ಮುಖದಲ್ಲಿ ಕೊಂಚವೂ ಪಶ್ಚಾತ್ತಾಪ ಇರಲಿಲ್ಲ.. ಪರಪ್ಪನ ಅಗ್ರಹಾರ ಸೇರುವಾಗ ಓಂ ಪ್ರಕಾಶ್ ಪತ್ನಿ ಹೇಳಿದ್ದೇನು..?

author-image
Ganesh
Updated On
ಮುಖದಲ್ಲಿ ಕೊಂಚವೂ ಪಶ್ಚಾತ್ತಾಪ ಇರಲಿಲ್ಲ.. ಪರಪ್ಪನ ಅಗ್ರಹಾರ ಸೇರುವಾಗ ಓಂ ಪ್ರಕಾಶ್ ಪತ್ನಿ ಹೇಳಿದ್ದೇನು..?
Advertisment
  • ನಿವೃತ್ತ IPS ಅಧಿಕಾರಿಯ ಬದುಕು ದುರಂತ ಅಂತ್ಯ
  • ಪರಪ್ಪನ ಅಗ್ರಹಾರ ಜೈಲು ಸೇರಿದ ಆರೋಪಿ ಪತ್ನಿ!
  • ಟಾಪ್​​​ಕಾಪ್​ ಜೀವಕ್ಕೆ ಮುಳ್ಳಾದ ಮುಳ್ಳಿನ ಮೀನೂಟ!

ಮಾಜಿ IPS ಅಧಿಕಾರಿಯ ಬದುಕು ದುರಂತ ಅಂತ್ಯ ಆಗಿದೆ. ಪತ್ನಿ ಮತ್ತು ಪುತ್ರಿಯ ವಿರುದ್ಧ FIR ದಾಖಲಾಗಿದೆ.. ಪತ್ನಿ ಪಲ್ಲವಿ ಅರೆಸ್ಟ್ ಆಗಿ ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ​. ಅದಕ್ಕೂ ಮೊದಲೇ ಓಂ ಪ್ರಕಾಶ್​​​ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿದೆ.

ನಿವೃತ್ತ IPS ಅಧಿಕಾರಿಯ ಬದುಕು ದುರಂತ ಅಂತ್ಯ

ನಿನ್ನೆಯ ದಿನ ಪತ್ನಿ ಪಲ್ಲವಿಯನ್ನ ನ್ಯಾಯಧೀಶರ ಮುಂದೆ ಹಾಜರು ಪಡಿಸಲಾಯ್ತು.. ಶಾಂತಿನಗರದಲ್ಲಿರುವ 39ನೇ ACMM ನ್ಯಾಯಧೀಶೆ ಜಿ.ಎ ಲತಾದೇವಿ, ಆರೋಪಿ ಪಲ್ಲವಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ರು.. ಈ ಬೆನ್ನಲ್ಲೆ ಆರೋಪಿ ಪತ್ನಿ, ಪರಪ್ಪನ ಅಗ್ರಹಾರ ಜೈಲು ಸೇರಿದ್ದಾಳೆ.. ಪಲ್ಲವಿಯನ್ನ ಪೊಲೀಸರು ಜೈಲಿಗೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ: ಫಿಶ್ ಕರಿ, ಕಣ್ಣಿಗೆ ಖಾರದಪುಡಿ.. ಮಧ್ಯಾಹ್ನ 2.30ರಿಂದ ಸಂಜೆ 5 ಗಂಟೆ; ಪತ್ನಿಯಿಂದ ಓಂ ಪ್ರಕಾಶ್ ಫಿನಿಶ್‌!

publive-image

ಇದಕ್ಕೂ ಮುನ್ನ ತನ್ನದೇನು ತಪ್ಪೇ ಇಲ್ಲ ಅನ್ನೋ ರೀತಿ ಮಾತ್ನಾಡಿದ ಓಂ ಪ್ರಕಾಶ್ ಪತ್ನಿ ಪಲ್ಲವಿಗೆ ಮುಖದಲ್ಲಿ ಕೊಂಚವೂ ಪಶ್ಚಾತ್ತಾಪ ಇರಲಿಲ್ಲ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರಿಯಾಕ್ಷನ್​ ಮಾಡಿದ ಪಲ್ಲವಿ, ನನ್ನ ಮತ್ತು ಮಗಳ ವಿರುದ್ಧ ತೀವ್ರವಾಗಿ ಹಿಂಸೆ ನೀಡ್ತಿದ್ರು. ಮುಂದೆ ವಿಚಾರಣೆ ಹೇಳಿಕೆಯಲ್ಲಿ ನಿಮಗೆ ಗೊತ್ತಾಗಲಿದೆ ಎಂದಿದ್ರು.

ಕೇಸ್​​​ ಸಿಸಿಬಿಗೆ ವರ್ಗಾವಣೆ!

ಓಂ ಪ್ರಕಾಶ್ ಕೊಲೆ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿದೆ. ಬೆಂಗಳೂರು ಕಮಿಷನರ್ ದಯಾನಂದ್, WPW ಅಂದ್ರೆ ಮಹಿಳಾ ಸಂರಕ್ಷಣಾ ದಳಕ್ಕೆ ವರ್ಗಾಯಿಸಿದ್ದಾರೆ.. ಮೀನೂಟ ಅಂದ್ರೆ ಓಂ ಪ್ರಕಾಶ್​​ಗೆ ಇಷ್ಟದ ಬಾಡೂಟ.. ಮುಳ್ಳಿನ ಮೀನೂಟವೇ ಜೀವಕ್ಕೆ ಮುಳ್ಳಾಗಿದೆ.

ಮುಳ್ಳಿನ ಮೀನು.. ಹೊಟ್ಟೆ ಬಗೆದ ಚಾಕು!

ಓಂ ಪ್ರಕಾಶ್​ರಿಗೆ ಮೀನೂಟ ಅಂದ್ರೆ ಅಚ್ಚುಮೆಚ್ಚು.. ಸಾಯುವ ಗಳಿಗೆಯಲ್ಲೂ ಮೀನೂಟಕ್ಕೆ ಆರ್ಡರ್​​ ಮಾಡಿದ್ರು.. ಮಧ್ಯಾಹ್ನ 2.30ಕ್ಕೆ ಫಿಶ್​ ಕರಿ ಆರ್ಡರ್ ಮಾಡಿದ್ರು.. ನೆಚ್ಚಿನ ಜೆ.ಪಿ ನಗರದ ಹೋಟೆಲ್​ನಿಂದ ಸ್ವಿಗ್ಗಿಯಲ್ಲಿ ಆರ್ಡರ್ ಕೊಟ್ಟಿದ್ರು.. ಮಧ್ಯಾಹ್ನ 3.20ರ ಸುಮಾರಿಗೆ ಓಂ ಪ್ರಕಾಶ್ ಊಟಕ್ಕೆ ಕುಳಿತಿದ್ರು.. ಊಟ ಮಾಡುವ ಮುನ್ನ ಪತಿ, ಪತ್ನಿ ನಡುವೆ ಮಾತಿನ ಚಕಮಕಿ ಶುರುವಾಗಿದೆ. ಈ ವೇಳೆ, ಪತ್ನಿ ಖಾರದ ಪುಡಿ ಎರಚಿ, ಬಿಸಿ ಎಣ್ಣೆ ಮೇಲೆ ಎರಚಿದ್ದಾರೆ ಅಂತ ಗೊತ್ತಾಗಿದೆ. ಪತಿ ವಾಲಿದಾಗ ಬೆಡ್​ಶೀಟ್​ನಲ್ಲಿ ಮುಖ ಮುಚ್ಚಿ ಹೊಟ್ಟೆಗೆ ಇರಿಯಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪತಿಯ ಮೇಲೆ ಏನಿತ್ತು ದ್ವೇಷ? ನಿವೃತ್ತ DGP ಓಂ ಪ್ರಕಾಶ್‌ ಸಾಯಿಸಿ ವಿಕೃತ ಕೇಕೆ ಹಾಕಿದ್ರಾ ಪಲ್ಲವಿ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment