/newsfirstlive-kannada/media/post_attachments/wp-content/uploads/2025/01/JOBS_NHAI.jpg)
ಈ ಡಿಜಿಟಲ್ ಯುಗ ಹೇಗಿದೆ ಅಂದರೆ ದೊಡ್ಡ ದೊಡ್ಡ ಬುದ್ಧಿವಂತರಿಗೇ ಮಂಕು ಮಾಡುವಷ್ಟು! ಹೈದರಾನಾದ್ನ ಸೋಮಾಜಿಗುಡಕ್ಕೆ ಸೇರಿದ 72 ವರ್ಷದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರಿಗೆ ಸೈಬರ್ ಖದೀಮರು 3.37 ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ.
ಈ ಸೈಬರ್ ಫ್ರಾಡ್ಗಳು ಅತ್ಯಾಧುನಿಕ ನಕಲಿ ಸ್ಟಾಕ್ ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ನಿವೃತ್ತ ಐಎಎಸ್ ಅಧಿಕಾರಿಗೆ ಲಿಂಕ್ ಕಳಿಸಿ APK ಫೈಲ್ ಇನ್ಸ್ಟಾಲ್ ಮಾಡುವಂತೆ ಹೇಳಿದ್ದಾರೆ. ಅದನ್ನ ಗಮನಿಸಿದ್ದ ಅಧಿಕಾರಿ ಅದೊಂದು ಕಾನೂನುಬದ್ಧ ಬಿಸ್ನೆಸ್ ವೇದಿಕೆ ಎಂದು ನಂಬಿದ್ದರು. ನಂತರ ನನ್ನ ಹೆಸರು ಅರ್ಜುನ್ ರಮೇಶ್ ಮೆಹ್ತಾ, ನಾನು ಕಂಪನಿಯ ಮುಖ್ಯ ಹೂಡಿಕೆ ಅಧಿಕಾರಿ ಎಂದು ಹೇಳಿಕೊಂಡು ಒಬ್ಬ ಕರೆ ಮಾಡಿದ್ದನಂತೆ.
ಇದನ್ನೂ ಓದಿ: ಕಾಂತಾರ ಅವತಾರ ಬಳಿಕ KL ರಾಹುಲ್ ಮತ್ತೊಂದು ಹೊಸ ಅಧ್ಯಾಯ.. ಗುಜರಾತ್ ವಿರುದ್ಧ ಭರ್ಜರಿ ಶತಕ..!
ಸೈಬರ್ ಜಾಲಕ್ಕೆ ಬಿದ್ದಿದ್ದೇಗೆ..?
ತಾನೊಬ್ಬ ಮುಖ್ಯ ಹೂಡಿಕೆ ಅಧಿಕಾರಿ ಎಂದು ಹೇಳಿಕೊಂಡು ಬಂದ ಕರೆ, ಆ ಲಿಂಕ್ನಲ್ಲಿ ಇದ್ದ ಮಾಹಿತಿಗಳೆಲ್ಲಾ ನಿವೃತ್ತ ಐಎಎಸ್ ಅಧಿಕಾರಿಗೆ ಕೊಂಚವೂ ಅನುಮಾನ ಬರದಂತೆ ಇದ್ದವು. ಅಷ್ಟೇ ಅಲ್ಲದೇ ಅರ್ಜುನ್ ರಮೇಶ್ ಮೆಹ್ತಾ, ಇತರೇ ಮೆಂಬರ್ಸ್ ಬಗ್ಗೆ ಹೇಳ್ತಾ, ಮ್ಯೂಚುವಲ್ ಫಂಡ್‌ಗಳು, ಐಪಿಒಗಳು ಮತ್ತು ಹೂಡಿಕೆಗಳ ಮೇಲೆ ಬರುವ ಲಾಭಗಳ ಬಗ್ಗೆ ವಿವರಿಸುತ್ತಾ, ಹೂಡಿಕೆ ಮೇಲೆ 90% ಲಾಭ ಪಡೆಯಬಹುದು ಎಂದು ಹೇಳಿ ಬಲಿಪಶುವಿಗೆ ಭರವಸೆಗಳನ್ನ ಕೊಟ್ಟಿದ್ದ.
ಇದಾದ ನಂತರ ವಂಚಕರು ಅಧಿಕಾರಿಗೆ ವಾಟ್ಸ್ಆ್ಯಪ್ ಮೂಲಕ ಮೆಲ್ಲ ಮೆಲ್ಲಗೆ ಸ್ಟಾಕ್ ಮಾರ್ಕೆಟ್ನ ಸಲಹೆಗಳು, ಹೂಡಿಕೆಯ ಪ್ಲಾನ್ಗಳನ್ನ ಕಳಿಸಿದ್ದರು. ವಿಪರ್ಯಾಸ ಏನಂದ್ರೆ ಇದೆಲ್ಲಾ ಎಐ ಅಂದರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ನಿಂದ ಬರ್ತಿದ್ದ ಮೆಸೆಜಸ್ ಅನ್ನೋದು ನಿವೃತ್ತ ಅಧಿಕಾರಿಗೆ ತಿಳಿದಿರಲಿಲ್ಲ.
ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಸ್ಟ್ರಾಂಗ್ ಕಂಬ್ಯಾಕ್.. ಯುವ ಆಟಗಾರನಿಗಾಗಿ ಸ್ಥಾನ ತ್ಯಾಗ ಮಾಡಿದ ಸಂಜು
ಇದೇ ಮಾರ್ಚ್ ಮೇ ತಿಂಗಳ ನಡುವೆ, ನಿವೃತ್ತ ಐಎಎಸ್ ಅಧಿಕಾರಿ ₹28,568 ರಿಂದ ₹50 ಲಕ್ಷ ಹಣವನ್ನ ವರ್ಗಾವಣೆ ಮಾಡಿದ್ದಾರೆ. ಹಾಗೆ ಮುಂದುವರೆದು ಕೊನೆಗೆ ಒಟ್ಟು ₹3.37 ಕೋಟಿ ಹಣ ಸೈಬರ್ ಖದೀಮರ ಬೊಕ್ಕಸಕ್ಕೆ ಸೇರಿಸಿಬಿಟ್ಟಿದ್ದಾರೆ.
ವಂಚನೆ ಬಯಲಾಗಿದ್ದೇಗೆ?
ನಿವೃತ್ತ ಐಎಎಸ್ ಅಧಿಕಾರಿ ಅಲ್ಲಿವರೆಗೂ ₹3.37 ಕೋಟಿ ಹೂಡಿಕೆ ಮಾಡಿದ್ದರು. ಕೊನೆಗೆ ಆ ಹೂಡಿಕೆಗೆ ಲಾಭ ಸುಮಾರು ₹22 ಕೋಟಿ ಎಂದು ವಂಚಕರ ಕಡೆಯಿಂದ ಹೇಳಲಾಗಿತ್ತು.ಆ ಮೊತ್ತವನ್ನ ಹಿಂಪಡೆಯಲು ಅಧಿಕಾರಿ ಯತ್ನಿಸಿದಾಗ ಈ ಭಯಾನಕ ಹಗರಣ ಬೆಳಕಿಗೆ ಬಂದಿದೆ. ಕೊನೆಗೆ ತಾನೂ ಹೂಡಿದ್ದ ಮೊತ್ತವನ್ನಷ್ಟೇ ಹಿಂತಿರುಗಿಸಿ ಎಂದು ಕೇಳಿದಾಗ ಅದಕ್ಕಾಗಿ ವಂಚಕರು ₹33.5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ತಾನೊಂದು ಫ್ರಾಡ್ಗಳ ಟ್ರ್ಯಾಪ್ಗೆ ಬಿದ್ದಿದ್ದೇನೆ ಎಂದು ಅಧಿಕಾರಿಗೆ ತಿಳಿದಿತ್ತು. ಕೂಡಲೇ ಆ ಬಲಿಪಶು ಟಿಜಿಸಿಎಸ್‌ಬಿ.. ಅಂದರೇ ತೆಲಂಗಾಣ ಸೈಬರ್ ಸೆಕ್ಯುರಿಟಿ ಬ್ಯೂರೋಗೆ ದೂರು ಕೊಟ್ಟಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬ್ಯಾಂಕ್ ವಹಿವಾಟುಗಳನ್ನ ಪರೀಶಿಲಿಸಿ ಆರೋಪಿಗಳ ಬೇಟೆಗೆ ಇಳಿದಿದ್ದಾರೆ.
ಇದನ್ನೂ ಓದಿ: ಅಂತಿಮ ಹಂತ ತಲುಪಿದ್ದರೂ ಪ್ಲೇ-ಆಫ್ ಬಗ್ಗೆ ಕ್ಲಾರಿಟಿನೇ ಇಲ್ಲ.. 5 ತಂಡ, 4 ಸ್ಥಾನ..! RCB ಕತೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ