/newsfirstlive-kannada/media/post_attachments/wp-content/uploads/2025/05/Soumya-Shekhar-Sahu.jpg)
ಮದುವೆಗೆ ಬಂದ ಅತಿಥಿಗಳು ಗಿಫ್ಟ್ ಕೊಡೋದು ಕಾಮನ್. ಮದುವೆ ಸಂಭ್ರಮ ಎಲ್ಲಾ ಮುಗಿದ ಮೇಲೆ ಆ ಗಿಫ್ಟ್ ಬಾಕ್ಸ್‌ಗಳನ್ನ ಓಪನ್ ಮಾಡಲಾಗುತ್ತೆ. ಅದೇ ರೀತಿ ಮದುವೆ ಗಿಫ್ಟ್ ಬಾಕ್ಸ್‌ನಲ್ಲಿ ಬಾಂಬ್ ಕಳಿಸಿ ಬ್ಲಾಸ್ಟ್ ಮಾಡಿದ್ದ ಘಟನೆ ಒಡಿಶಾದಲ್ಲಿ ನಡೆದಿದೆ. ಇದೀಗ ಗಿಫ್ಟ್ ರೂಪದಲ್ಲಿ ಬಾಂಬ್ ಕಳಿಸಿದ್ದ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್‌ಗೆ ಜೀವಾವಧಿ ಶಿಕ್ಷೆ ಕೂಡ ಪ್ರಕಟವಾಗಿದೆ.
2018ರಲ್ಲಿ ಒಡಿಶಾದ ಪಟ್ನಾಗರ್‌ನಲ್ಲಿ ಈ ಘಟನೆ ನಡೆದಿತ್ತು. ಮದುವೆ ಗಿಫ್ಟ್ ಎಂದು ಪಾರ್ಸೆಲ್ ಓಪನ್ ಮಾಡಿದ್ದ ನವ ವಿವಾಹಿತ ಸೌಮ್ಯ ಶೇಖರ್ ಸಾಹು, ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸೌಮ್ಯ ಶೇಖರ್ ಸಾಹು ಅವರನ್ನು ಮದುವೆಯಾಗಿದ್ದ ನವವಿಹಾತ ಪತ್ನಿ ರೀಮಾಗೆ ಗಾಯಗಳಾಗಿದ್ದವು.
ಮಾಸ್ಟರ್ ಮೈಂಡ್ ಮಾಡಿದ್ದೇನು?
56 ವರ್ಷದ ಪೂಂಜಿಲಾಲ್ ಮೆಹ್ರಾ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿದ್ದ. ಒಡಿಶಾದ ಪೂಂಜಿಲಾಲ್ ಮೆಹ್ರಾ ರೈಲಿನಲ್ಲಿ ಛತ್ತೀಸ್‌ಗಡದ ರಾಯಪುರಕ್ಕೆ ಹೋಗಿ ಬಾಂಬ್ ಅನ್ನು ಮದುವೆ ಗಿಫ್ಟ್ ರೀತಿ ಪಾರ್ಸೆಲ್ ಮಾಡಿದ್ದ. ಸಿಸಿಟಿವಿ ಇಲ್ಲದೇ ಇರೋ ಕೊರಿಯರ್ ಅಂಗಡಿಯಿಂದ ಆಗಷ್ಟೇ ಮದುವೆಯಾಗಿದ್ದ ಸೌಮ್ಯ ಶೇಖರ್ ಸಾಹು ಹೆಸರಿಗೆ ಗಿಫ್ಟ್ ಬಾಕ್ಸ್ ಅನ್ನು ಪಾರ್ಸೆಲ್ ಕಳಿಸಿದ್ದ.
ಸೌಮ್ಯ ಶೇಖರ್ ಸಾಹು ಅವರ ಮದುವೆಯಾದ 3 ದಿನದ ಬಳಿಕ ಪೂಂಜಿಲಾಲ್ ಮೆಹ್ರಾ ಕಳುಹಿಸಿದ್ದ ಗಿಫ್ಟ್ ಪಾರ್ಸೆಲ್ ಮನೆಗೆ ತಲುಪಿತ್ತು. ಸೌಮ್ಯ ಶೇಖರ್ ಸಾಹು ಅಡುಗೆ ಮನೆಯಲ್ಲಿ ಪಾರ್ಸೆಲ್ ತೆರೆದಿದ್ದು, ಈ ವೇಳೆ ಬಾಂಬ್ ಸ್ಫೋಟಗೊಂಡು ಸೌಮ್ಯ ಶೇಖರ್ ಸಾಹು, ಅಜ್ಜಿ ಜೀಮಾಮಣಿ ಸಾಹು ಅವರ ದೇಹ ಛಿದ್ರ, ಛಿದ್ರವಾಗಿತ್ತು. ನವ ವಿವಾಹಿತೆ ರೀಮಾ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: ಕೊನೆಗೂ ಡೆವಿಲ್‌ಗೆ ಗುಡ್‌ನ್ಯೂಸ್.. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಅನುಮತಿ ನೀಡಿ ಕೋರ್ಟ್ ಆದೇಶ
ಒಡಿಶಾದ ಬೋಲಂಗೀರ್ ಜಿಲ್ಲೆಯ ಪಟ್ಟಣಘರ್ ಪೊಲೀಸರು ಈ ಕೇಸ್ ಬಗ್ಗೆ ತನಿಖೆ ನಡೆಸಿದ್ದರು. ಆದರೆ ನಿವೃತ್ತ ಪ್ರಿನ್ಸಿಪಾಲ್ ಪೂಂಜಿಲಾಲ್ ಮೆಹ್ರಾ ಅವರು ತಪ್ಪು ವಿಳಾಸ ನೀಡಿ ಕೊರಿಯರ್ ಮಾಡಿದ್ದರು. ಸಿಸಿಟಿವಿ ಇಲ್ಲದೇ ಇರೋ ಕೊರಿಯರ್ ಅಂಗಡಿಯಿಂದ ರಾಯಪುರದ ಎಸ್.ಕೆ ಶರ್ಮಾ ಹೆಸರಿನಲ್ಲಿ ಬಾಂಬ್ ಪಾರ್ಸೆಲ್ ಮಾಡಿದ್ದರು.
ಗಿಫ್ಟ್ ಬಾಂಬ್‌ಗೆ ಕಾರಣವೇನು?
ಬಾಂಬ್ ಇಟ್ಟ ಪೂಂಜಿಲಾಲ್ ಮೆಹ್ರಾ ಮತ್ತು ಮೃತ ನವ ವಿವಾಹಿತ ಸೌಮ್ಯ ಶೇಖರ್ ತಾಯಿ ಒಂದೇ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದರು. ಪೂಂಜಾಲಾಲ್ ಮೆಹ್ರಾನನ್ನು ಪ್ರಿನ್ಸಿಪಾಲ್ ಹುದ್ದೆಯಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಸೌಮ್ಯ ಶೇಖರ್ ತಾಯಿ ನೇಮಕವಾಗಿದ್ರು. ಇದರಿಂದ ಇಬ್ಬರ ಮಧ್ಯೆ ಸಾರ್ವಜನಿಕವಾಗಿ ಜಗಳ ಕೂಡ ಆಗಿತ್ತು. ಈ ದ್ವೇಷಕ್ಕೆ ಅವರ ಮಗನಿಗೆ ಬಾಂಬ್ ಪಾರ್ಸೆಲ್ ಕಳಿಸಿ ಕೊಂದಿದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತನಿಖೆಯ ಪ್ರಾರಂಭದಲ್ಲಿ ಪೊಲೀಸರು ಪೂಂಜಿಲಾಲ್ ಮೆಹ್ರಾನ ಮೇಲೆ ಹೆಚ್ಚು ಅನುಮಾನ ಪಟ್ಟಿರಲಿಲ್ಲ. ಕೊನೆಗೆ ಪೂಂಜಿಲಾಲ್ ಮೆಹ್ರಾನೇ ಬಾಂಬ್ ಪಾರ್ಸೆಲ್ ಕಳಿಸಿದ್ದನ್ನು ಪತ್ತೆ ಹಚ್ಚಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಒಡಿಶಾ ಕೋರ್ಟ್ ಈಗ ಪೂಂಜಿಲಾಲ್ ಮೆಹ್ರಾಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ