ ಮಾಹಿತಿ ನೀಡಿದ್ದಾಳೆ ಎನ್ನಲಾಗಿದೆ.
ಇದನ್ನೂ ಓದಿ: ಓಂ ಪ್ರಕಾಶ್ ಬರ್ಬರ ಹತ್ಯೆ; ಪೊಲೀಸರಿಗೆ ಮೂಡಿದ ಅನುಮಾನಗಳು ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ