ಎಲಾನ್​ ಮಸ್ಕ್​​ ಹೆಸರು ಹೇಳಿ ನಿವೃತ್ತ ಪೈಲೆಟ್​ಗೆ ವಂಚನೆ.. ದೋಚಿದ್ದು ಎಷ್ಟು ಲಕ್ಷ ಗೊತ್ತಾ?

author-image
Gopal Kulkarni
Updated On
ಎಲಾನ್​ ಮಸ್ಕ್​​ ಹೆಸರು ಹೇಳಿ ನಿವೃತ್ತ ಪೈಲೆಟ್​ಗೆ ವಂಚನೆ.. ದೋಚಿದ್ದು ಎಷ್ಟು ಲಕ್ಷ ಗೊತ್ತಾ?
Advertisment
  • ಎಲಾನ ಮಸ್ಕ್​ ಹೆಸರು ಹೇಳಿ ಲಕ್ಷ ಲಕ್ಷ ಟೋಪಿ ಹಾಕಿದ ವಂಚಕರು
  • ವಂಚಕರ ಮಾತಿಗೆ ಮರಳಾಗಿ ನಿವೃತ್ತ ಪೈಲೆಟ್ ಕಳೆದುಕೊಂಡಿದ್ದು ಎಷ್ಟು?
  • ಮಸ್ಕ್​ ತಾಯಿಯ ಹೆಸರಲ್ಲಿಯೂ ಚಾಟ್​ ಮಾಡಿದ ವಂಚಕರಿಂದ ಲೂಟಿ

ಡಿಜಿಟಲ್ ವಂಚನೆ,ಡಿಜಿಟಲ್ ಅರೆಸ್ಟ್​​ನಂತಹ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಅವರನ್ನು ಮರಳು ಮಾಡುವದರಲ್ಲಿ ವಂಚಕರು ಯಶಸ್ವಿಯಾಗುತ್ತಲೇ ಇದ್ದಾರೆ. ಇಷ್ಟು ದಿನ ನಾವು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು, ಸಿಬಿಐ ಅಧಿಕಾರಿಗಳಿ, ಇಡಿ ಅಧಿಕಾರಿಗಳು ಎಂದು ಹೇಳಿ ವ್ಯಕ್ತಿಗಳನ್ನು ಡಿಜಿಟಲ್ ಅರೆಸ್ಟ್​ ಮಾಡಿ ಹಣ ವಂಚಿಸುತ್ತಿದ್ದರು. ಆದರೆ, ಹರಿಯಾಣದ ಫರೀದಾಬಾದ್​​ನಲ್ಲಿ ನಿವೃತ್ತ ಪೈಲಟ್​ರೊಬ್ಬರನ್ನ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಹೆಸರು ಹೇಳಿ ವಂಚಿಸಿದ್ದಾರೆ.

ನಿವೃತ್ತ ಪೈಲೆಟ್​ ಶಕ್ತಿ ಸಿಂಗ್ ಲಂಬಾ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಚಾಟಿಂಗ್ ಮಾಡಿದ ವ್ಯಕ್ತಿಯೊಬ್ಬ ನಾನು ಎಲಾನ್​ ಮಸ್ಕ್​ ಕಂಪನಿಯ ಮ್ಯಾನೇಜರ್ ಎಂದು ಚಾಟಿಂಗ್ ಮಾಡಿದ್ದಾನೆ. ಅವರು ಭಾರತಕ್ಕೆ ಬಂದಾಗ ನಿಮಗೆ ಅವರನ್ನು ಭೇಟಿ ಮಾಡಿಸುತ್ತೇನೆ, ನೀವು ಅವರ ಕಂಪನಿಯಲ್ಲಿ ಹೂಡಿಕೆ ಮಾಡಿ ಎಂದು ದುಂಬಾಲು ಬಿದ್ದಿದ್ದಾನೆ. ಇದನ್ನು ನಂಬಿದ ಶಕ್ತಿಸಿಂಗ್ ಲಂಬಾ ಅವರು ಪ್ರಾರಂಭದಲ್ಲಿ ಎರಡು ಲಕ್ಷ ರೂಪಾಯಿ ನೀಡಿದ್ದಾರೆ.

ಇದನ್ನೂ ಓದಿ: ಶೌಚಾಲಯದ ನೀರಿನಿಂದ 300 ಕೋಟಿ ರೂಪಾಯಿ ಗಳಿಕೆ -ವಿಶಿಷ್ಟ ಆದಾಯದ ಮೂಲ ತಿಳಿಸಿದ ಗಡ್ಕರಿ

ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಎಲಾನ್​ ಮಸ್ಕ್ ತಾಯಿ ಹೆಸರನಲ್ಲಿ ಶಕ್ತಿಸಿಂಗ್ ಜೊತೆ ಚಾಟಿಂಗ್ ನಡೆದಿದೆ. ನಿಮಗೆ ಉಡುಗೊರೆಯಾಗಿ ರೋಲೆಕ್ಸ್​ ವಾಚ್​ ಕಳುಹಿಸುತ್ತಿದ್ದೇವೆ ಎಂದು ವಾಚ್ ಫೋಟೋ ತೋರಿಸಿ ಚಾಟಿಂಗ್​ ಮಾಡಿದ್ದಾರೆ. ಶಕ್ತಿಸಿಂಗ್ ಲಂಬಾ ತಾನು ಮಸ್ಕ್ ತಾಯಿಯ ಜೊತೆಯೇ ಚಾಟ್​ ಮಾಡುತ್ತಿದ್ದೇನೆ ಎಂದು ನಂಬಿದ್ದಾರೆ.

ಇದನ್ನೂ ಓದಿ:ಟೀ ಮಾರಲು ಕಾಲೇಜು ಬಿಟ್ಟ ಬೆಂಗಳೂರು ವಿದ್ಯಾರ್ಥಿ.. ವರ್ಷಕ್ಕೆ 5 ಕೋಟಿ ಹಣ ಸಂಪಾದನೆ

ಹೀಗೆ ಹಲವು ಜಾಲಗಳನ್ನು ಬೀಸಿ ಶಕ್ತಸಿಂಗ್​ರಿಂದ ಒಟ್ಟು 72 ಲಕ್ಷ ರೂಪಾಯಿಯನ್ನು ಹೂಡಿಕೆ ನೆಪದಲ್ಲಿ ದೋಚಲಾಗಿದೆ. ಶಕ್ತಿಸಿಂಗ್ ಅವರ ವಿವಿಧ ಖಾತೆಗಳಿಂದ ಒಟ್ಟು 72 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡು ಟೋಪಿ ಹಾಕಲಾಗಿದೆ. ಕೊನೆಗೆ ನಾನು ವಂಚಕರ ಬಲೆಗೆ ಬಿದ್ದಿದ್ದೇನೆ ಎಂದು ಅರಿತ ನಿವೃತ್ತ ಪೈಲೆಟ್​ ಶಕ್ತಿಸಿಂಗ್ ಲಂಬಾ, ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment