₹225 ಕೋಟಿ ಲಾಟರಿ ಗೆದ್ದ ನಿವೃತ್ತ ಇಂಜಿನಿಯರ್; ಅದೃಷ್ಟ ಖುಲಾಯಿಸಿದ್ದೇ ರೋಚಕ ಸ್ಟೋರಿ!

author-image
admin
Updated On
₹225 ಕೋಟಿ ಲಾಟರಿ ಗೆದ್ದ ನಿವೃತ್ತ ಇಂಜಿನಿಯರ್; ಅದೃಷ್ಟ ಖುಲಾಯಿಸಿದ್ದೇ ರೋಚಕ ಸ್ಟೋರಿ!
Advertisment
  • 20 ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿದ್ದರು
  • ಆಗಾಗ ಅದೃಷ್ಟ ಪರೀಕ್ಷಿಸಿಕೊಳ್ಳುವ ಅಭ್ಯಾಸ ಇದ್ದ ಇಂಜಿನಿಯರ್
  • ಈ ಬಾರಿ 25% ಭಯದಲ್ಲಿ, 75% ಧೈರ್ಯದಲ್ಲಿ ಅದೃಷ್ಟ ಪರೀಕ್ಷೆ!

ಚೆನ್ನೈ ಮೂಲದ ಇಂಜಿನಿಯರ್​ ಒಬ್ಬರ ಮನೆಗೆ, ಲಕ್ಷ್ಮಿ ಲಾಟರಿ ಮೂಲಕ ಒಲಿದು ಬಂದಿದ್ದಾಳೆ. ಇಪ್ಪತ್ತು ವರ್ಷಗಳ ಕಾಲ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡಿ, ಭಾರತಕ್ಕೆ ವಾಪಸ್​ ಬಂದಿದ್ದ ಶ್ರೀರಾಮ್ ರಾಜಗೋಪಾಲನ್​ ಎಂಬುವವರಿಗೆ ಅದೃಷ್ಟದ ಬಾಗಿಲು ತೆರೆದು, ಬರೋಬ್ಬರಿ ₹225 ಕೋಟಿ ರೂಪಾಯಿ ಲಾಟರಿ ಹೊಡೆದಿದೆ.

ಎಮಿರೇಟ್ಸ್ ಡ್ರಾ MEGA7 ಎಂಬ ಆನ್‌ಲೈನ್‌​ ಆಟದಲ್ಲಿ ಆಸಕ್ತಿ ಇರುತ್ತಿದ್ದ ಶ್ರೀರಾಮ್​​ಗೆ, ಆಗಾಗ ಅದೃಷ್ಟ ಪರೀಕ್ಷಿಸಿಕೊಳ್ಳುವ ಅಭ್ಯಾಸ ಇತ್ತು. ಮೇ ತಿಂಗಳಲ್ಲಿ 25% ಭಯದಲ್ಲಿ, 75% ಧೈರ್ಯದಲ್ಲಿ ಅದೃಷ್ಟಕ್ಕೆ ಇಳಿದಿದ್ದ ಶ್ರೀರಾಮ್​, ಕಣ್ಮುಚ್ಚಿಕೊಂಡು ಬೆರಳಿಗೆ ಸಿಕ್ಕ ನಂಬರ್​ಗಳನ್ನ ಒತ್ತಿದ್ದರಂತೆ. ತಿಂಗಳು ಕಳಿಯುವಷ್ಟರಲ್ಲಿ ಅವರು ಗೆದ್ದಿದ್ದ ಮೊತ್ತ ಶ್ರೀರಾಮ್​ರನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದೆ.

ಇದನ್ನೂ ಓದಿ: ದೇವರ ಹೆಸರಲ್ಲಿ ಹಣಕ್ಕಾಗಿ ಡಿಮ್ಯಾಂಡ್.. ಕೊಡದಿದ್ದಕ್ಕೆ ದಾರಿಹೋಕನಿಗೆ ಚಾಟಿ ಏಟು..? 

ಏನಿದು ಎಮಿರೇಟ್ಸ್ ಡ್ರಾ MEGA7 ಗೇಮ್​?
ಇದೊಂದು ಆನ್ಲೈನ್​ ಗೇಮ್​.. ಎಮಿರೇಟ್ಸ್ ಡ್ರಾ ನಲ್ಲಿ, PiCK 1, EASY 6, FAST 5,MEGA 7 ಅನ್ನೋ ನಾಲ್ಕು ಹಂತಗಳು ಇರುತ್ತವೆ. ಕೊನೆಯ ಸ್ಟೆಪ್​​ನಲ್ಲಿ ಹೆಚ್ಚು ಹಣ ಡೆಪಾಸಿಟ್​ ಮಾಡಿ, ದುಪ್ಪಟ್ಟು ಹಣ ಡ್ರಾ ಮಾಡಬಹುದು. ಶ್ರೀರಾಮ್​ ಅವರು ಗೇಮ್​ ಆಡಿದ್ದು, ಇದೇ MEGA7 ಸ್ಟೆಪ್​ನಲ್ಲಿ, ಇಲ್ಲಿ 1ರಿಂದ 37 ನಂಬರ್ಸ್​ ಇರುತ್ತವೆ. ಅದರಲ್ಲಿ 7 ನಂಬರ್​ಗಳನ್ನ ಸೆಲೆಕ್ಟ್​ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ 5 ರೀತಿಯ ನಂಬರ್​ ಮ್ಯಾಚ್ ಇರುತ್ತೆ. ಆ 5 ರೀತಿಯ ಮ್ಯಾಚಿಂಗ್​ನಲ್ಲೂ ಇಂತಿಷ್ಟು ಮೊತ್ತ ಅಂತ ಇರುತ್ತೆ. ಶ್ರೀರಾಮ್ ಮಾರ್ಚ್ 16 ಕ್ಕೆ ನಂಬರ್​ಗಳನ್ನ ಸೆಟ್​ ಮಾಡಿದ್ರು. ಆ ದಿನ ಕಣ್ಮುಚ್ಚಿ ಒತ್ತಿದ್ದ ಸಂಖ್ಯೆಯೇ ಈ ದಿನ ₹225 ಕೋಟಿ ಲಾಟರಿಯಾಗಿ ಮರಳಿ ಸಿಕ್ಕಿದೆ.

ಲಾಟಿರಿಯಲ್ಲಿ ಗೆದ್ದ ಮೊತ್ತದಲ್ಲಿ ಒಂದು ಭಾಗ ದಾನಕ್ಕೆ!
ಡಾಲರ್​​ಗಳಲ್ಲಿ ಲಾಟರಿ ಗೆದ್ದ ಶ್ರೀರಾಮ್, ಗೆಲುವಿನ ಒಂದು ಭಾಗವನ್ನ ದಾನಕ್ಕೆ ಕೊಡುವುದಾಗಿ ಹೇಳಿಕೊಂಡಿದ್ದಾರೆ. ಇದು ನನಗೆ ನನ್ನ ಕುಟುಂಬಕ್ಕೆ ಭರವಸೆಯನ್ನ ಮೂಡಿಸಿದೆ. ಮಕ್ಕಳ ಭವಿಷ್ಯಕ್ಕಾಗಿ ಭದ್ರ ಬುನಾದಿ ಹಾಕಲು ಈ ಹಣ ಸಹಾಯ ಆಗುತ್ತೆ ಎಂದೆಲ್ಲಾ ಶ್ರೀರಾಮ್​​ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment